ಲಂಡನ್: ಮಹಿಳೆಯೊಬ್ಬಳು ಪ್ಯಾರಸಿಟಮಾಲ್ ಮಾತ್ರೆಯ ಮಿತಿಮೀರಿದ ಸೇವನೆಯಿಂದ ಸಾವನ್ನಪ್ಪಿರುವ ಘಟನೆ ಬ್ರಿಟನ್ ನ ವಿಡ್ನೆಸ್ ಪಟ್ಟಣದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೃತ ಮಹಿಳೆಯನ್ನು ಲಾರಾ ಹಿಗ್ಗಿಸನ್ (30) ಎಂದು ಗುರುತಿಸಲಾಗಿದೆ. ನ್ಯುಮೋನಿಯಾದಿಂದ ಬಳಲುತ್ತಿದ್ದ ಮಹಿಳೆ ಹತ್ತಿರದ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯ ವೈದ್ಯರು ಇಂಟ್ರಾವೆನಸ್ ಟ್ಯೂಬ್ ಮೂಲಕ ಮೂರು ಬಾರಿ 1 ಗ್ರಾಂ ಪ್ರಮಾಣದಲ್ಲಿ ಪ್ಯಾರಾಸಿಟಿಮಲ್ ನೀಡಿದ್ದರು. ಕೇವಲ 40 ಕೆಜಿ ತೂಕವಿದ್ದ ಮಹಿಳೆಗೆ ಇಷ್ಟು ಪ್ರಮಾಣದಲ್ಲಿ ಪ್ಯಾರಾಸಿಟಿಮಲ್ ನೀಡಿರುವುದು ಆಕೆಯ ಸಾವಿಗೆ ಕಾರಣವಾಗಿದೆ.
ಲಾರಾ ಅವರ ಸಾವಿಗೆ ಕಾರಣವೆಂದರೆ ಸೆಪ್ಸಿಸ್, ಸಿರೋಸಿಸ್ ಮತ್ತು ಪ್ಯಾಂಕ್ರಿಯಾಟೈಟಿಸ್‌ನೊಂದಿಗೆ ಅಂಗಾಂಗ ವೈಫಲ್ಯ ಎಂದು ತಿಳಿದುಬಂದಿದೆ. ಚಿಕಿತ್ಸೆ ವೇಳೆ ಪ್ಯಾರಸಿಟಮಾಲ್ ಮಿತಿಮೀರಿದ ಸೇವನೆಯಿಂದಾಗಿ ಲಾರಾ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ಆಡಳಿತವು ಕಂಡುಹಿಡಿದಿದೆ. 19 ಏಪ್ರಿಲ್ 2017 ರಂದು ನಡೆದ ಈ ಘಟನೆಯ ಇತ್ತೀಚೆಗೆ ಬೆಳಕಿಗೆ ಬಂದಿವೆ.
ಇದನ್ನೂ ಓದಿ: ತಂದೆ, ಚಿಕ್ಕಪ್ಪ, ಅಜ್ಜನಿಂದ ಬಾಲಕಿ ಮೇಲೆ ಅತ್ಯಾಚಾರ, ಆಕೆ ಈಗ ಎರಡು ತಿಂಗಳ ಗರ್ಭಿಣಿ
ಸಾಮಾನ್ಯವಾಗಿ ತಲೆನೋವು ಮತ್ತು ಜ್ವರಕ್ಕೆ ವೈದ್ಯರು ಪ್ಯಾರೆಸಿಟಮಾಲ್ ಪೂರಕಗಳನ್ನು ಶಿಫಾರಸು ಮಾಡುತ್ತಾರೆ. ಮಿತ ಪ್ರಮಾಣದಲ್ಲಿ ತೆಗೆದುಕೊಂಡಾಗ ಇವುಗಳನ್ನು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಇವುಗಳ ಅತಿಯಾದ ಅಥವಾ ದೀರ್ಘಾವಧಿಯ ಬಳಕೆಯು ಅನೇಕ ಅಡ್ಡ ಪರಿಣಾಮಗಳಿಗೆ ಕಾರಣವಾಗಬಹುದು. ವಾಕರಿಕೆ ಮತ್ತು ಕಿಬ್ಬೊಟ್ಟೆಯ ನೋವಿನಂತಹ ಅಡ್ಡಪರಿಣಾಮಗಳು ಸಂಭವಿಸಬಹುದು. ಕೆಲವು ಜನರು ತುರಿಕೆ, ಊತ, ಉಸಿರಾಟದ ತೊಂದರೆ ಮುಂತಾದ ಅಲರ್ಜಿಯ ಪ್ರತಿಕ್ರಿಯೆಗಳನ್ನು ಸಹ ಅನುಭವಿಸುತ್ತಾರೆ. ಪ್ಯಾರೆಸಿಟಮಾಲ್ ಮಿತಿಮೀರಿದ ಸೇವನೆಯು ಯಕೃತ್ತು ಮತ್ತು ಮೂತ್ರಪಿಂಡದ ವೈಫಲ್ಯಕ್ಕೆ ಕಾರಣವಾಗಬಹುದು. ಪ್ಯಾರೆಸಿಟಮಾಲ್ ಥ್ರಂಬೋಸೈಟೋಪೆನಿಯಾ, ಲ್ಯುಕೋಪೆನಿಯಾ ನಂತಹ ರಕ್ತದ ಅಸ್ವಸ್ಥತೆಗಳಿಗೆ ಕಾರಣವಾಗಬಹುದು.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:44 am, Sun, 29 December 24