Viral News: ರಾತ್ರಿ ಹೆಡ್‌ಫೋನ್‌ ಹಾಕಿಕೊಂಡು ಮಲಗಿದ್ದ ಯುವತಿ ಬೆಳಗ್ಗೆ ಎಚ್ಚರಗೊಂಡಾಗ ಕಿವುಡಿ

|

Updated on: Mar 14, 2024 | 11:20 AM

ಶಾಂಡಾಂಗ್​​ನ ಸ್ಥಳೀಯ ಸಂಸ್ಥೆಯಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ ವಾಂಗ್. ಪ್ರತಿ ರಾತ್ರಿ ಹೆಡ್‌ಫೋನ್‌ ಹಾಕಿಕೊಂಡು ಹಾಡುಗಳನ್ನು ಕೇಳುತ್ತಾ ಮಲಗುವ ಅಭ್ಯಾಸವನ್ನು ಹೊಂದಿದ್ದಳು. ಕಾಲೇಜು ದಿನಗಳಿಂದ ಅಂದರೆ ಕಳೆದ ಎರಡು ವರ್ಷಗಳಿಂದ ಹೆಡ್‌ಫೋನ್‌ ಹಾಕಿಕೊಂಡು ಹಾಡುಗಳನ್ನು ಕೇಳುತ್ತಾ ಮಲಗುವ ಅಭ್ಯಾಸವನ್ನು ಹೊಂದಿದ್ದಾಳೆ.

Viral News: ರಾತ್ರಿ ಹೆಡ್‌ಫೋನ್‌ ಹಾಕಿಕೊಂಡು ಮಲಗಿದ್ದ ಯುವತಿ ಬೆಳಗ್ಗೆ ಎಚ್ಚರಗೊಂಡಾಗ ಕಿವುಡಿ
ಶಾಶ್ವತವಾಗಿ ಕಿವುಡುತನ
Image Credit source: Pinterest
Follow us on

ಚೀನಾ: ಶಾಂಡಾಂಗ್​​ನ ನಿವಾಸಿಯಾಗಿರುವ ವಾಂಗ್ ಎಂಬ ಹೆಸರಿನ ಯುವತಿ ಶಾಶ್ವತವಾಗಿ ಕಿವುಡುತನದಿಂದ ಬಳಲುತ್ತಿದ್ದಾಳೆ. ಇತ್ತೀಚೆಗಷ್ಟೇ ಆಕೆಗೆ ಶ್ರವಣ ಸಮಸ್ಯೆ ಕಾಣಿಸಿಕೊಂಡಿದ್ದು, ಕಿವಿ ತಪಾಸಣೆ ಮಾಡಿಸಿಕೊಳ್ಳಲು ಆಸ್ಪತ್ರೆಗೆ ತೆರಳಿದ್ದಳು. ಕೆಲಸದಲ್ಲಿ ತೊಂದರೆಯಾಗುತ್ತಿದೆ ಯಾರು ಮಾತನಾಡುವುದು ಸರಿಯಾಗಿ ಕೇಳುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಳು. ವೈದ್ಯರು ಆಕೆಯ ಕಿವಿಗಳನ್ನು ಪರೀಕ್ಷಿಸಿದಾಗ ಆಕೆಯ ಎಡ ಕಿವಿಯ ನರಗಳು ಶಾಶ್ವತವಾಗಿ  ಹಾನಿಯಾಗಿರುವುದು ಕಂಡುಬಂದಿದೆ. ಇದರಿಂದಾಗಿ ಶಾಶ್ವತ ಕಿವುಡಿಯಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಆಡಿಟಿ ಸೆಂಟ್ರಲ್ ವೆಬ್‌ಸೈಟ್‌ನಲ್ಲಿ ವರದಿಯಾಗಿದೆ.

ಶಾಂಡಾಂಗ್​​ನ ಸ್ಥಳೀಯ ಸಂಸ್ಥೆಯಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ ವಾಂಗ್. ಪ್ರತಿ ರಾತ್ರಿ ಹೆಡ್‌ಫೋನ್‌ ಹಾಕಿಕೊಂಡು ಹಾಡುಗಳನ್ನು ಕೇಳುತ್ತಾ ಮಲಗುವ ಅಭ್ಯಾಸವನ್ನು ಹೊಂದಿದ್ದಳು. ಕಾಲೇಜು ದಿನಗಳಿಂದ ಅಂದರೆ ಕಳೆದ ಎರಡು ವರ್ಷಗಳಿಂದ ಹೆಡ್‌ಫೋನ್‌ ಹಾಕಿಕೊಂಡು ಹಾಡುಗಳನ್ನು ಕೇಳುತ್ತಾ ಮಲಗುವ ಅಭ್ಯಾಸವನ್ನು ಹೊಂದಿದ್ದಾಳೆ.

ಇದನ್ನೂ ಓದಿ: ಸಂಪೂರ್ಣವಾಗಿ ಚಿನ್ನ, ವಜ್ರದಿಂದ ವಿನ್ಯಾಸಗೊಳಿಸಿದ ಬ್ಲೌಸ್‌ ತೊಟ್ಟು ಮಿಂಚಿದ ಅಂಬಾನಿಯ ಏಕೈಕ ಪುತ್ರಿ

ಇತ್ತೀಚೆಗಷ್ಟೇ ಎಂದಿನ ದಿನಚರಿಯಂತೆ ರಾತ್ರಿ ಹೆಡ್‌ಫೋನ್‌ ಹಾಕಿಕೊಂಡು ಹಾಡುಗಳನ್ನು ಕೇಳುತ್ತಾ ನಿದ್ರೆಗೆ ಜಾರಿದ್ದಾಳೆ. ಬೆಳಿಗ್ಗೆ ಎದ್ದಾಗ ಕಿವಿ ನೋವು ಕಾಣಿಸಿಕೊಂಡಿದ್ದು , ಜೊತೆಗೆ ಯಾರು ಮಾತನಾಡಿದರೂ ಸಹ ಸರಿಯಾಗಿ ಕೇಳುತ್ತಿಲ್ಲ ಎಂಬುದು ತಿಳಿದುಬಂದಿದೆ. ಆಸ್ಪತ್ರೆಗೆ ಭೇಟಿ ನೀಡಿದಾಗ ಆಕೆಯ ಕಿವಿಗಳು ಶಾಶ್ವತವಾಗಿ ಹಾನಿಗೊಳಗಾಗಿರುವುದು ವೈದ್ಯರಿಂದ ತಿಳಿದುಬಂದಿದೆ. ಈಗ ಯಾರ ಮಾತುಗಳನ್ನು ಕೇಳಬೇಕೆಂದರೆ ಶ್ರವಣ ಸಾಧನಗಳನ್ನು ಬಳಸಬೇಕು.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:19 am, Thu, 14 March 24