Bihar: ಮದುವೆಗೆ ಬಂದ ವೀಡಿಯೊಗ್ರಾಫರ್, ವರನ ಅಪ್ರಾಪ್ತ ಸಹೋದರಿಯೊಂದಿಗೆ ಪರಾರಿ
ವರನ ಸಹೋದರಿ ನಾಪತ್ತೆಯಾದ ದಿನದಿಂದ ವಿಡಿಯೋಗ್ರಾಫರ್ ಕೂಡ ಕಾಣದೇ ಇದ್ದಿದ್ದರಿಂದ ಅನುಮಾನ ಹುಟ್ಟಿಕೊಂಡಿದೆ. ಬಳಿಕ ಬಾಲಕಿಯ ಸಂಬಂಧಿಕರು ಅಹಿಯಾಪುರ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದಾರೆ. ವಿಡಿಯೋಗ್ರಾಫರ್ ಬಾಲಕಿಗೆ ಸುಳ್ಳು ಹೇಳಿ ಅಪಹರಿಸಿರುವುದಾಗಿ ದೂರಿನಲ್ಲಿ ದಾಖಲಿಸಲಾಗಿದೆ.
ಮುಜಾಫರ್‌ಪುರ: ಮದುವೆಯ ಚಿತ್ರೀಕರಣಕ್ಕೆಂದು ಬಂದಿದ್ದ ವೀಡಿಯೊಗ್ರಾಫರ್ ಯುವಕ ಅಲ್ಲೇ ಮಂಟಪದಲ್ಲಿದ್ದ ವರನ ಅಪ್ರಾಪ್ತ ವಯಸ್ಸಿನ ಸಹೋದರಿಯೊಂದಿಗೆ ಓಡಿಹೋಗಿರುವ ಘಟನೆ ಬಿಹಾರದ ಮುಜಾಫರ್‌ಪುರದಲ್ಲಿ ನಡೆದಿದೆ. ಅಹಿಯಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಚಂದವಾರ ಘಾಟ್ ದಾಮೋದರಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಮದುವೆ ಸಮಾರಂಭ ಮುಗಿಯುತ್ತಿದ್ದಂತೆ ವರನ ಸಹೋದರ ಎಲ್ಲೂ ಕಾಣದೇ ಇರುವ ಕಾರಣ ಗಾಬರಿಗೊಂಡ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ವಿಡಿಯೋಗ್ರಾಫರ್ ಕೂಡ ನಾಪತ್ತೆಯಾಗಿರುವುದರಿಂದ ಹೆಚ್ಚಿನ ತನಿಖೆ ನಡೆಸಿದಾಗ ವೀಡಿಯೊಗ್ರಾಫರ್ ಯುವಕ ವರನ ಅಪ್ರಾಪ್ತ ಸಹೋದರಿಯೊಂದಿಗೆ ಪರಾರಿಯಾಗಿರುವುದು ತಿಳಿದುಬಂದಿದೆ.
ಮದುವೆ ಸಮಾರಂಭದ ವಿಡಿಯೋ ಚಿತ್ರೀಕರಣಕ್ಕೆ ವರನ ಸೋದರಮಾವ ತನ್ನ ಗ್ರಾಮದಿಂದ ಛಾಯಾಗ್ರಾಹಕನನ್ನು ಕರೆತಂದಿದ್ದಾನೆ. ಮದುವೆಯ ಕೆಲಸದಲ್ಲಿ ಎಲ್ಲವೂ ಬ್ಯುಸಿಯಾಗಿರುವಾಗ ಫೋಟೋಗ್ರಾಫರ್, ವರನ ತಂಗಿಯ ಜೊತೆ ಮಾತಾಡಿದ್ದಾನೆ. ಮದುವೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ವೀಡಿಯೋಗ್ರಾಫರ್ ಜೊತೆ ವರನ ತಂಗಿ ಓಡಿಹೋಗಿದ್ದಾಳೆ.
ಇದನ್ನೂ ಓದಿ: ಸಂಪೂರ್ಣವಾಗಿ ಚಿನ್ನ, ವಜ್ರದಿಂದ ವಿನ್ಯಾಸಗೊಳಿಸಿದ ಬ್ಲೌಸ್ ತೊಟ್ಟು ಮಿಂಚಿದ ಅಂಬಾನಿಯ ಏಕೈಕ ಪುತ್ರಿ
ಎರಡು ದಿನಗಳಿಂದ ಹಲವೆಡೆ ಹುಡುಕಾಟ ನಡೆಸಿದರೂ ಬಾಲಕಿ ಪತ್ತೆಯಾಗಿಲ್ಲ. ಮತ್ತೊಂದೆಡೆ ವರನ ಸಹೋದರಿ ನಾಪತ್ತೆಯಾದ ದಿನದಿಂದ ವಿಡಿಯೋಗ್ರಾಫರ್ ಕೂಡ ಕಾಣದೇ ಇದ್ದಿದ್ದರಿಂದ ಅನುಮಾನ ಹುಟ್ಟಿಕೊಂಡಿದೆ. ಬಳಿಕ ಬಾಲಕಿಯ ಸಂಬಂಧಿಕರು ಅಹಿಯಾಪುರ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದಾರೆ. ವಿಡಿಯೋಗ್ರಾಫರ್ ಬಾಲಕಿಗೆ ಸುಳ್ಳು ಹೇಳಿ ಅಪಹರಿಸಿರುವುದಾಗಿ ದೂರಿನಲ್ಲಿ ದಾಖಲಿಸಲಾಗಿದೆ. ಬಳಿಕ ಮಾತಾನಾಡಿದ ಅಹಿಯಾಪುರ ಠಾಣೆ ಪ್ರಭಾರಿ ರೋಹನ್ ಕುಮಾರ್ “ಬಾಲಕಿ ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಆರೋಪಿಗಳಿಗಾಗಿ ತೀವ್ರ ಶೋಧ ನಡೆಯುತ್ತಿದೆ” ಎಂದು ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ