Smart Toilet: ಮೂತ್ರ ಪರೀಕ್ಷೆ ಮಾಡುವ ಸಾಮರ್ಥ್ಯ ಹೊಂದಿರುವ ಹೈಟೆಕ್ ಟಾಯ್ಲೆಟ್; ವಿಡಿಯೋ ವೈರಲ್

ಚೀನಾವು ಹೊಸ ಹೊಸ ತಂತ್ರಜ್ಞಾನಗಳನ್ನು ಆವಿಷ್ಕಾರ ಮಾಡುವ ಮೂಲಕ ಆಗಾಗ್ಗೆ ಸುದ್ದಿಯಲ್ಲಿರುತ್ತದೆ. ಇದೀಗ ಚೀನಾವು ಸ್ಮಾರ್ಟ್ ಟಾಯ್ಲೆಟ್ ಒಂದನ್ನು ಅಭಿವೃದ್ಧಿ ಪಡಿಸಿದ್ದು, ಈ ಶೌಚಾಲಯದ ವಿಶೇಷವೆಂದರೆ, ಇದು ಮೂತ್ರ ಪರೀಕ್ಷೆಯನ್ನು ಮಾಡುವ ಸಾಮರ್ಥ್ಯವನ್ನು ಸಹ ಹೊಂದಿದ್ದು, ಇದರಿಂದ ಮಧುಮೇಹ ಸೇರಿದಂತೆ ಇನ್ನಿತರ ಕಾಯಿಲೆಗಳ ಲಕ್ಷಣಗಳನ್ನು ಮೊದಲೇ ತಿಳಿದುಕೊಳ್ಳಬಹುದಾಗಿದೆ. ಈ ಸ್ಮಾರ್ಟ್ ಟಾಯ್ಲೆಟ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. 

Smart Toilet: ಮೂತ್ರ ಪರೀಕ್ಷೆ ಮಾಡುವ ಸಾಮರ್ಥ್ಯ ಹೊಂದಿರುವ ಹೈಟೆಕ್ ಟಾಯ್ಲೆಟ್; ವಿಡಿಯೋ ವೈರಲ್
ವೈರಲ್​​​ ವಿಡಿಯೋ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 13, 2024 | 5:54 PM

ತಂತ್ರಜ್ಞಾನ ಕ್ಷೇತ್ರದಲ್ಲಿ ಚೀನಾ ಎತ್ತಿದ ಕೈ. ಹೌದು ಒಂದು ಕಾಲದಲ್ಲಿ ತಂತ್ರಜ್ಞಾನ ಮತ್ತು ವೈಜ್ಞಾನಿಕ ಅಭಿವೃದ್ಧಿಯ ಓಟದಲ್ಲಿ ಅಮೇರಿಕಾ, ಜರ್ಮನಿ, ಜಪಾನ್, ಬ್ರಿಟನ್ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ಮುಂಚೂಣಿಯಲ್ಲಿದ್ದವು. ಆದರೆ ಇಂದು ಚೀನಾವು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಾಬಲ್ಯವನ್ನು ಸಾಧಿಸುತ್ತಿದೆ. ಸ್ಮಾರ್ಟ್ ಫೋನ್, ಇನ್ನಿತರ ಸ್ಮಾರ್ಟ್ ಗ್ಯಾಜೆಟ್ ಗಳು ಸೇರಿದಂತೆ ಹಲವಾರು  ಉತ್ಪನ್ನಗಳನ್ನು ಚೀನಾದ ಕಂಪೆನಿಗಳು  ಉತ್ಪಾದಿಸುತ್ತಿವೆ.  ಹೀಗೆ ಇದೀಗ ಚೀನಾದ ಕಂಪೆನಿಯೊಂದು ಸ್ಮಾರ್ಟ್ ಟಾಯ್ಲೆಟ್ ಅನ್ನು ಸಹ ಅಭಿವೃದ್ಧಿಪಡಿಸಿದ್ದು, ಇದು ಮೂತ್ರ ಪರೀಕ್ಷೆಯನ್ನು ಮಾಡುವ ಸಾಮರ್ಥ್ಯವನ್ನು  ಹೊಂದಿದ್ದು, ಇದರಿಂದ ಮಧುಮೇಹ ಸೇರಿದಂತೆ ಇನ್ನಿತರ ಕಾಯಿಲೆಗಳ ಲಕ್ಷಣಗಳನ್ನು ಮೊದಲೇ ತಿಳಿದುಕೊಳ್ಳಬಹುದಾಗಿದೆ. ಈ ಹೈಟೆಕ್  ಟಾಯ್ಲೆಟ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವರದಿಗಳ ಪ್ರಕಾರ ಬೀಜಿಂಗ್ ಸೇರಿದಂತೆ ಚೀನಾದ ಪ್ರಮುಖ ನಗರಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ, ಮಾಲ್ ಗಳಲ್ಲಿ ಈ ಹೈಟೆಕ್ ಟಾಯ್ಲೆಟ್ ಅನ್ನು ಅಳವಡಿಸಲಾಗಿದ್ದು, ಬೇಕಿದ್ದರೆ ಇದರಲ್ಲಿ ಮೂತ್ರ ತಪಾಸಣೆ ಕೂಡಾ ಮಾಡಿಸಿಕೊಳ್ಳಬಹುದು. ಈ ಹೈಟೆಕ್ ಶೌಚಾಲಯವು ಡಿಜಿಟಲ್ ಡಿಸ್ಪ್ಲೇ ಮತ್ತು ಬಿಲ್ಟ್-ಇನ್ ಪಾವತಿ ವಿಧಾನವನ್ನು ಹೊಂದಿದೆ. ಈ ವಿಶಿಷ್ಟ ಶೌಚಾಲಯದಲ್ಲಿ ಹಿಡನ್ ಸೆನ್ಸರ್ ಗಳನ್ನು ಅಳವಡಿಸಲಾಗಿದ್ದು, ಇವುಗಳ ಮೂಲಕ ಕ್ಯಾಲ್ಸಿಯಂ, ಗ್ಲೂಕೋಸ್, ಪ್ರೋಟೀನ್ ಲೆವೆಲ್ ಗಳನ್ನು ಪರೀಕ್ಷಿಸಬಹುದು. ಅಷ್ಟೇ ಅಲ್ಲದೆ ಹೃದ್ರೋಗ, ಮಧುಮೇಹ ಸೇರಿದಂತೆ ಇನ್ನಿತರ ಕಾಯಿಲೆಗಳ ಲಕ್ಷಣಗಳನ್ನೂ ಮೊದಲೇ ತಿಳಿದುಕೊಳ್ಳಬಹುದು.

ಈ ಕುರಿತ ವಿಡಿಯೋವನ್ನು ತನ್ಸು ಯೆಗೆನ್ (@TansuYegen) ಎಂಬವರು ತಮ್ಮ   X  ಖಾತೆಯಲ್ಲಿ ಹಂಚಿಕೊಂಡಿದ್ದು, ಚೀನಾದಲ್ಲಿನ  ಈ ಹೊಸ ಟಾಯ್ಲೆಟ್ ಗಳು ಮೂತ್ರ ಪರೀಕ್ಷೆಯನ್ನು ಮಾಡುವ ಮೂಲಕ ಆರೋಗ್ಯವನ್ನು ಪರೀಕ್ಷಿಸಲು ನಿಮಗೆ ಅವಕಾಶವನ್ನು ಮಾಡಿಕೊಡುತ್ತದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಈ ಹೈಟೆಕ್ ಟಾಯ್ಲೆಟ್ ಅಲ್ಲಿ ಅಳವಡಿಸಿರುವ ಡಿಜಿಟಲ್  ಡಿಸ್ಪ್ಲೇ ಯನ್ನು ತೋರಿಸಿ ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ, ಅದರಲ್ಲಿ ಹೇಗೆ ಮೂತ್ರವನ್ನು ಪರೀಕ್ಷಿಸಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ನೀಡುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಹೆಣ್ಣುಮಗುವಿಗೆ ತಂದೆಯಾದ ಖುಷಿಯಲ್ಲಿ 1.5 ಕೋಟಿ ಕಾರನ್ನು ಆಟಿಕೆಯಂತೆ ಅಲಂಕರಿಸಿದ ಅಪ್ಪ

ಒಂದು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 4 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ.  ಒಬ್ಬ ಬಳಕೆದಾರರು ʼಈ ತಂತ್ರಜ್ಞಾನ ಭಾರತಕ್ಕೆ ಯಾವಾಗ ಕಾಲಿಡಲಿದೆʼ ಎಂದು ಕೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಆರಂಭಿಕ ರೋಗ ಲಕ್ಷಣಗಳನ್ನು ಪತ್ತೆ ಹಚ್ಚಲು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಲು ಆವಿಷ್ಕಾರ ಮಾಡಿರುವ  ಈ ತಂತ್ರಜ್ಞಾನ ನಿಜಕ್ಕೂ ತುಂಬಾ ಚೆನ್ನಾಗಿದೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಓ ದೇವರೆ ಇನ್ನೂ ಈ ಕಣ್ಣಲ್ಲಿ ಏನೇನು ನೋಡಬೇಕಿದೆಯೋ ಎಂದು ತಮಾಷೆ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ