3 ಮದುವೆಯ ಬಳಿಕ ಮೊದಲ ಪತಿಯೇ ಬೇಕು ಎಂದು ಕೋರ್ಟ್​​ ಮೆಟ್ಟಿಲೇರಿದ ಮಹಿಳೆ

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಮಹಿಳೆ ಪ್ರೀತಿಸಿದವನೊಂದಿಗೆ ಓಡಿ ಹೋಗಿ ಮೊದಲ ಮದುವೆಯಾಗಿದ್ದಳು. ಇದಾದ ನಂತರ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ನ ಶಹಪುರ್ ವಾರ್ಡ್‌ನಲ್ಲಿ ಅವರ ವಿವಾಹವನ್ನು ನೋಂದಾಯಿಸಲಾಗಿತ್ತು. ಆದರೆ ಈ ವಿಷಯ ಮಹಿಳೆಯ ಮನೆಯವರಿಗೆ ತಿಳಿದಾಗ ಬಲವಂತವಾಗಿ ಮಹಿಳೆಯನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.

3 ಮದುವೆಯ ಬಳಿಕ ಮೊದಲ ಪತಿಯೇ ಬೇಕು ಎಂದು ಕೋರ್ಟ್​​ ಮೆಟ್ಟಿಲೇರಿದ ಮಹಿಳೆ

Updated on: Apr 28, 2024 | 5:36 PM

ಅಹಮದಾಬಾದ್: ಮದುವೆಗೆ ಸಂಬಂಧಿಸಿದ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಮಹಿಳೆ ತನ್ನ ಮೂರನೇ ಮದುವೆಯ ನಂತರ ತನ್ನ ಮೊದಲ ಪತಿಯೇ ಬೇಕು ಎಂದು ಕೋರ್ಟ್​​ ಮೆಟ್ಟಿಲೇರಿದ್ದಾಳೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್‌ನಲ್ಲಿ ವಿಚಾರಣೆ ಕೂಡ ನಡೆದಿದ್ದು, ಇದೀಗಾ ಮಹಿಳೆ ತನ್ನ ಮೊದಲ ಪತಿಯೊಂದಿಗಿದ್ದು, ಜೊತೆಗೆ ಇವರಿಗೆ ಭದ್ರತೆ ಒದಗಿಸಲಾಗಿದೆ ಎಂದು ವರದಿಯಾಗಿದೆ.

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಮಹಿಳೆ ಪ್ರೀತಿಸಿದವನೊಂದಿಗೆ ಓಡಿ ಹೋಗಿ ಮೊದಲ ಮದುವೆಯಾಗಿದ್ದಳು. ಇದಾದ ನಂತರ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ನ ಶಹಪುರ್ ವಾರ್ಡ್‌ನಲ್ಲಿ ಅವರ ವಿವಾಹವನ್ನು ನೋಂದಾಯಿಸಲಾಗಿತ್ತು. ಆದರೆ ಈ ವಿಷಯ ಮಹಿಳೆಯ ಮನೆಯವರಿಗೆ ತಿಳಿದಾಗ ಬಲವಂತವಾಗಿ ಮಹಿಳೆಯನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.

ಇದಾದ ನಂತರ ಮಹಿಳೆಯ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದು, ಪತ್ನಿಯನ್ನು ಮರಳಿಸುವಂತೆ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ. ಮಹಿಳೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನ್ಯಾಯಾಲಯ ಪೊಲೀಸರಿಗೆ ಆದೇಶಿಸಿದೆ. ಪೊಲೀಸರು ಮಹಿಳೆಯನ್ನು ಹುಡುಕಿದರು ಮತ್ತು ಮನೆಯಿಂದ ವಶಪಡಿಸಿಕೊಂಡರು. ಇದಾದ ಬಳಿಕ ಮಹಿಳೆ ನ್ಯಾಯಾಲಯಕ್ಕೆ ಹಾಜರಾಗಿ ತನ್ನ ಮೊದಲ ಮದುವೆಯನ್ನು ಖಾತ್ರಿಪಡಿಸಿಕೊಂಡಿದ್ದು, ಮೊದಲು ತನ್ನ ಪತಿಯನ್ನು ಗುರುತಿಸಿ ನಂತರ ಸತ್ಯವನ್ನು ಬಹಿರಂಗಪಡಿಸಿದ್ದು, ಇದನ್ನು ಕೇಳಿ ಎಲ್ಲರೂ ಅಚ್ಚರಿಗೊಂಡಿದ್ದಾರೆ.

ಮೊದಲ ಮದುವೆಯಾದ ನಂತರ ಕೋಪಗೊಂಡ ಮನೆಯವರು ಬಲವಂತವಾಗಿ ಕರೆದುಕೊಂಡು ಹೋಗಿ ಎರಡನೇ ಮದುವೆ ಮಾಡಿಸಿದ್ದಾರೆ ಎಂದು ಮಹಿಳೆ ಹೇಳಿದ್ದಾಳೆ. ಆದರೆ, ಕೆಲ ದಿನಗಳ ನಂತರ ಎರಡನೇ ಪತಿಯೂ ಮಹಿಳೆಯನ್ನು ತೊರೆದಿದ್ದ. ಇದಾದ ನಂತರ ಮಹಿಳೆಯನ್ನು ಬನಸ್ಕಾಂತ ಜಿಲ್ಲೆಗೆ ಕರೆದೊಯ್ದು ಮೂರನೇ ಬಾರಿಗೆ ವಿವಾಹ ಮಾಡಿಸಲಾಗಿದೆ.

ಇದನ್ನೂ ಓದಿ: ಅಂಬಾನಿ ಮನೆಯಲ್ಲಿ ಅದ್ದೂರಿಯಾಗಿ ಆಚರಿಸಲಾಗುವ ‘ಆಮ್ ಮನೋರಥ’ ಹಬ್ಬದ ಬಗ್ಗೆ ಇಲ್ಲಿದೆ ಮಾಹಿತಿ

ಆದರೆ, ನ್ಯಾಯಾಲಯದಿಂದ ಆದೇಶವನ್ನು ಪಡೆದ ನಂತರ, ಪೊಲೀಸರು ಮಹಿಳೆಯ ಮೂರನೇ ಗಂಡನ ಮನೆಗೆ ತಲುಪಿಸಿದ್ದಾರೆ. ಆದರೆ ತಾನು ಮೊದಲ ಪತಿಯೊಂದಿಗೆ ಇರಲು ಬಯಸಿರುವುದಾಗಿ ಮಹಿಳೆ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಮಹಿಳೆಯ ಕೋರಿಕೆಗೆ ಮಣಿದ ನ್ಯಾಯಾಲಯ, ಭದ್ರತೆ ಒದಗಿಸುವಂತೆ ಸರ್ಕಾರಿ ವಕೀಲರಿಗೆ ಆದೇಶ ನೀಡಿದ್ದು, ಆಕೆಯ ಮೊದಲ ಪತಿಯೊಂದಿಗೆ ಜೀವನ ನಡೆಸಲು ಅವಕಾಶ ನೀಡಿದೆ.ಇದಲ್ಲದೇ ಆಕೆಗೆ ಅಪಾಯ ಸಂಭವಿಸಿದರೆ ತಕ್ಷಣ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕೂಡ ಹೇಳಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 5:35 pm, Sun, 28 April 24

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us