AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನ್ನ ಕಣ್ಣಿಗೆ ಅವರು ಸುಂದರವಾಗಿದ್ದಾರೆ’: ಭಾವಿ ಪತಿಯನ್ನು ಟ್ರೋಲ್​ ಮಾಡಿದಕ್ಕೆ ನಟಿ ಪ್ರತಿಕ್ರಿಯೆ

ನಿಕೋಲಯ್​​ ಸಚ್​ದೇವ್​ ಅವರಿಗೆ ವಿಚ್ಛೇದನ ಆಗಿದೆ. ಈಗ ವರಲಕ್ಷ್ಮಿ ಶರತ್​ ಕುಮಾರ್​ ಜೊತೆ ಅವರು 2ನೇ ಮದುವೆ ಆಗುತ್ತಿದ್ದಾರೆ. ಅವರ ಫೋಟೋಗಳನ್ನು ನೋಡಿ ನೆಟ್ಟಿಗರು ಟ್ರೋಲ್​ ಮಾಡಿದ್ದಾರೆ. ಈ ವಿಚಾರಗಳ ಕುರಿತು ವರಲಕ್ಷ್ಮಿ ಮಾತನಾಡಿದ್ದಾರೆ. ತಾವು ಮದುವೆ ಆಗಲಿರುವ ವ್ಯಕ್ತಿಯ ಬಗ್ಗೆ ಇರುವ ನೆಗೆಟಿವ್​ ಕಮೆಂಟ್​ಗಳ ಬಗ್ಗೆ ಅವರು ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿಲ್ಲ.

‘ನನ್ನ ಕಣ್ಣಿಗೆ ಅವರು ಸುಂದರವಾಗಿದ್ದಾರೆ’: ಭಾವಿ ಪತಿಯನ್ನು ಟ್ರೋಲ್​ ಮಾಡಿದಕ್ಕೆ ನಟಿ ಪ್ರತಿಕ್ರಿಯೆ
ವರಲಕ್ಷ್ಮಿ ಶರತ್​ಕುಮಾರ್​, ನಿಕೋಲಯ್​ ಸಚ್​ದೇವ್​
ಮದನ್​ ಕುಮಾರ್​
|

Updated on: Apr 28, 2024 | 12:48 PM

Share

ಬಹುಭಾಷಾ ನಟಿ ವರಲಕ್ಷ್ಮಿ ಶರತ್​ಕುಮಾರ್​ ಅವರು ಇತ್ತೀಚಿನ ದಿನಗಳಲ್ಲಿ ವೈಯಕ್ತಿಕ ಕಾರಣಕ್ಕಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಮಾರ್ಚ್​ ಮೊದಲ ವಾರದಲ್ಲಿ ಅವರು ನಿಶ್ಚಿತಾರ್ಥ ಮಾಡಿಕೊಂಡರು. ಬೇಸರದ ಸಂಗತಿ ಏನೆಂದರೆ, ವರಲಕ್ಷ್ಮಿ ಅವರು ಮದುವೆ ಆಗಲಿರುವ ನಿಕೋಲಯ್​​ ಸಚ್​ದೇವ್​ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಜನರು ನೆಗೆಟಿವ್​ ಆಗಿ ಕಮೆಂಟ್​ ಮಾಡುತ್ತಿದ್ದಾರೆ. ಹಾಗಂತ ಅದಕ್ಕೆಲ್ಲ ವರಲಕ್ಷ್ಮಿ ಅವರು ಬೇಸರ ಮಾಡಿಕೊಂಡಿಲ್ಲ. ತಮ್ಮ ಭಾವಿ ಪತಿ ಸುಂದರವಾಗಿಯೇ ಇದ್ದಾರೆ ಎಂದು ಅವರು ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಮುಂಬೈನಲ್ಲಿ ಗ್ಯಾಲರಿಸ್ಟ್​ ಆಗಿರುವ ಹಾಗೂ ಪವರ್​ ಲಿಫ್ಟರ್​ ಆಗಿ ಗುರುತಿಸಿಕೊಂಡಿರುವ ನಿಕೋಲಯ್​​ ಸಚ್​ದೇವ್​ ಜೊತೆ ವರಲಕ್ಷ್ಮಿ ಶರತ್​ ಕುಮಾರ್​ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾರೆ. ನಿಶ್ವಿತಾರ್ಥದ ಬಳಿಕ ಅವರು ಕೆಲವು ಫೋಟೋಗಳನ್ನು ಹಂಚಿಕೊಂಡರು. ಆ ಫೋಟೋದಲ್ಲಿ ನಿಕೋಲಯ್​ ಸಚ್​ದೇವ್​ ಅವರನ್ನು ನೋಡಿ ಅನೇಕರು ಟ್ರೋಲ್​ ಮಾಡಿದ್ದಾರೆ. ಆದರೆ ಅವುಗಳಿಗೆಲ್ಲ ವರಲಕ್ಷ್ಮೀ ಶರತ್​ಕುಮಾರ್​ ತಲೆ ಕೆಡಿಸಿಕೊಂಡಿಲ್ಲ.

ಅತಿ ಚಿಕ್ಕ ಬಟ್ಟೆ ಧರಿಸಿ ಬಂದ ಮೌನಿ ರಾಯ್​; ವೈರಲ್​ ವಿಡಿಯೋ ನೋಡಿ ಟ್ರೋಲ್​ ಮಾಡಿದ ನೆಟ್ಟಿಗರು

ಅಂದಹಾಗೆ, ನಿಕೋಲಯ್​​ ಸಚ್​ದೇವ್​ ಅವರಿಗೆ ಈಗಾಗಲೇ ಮದುವೆ ಆಗಿ, ವಿಚ್ಛೇದನ ಕೂಡ ಆಗಿದೆ. ಈಗ ಅವರು ವರಲಕ್ಷ್ಮಿ ಶರತ್​ ಕುಮಾರ್​ ಜೊತೆ ಎರಡನೇ ಮದುವೆ ಆಗಲು ಸಜ್ಜಾಗಿದ್ದಾರೆ. ಈ ಎಲ್ಲ ವಿಚಾರಗಳ ಬಗ್ಗೆ ವರಲಕ್ಷ್ಮಿ ಮಾತನಾಡಿದ್ದಾರೆ. ‘ನನ್ನ ತಂದೆ ಕೂಡ 2ನೇ ಮದುವೆ ಆದರು. ಅದರಲ್ಲಿ ಯಾವ ತಪ್ಪೂ ಇಲ್ಲ. ನಿಕ್​ (ನಿಕೋಲಯ್​​ ಸಚ್​ದೇವ್​) ಬಗ್ಗೆ ಜನರು ಮಾತಾಡುವುದನ್ನು ನಾನು ಕೇಳಿದ್ದೇನೆ. ನನ್ನ ಕಣ್ಣಿಗೆ ಅವರು ಹ್ಯಾಂಡ್ಸಮ್​ ಆಗಿದ್ದಾರೆ. ನಮ್ಮ ಸಂಬಂಧದ ಬಗ್ಗೆ ನೆಗೆಟಿವ್​ ಕಮೆಂಟ್​ ಮಾಡುವವರ ಬಗ್ಗೆ ನಾನು ಕೇರ್​ ಮಾಡುವುದಿಲ್ಲ’ ಎಂದು ವರಲಕ್ಷ್ಮೀ ಹೇಳಿದ್ದಾರೆ.

‘ಬೇರೆಯವರಿಗೆ ನಾನು ಯಾಕೆ ಉತ್ತರ ಕೊಡಬೇಕು? ಮೊದಲಿನಿಂದಲೂ ನಾನು ಅದನ್ನು ಅವಾಯ್ಡ್​ ಮಾಡಿಕೊಂಡು ಬಂದಿದ್ದೇನೆ. ನಿಕ್​ ತಂದೆ-ತಾಯಿ ಒಂದು ಆರ್ಟ್​ ಗ್ಯಾಲರಿ ನಡೆಸುತ್ತಾರೆ. ನಿಕ್​ ಮತ್ತು ಅವರ ಪುತ್ರಿ ಪವರ್ ಲಿಫ್ಟಿಂಗ್​ನಲ್ಲಿ ಬಂಗಾರದ ಪದಕ ಗೆದ್ದಿದ್ದಾರೆ. ಅವರ ಮಾಜಿ ಪತ್ನಿ ಜೊತೆಗೂ ನಾನು ಆತ್ಮೀಯವಾಗಿ ಇದ್ದೇನೆ. ಅವರು ಒಳ್ಳೆಯ ವ್ಯಕ್ತಿ. ಎಲ್ಲವೂ ಚೆನ್ನಾಗಿದೆ’ ಎಂದಿದ್ದಾರೆ ವರಲಕ್ಷ್ಮಿ. ಈ ವರ್ಷ ತೆರೆಕಂಡು ಸೂಪರ್​ ಹಿಟ್​ ಆದ ‘ಹನುಮಾನ್​’ ಸಿನಿಮಾದಲ್ಲಿ ವರಲಕ್ಷ್ಮಿ ನಟಿಸಿದ್ದಾರೆ. ಕನ್ನಡದ ‘ಮಾಣಿಕ್ಯ’ ಚಿತ್ರದಲ್ಲಿ ಅವರು ಸುದೀಪ್​ ಜತೆ ನಟಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್