Viral: ತರಗತಿಯೊಳಗೆ ವಿದ್ಯಾರ್ಥಿಗಳಿಂದ ಕಾಲಿಗೆ ಮಸಾಜ್‌ ಮಾಡಿಸಿಕೊಂಡ ಟೀಚರ್

ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡಬೇಕಾದ ಶಿಕ್ಷಕಿಯೊಬ್ಬರು ಮಕ್ಕಳಿಗೆ ಪಾಠ ಮಾಡುವ ಬದಲು ತರಗತಿಯಲ್ಲಿ ಮಲಗಿ ತನ್ನ ಕಾಲಿಗೆ ವಿದ್ಯಾರ್ಥಿಗಳಿಂದ ಮಸಾಜ್‌ ಮಾಡಿಸಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಶಿಕ್ಷಕಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲೇಬೇಕು ಇದು ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 10, 2024 | 4:34 PM

ಶಾಲೆಗಳು ದೇವಾಲಯವಿದ್ದಂತೆ. ಈ ಪವಿತ್ರ ಸ್ಥಳದಲ್ಲಿ ಶಿಕ್ಷಕರಾದವರು ಮಕ್ಕಳಿಗೆ ಕಲಿಕೆಯ ಜೊತೆಗೆ ಒಳ್ಳೆಯ ಜೀವನ ಪಾಠವನ್ನು ಕೂಡಾ ಕಲಿಸಿಕೊಡಬೇಕು. ಆದ್ರೆ ಕೆಲವು ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡದೆ ವಿದ್ಯಾರ್ಥಿಗಳಿಂದ ಕೆಲಸ ಮಾಡಿಸಿಕೊಳ್ಳುವಂತಹ ನಾಚಿಕೆಗೇಡಿನ ಕೆಲಸಗಳನ್ನು ಮಾಡುತ್ತಿರುತ್ತಾರೆ. ಶಿಕ್ಷಕರ ಕರ್ತವ್ಯ ಲೋಪಕ್ಕೆ ಸಂಬಂಧಿಸಿದ ಸುದ್ದಿಗಳು ಈ ಹಿಂದೆಯೂ ವೈರಲ್‌ ಆಗಿದ್ದವು. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಮಕ್ಕಳಿಗೆ ಪಾಠ ಹೇಳಿಕೊಡುವ ಬದಲು ಶಿಕ್ಷಕಿಯೊಬ್ಬರು ತರಗತಿಯೊಳಗೆ ಮಲಗಿ ವಿದ್ಯಾರ್ಥಿಗಳಿಂದ ತನ್ನ ಕಾಲಿಗೆ ಮಸಾಜ್‌ ಮಾಡಿಸಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಶಿಕ್ಷಕಿಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಆಘಾತಕಾರಿ ಘಟನೆ ಜೈಪುರದಲ್ಲಿ ನಡೆದಿದ್ದು, ಇಲ್ಲಿನ ಕರ್ತಾರ್‌ಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಪಾಠ ಮಾಡುವ ಬದಲು ತರಗತಿಯಲ್ಲಿ ಮಲಗಿ ವಿದ್ಯಾರ್ಥಿಗಳಿಂದಲೇ ತಮ್ಮ ಕಾಲಿಗೆ ಮಸಾಜ್‌ ಮಾಡಿಸಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದ್ದು, ಶಿಕ್ಷಕರೇ ಹೀಗೆ ಮಾಡಿದ್ರೆ ವಿದ್ಯಾರ್ಥಿಗಳ ಭವಿಷ್ಯ ಏನಾಗಬೇಡ ಎಂದು ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರಶಾಂತ್‌ ರೈ (prashanthrai280) ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಶಿಕ್ಷಕಿಯೊಬ್ಬರು ವಿದ್ಯಾರ್ಥಿಗಳಿಂದ ಮಸಾಜ್‌ ಮಾಡಿಸಿಕೊಳ್ಳುತ್ತಿರುವ ದೃಶ್ಯವನ್ನು ಕಾಣಬಹುದು. ಸರ್ಕಾರಿ ಶಾಲೆಯ ತರಗತಿಯೊಂದರಲ್ಲಿ ಶಿಕ್ಷಕಿಯೊಬ್ಬರು ನೆಲದ ಮೇಲೆ ಮಲಗಿ ಮಕ್ಕಳಿಂದ ಮಸಾಜ್‌ ಮಾಡಿಸಿಕೊಂಡಿದ್ದಾರೆ. ಹೌದು ಮಕ್ಕಳು ಶಿಕ್ಷಕಿಯ ಕಾಲಿನ ಮೇಲೆ ನಿಂತು ಮಸಾಜ್‌ ಮಾಡಿದ್ದಾರೆ.

ಇದನ್ನೂ ಓದಿ: ಮನೆಕೆಲಸದವರಿಗೆ ದುಬಾರಿ ಬೆಲೆಯ ಐಫೋನ್‌ ಗಿಫ್ಟ್‌ ಕೊಟ್ಟ ದಂಪತಿ; ವಿಡಿಯೋ ವೈರಲ್‌

ಇಂದು ಮುಂಜಾನೆ ಶೇರ್‌ ಮಾಡಲಾದ ಈ ವಿಡಿಯೋ ಸದ್ಯ ಭಾರೀ ವೈರಲ್‌ ಆಗುತ್ತಿದ್ದು, ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವ ಬದಲು ವಿದ್ಯಾರ್ಥಿಗಳಿಂದಲೇ ಕೆಲಸ ಮಾಡಿಸಿಕೊಂಡ ಆ ಶಿಕ್ಷಕಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲೇಬೇಕು, ಇದು ಆ ಶಾಲೆಯ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ