Viral Video: ಹೆಣ್ಣುಮಗುವಿಗೆ ತಂದೆಯಾದ ಖುಷಿಯಲ್ಲಿ 1.5 ಕೋಟಿ ಕಾರನ್ನು ಆಟಿಕೆಯಂತೆ ಅಲಂಕರಿಸಿದ ಅಪ್ಪ
ಹೆಣ್ಣು ಮಗು ಜನಿಸಿದರೆ ಮನೆಗೆ ಲಕ್ಷ್ಮೀ ಬಂದಂತೆ ಎಂದು ಹೇಳುತ್ತಾರೆ. ಹೀಗಿದ್ದರೂ ಕೂಡಾ ಇಂದಿಗೂ ಅದೆಷ್ಟೋ ಜನರು ತಮ್ಮ ಕುಟುಂಬದಲ್ಲಿ ಹೆಣ್ಣು ಮಗು ಜನಿಸಿದರೆ, ಈ ಅನಿಷ್ಟ ಯಾಕಾದ್ರೂ ನಮ್ಮ ಮನೆಯಲ್ಲಿ ಜನಿಸಿತೋ ಎಂದು ಮುಖ ಸಿಂಡರಿಸಿ ಕೊಳ್ಳುತ್ತಾರೆ. ಇಂತಹ ಜನಗಳ ಮಧ್ಯದಲ್ಲಿ ಇಲ್ಲೊಬ್ಬ ತಂದೆ ತನಗೆ ಹೆಣ್ಣು ಮಗುವಾಯಿತು ಎಂಬ ಖುಷಿಯಲ್ಲಿ ತನ್ನ ದುಬಾರಿ ಬೆಲೆಯ ರೇಂಜ್ ರೋವರ್ ಕಾರನ್ನು ಬೇಬಿ ಗರ್ಲ್ ಥೀಮ್ ಗೆ ಅನುಗುಣವಾಗಿ ಗುಲಾಬಿ ಬಣ್ಣದಲ್ಲಿ ಮೊಡಿಫೈ ಮಾಡಿ ತಮ್ಮ ಖುಷಿಯನ್ನು ವಿಶಿಷ್ಟ ರೀತಿಯಲ್ಲಿ ತೋರ್ಪಡಿಸಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ಹೆಣ್ಣು ಮನೆಯ ಮಹಾಲಕ್ಷ್ಮಿ, ಹೆಣ್ಣು ಸಮಾಜದ ಕಣ್ಣು ಎಂದು ಹೇಳುವ ಮಾತಿದೆ. ಹೀಗಿದ್ರೂ ಕೂಡಾ ಇಂದಿಗೂ ಕೆಲವೊಬ್ಬರು ತಮ್ಮ ಮನೆಯಲ್ಲಿ ಹೆಣ್ಣು ಮಗು ಜನಿಸಿದ್ರೆ ಸಾಕು ಯಾಕಾದ್ರೂ ಈ ಹೆಣ್ಣು ಮಗು ಜನಿಸಿತೋ ಎಂದು ಮುಖ ಸಿಂಡರಿಸಿಕೊಳ್ಳುತ್ತಾರೆ. ಇನ್ನೂ ಕೆಲ ವರ್ಷಗಳ ಹಿಂದಿನ ಕಥೆಗಳನ್ನು ನೋಡುವುದಾದರೆ ಹೆಣ್ಣು ಮಗು ಜನಿಸಿದ್ರೆ ಅನಿಷ್ಠವೇ ಮನೆಗೆ ಬಂತೆಂಬಂತೆ ಮನೆಯ ಹಿರಿಯರು ನಡೆದುಕೊಳ್ಳುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ, ಅದೆಷ್ಟೋ ಜನರು ನಮ್ಮ ಮನೆಗೆ ಪುಟ್ಟ ಲಕ್ಷ್ಮಿಯನ್ನು ಕರುಣಿಸು ದೇವರೇ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ. ಇನ್ನೂ ಹೆಣ್ಣು ಮಗು ಜನಿಸಿದರಂತೂ ಸಾಕ್ಷಾತ್ ಲಕ್ಷ್ಮೀ ದೇವಿಯೇ ನಮ್ಮ ಮನೆಗೆ ಆಗಮಿಸಿದ್ದಾಳೆ ಎನ್ನುವಷ್ಟು ಸಂಭ್ರಮಿಸುತ್ತಾರೆ. ಇದೀಗ ಅಂತಹದೊಂದು ವಿಡಿಯೋ ವೈರಲ್ ಆಗಿದ್ದು, ಹೆಣ್ಣು ಮಗು ಹುಟ್ಟಿದ ಖುಷಿಯಲ್ಲಿ ತಂದೆಯೊಬ್ಬರು ತಮ್ಮ ದುಬಾರಿ ಬೆಲೆಯ ರೇಂಜ್ ರೋವರ್ ಕಾರನ್ನು ಬೇಬಿ ಗರ್ಲ್ ಥೀಮ್ ಗೆ ಅನುಗುಣವಾಗಿ ಗುಲಾಬಿ ಬಣ್ಣದಲ್ಲಿ ಮೊಡಿಫೈ ಮಾಡಿ ಸಂತೋಷಪಟ್ಟಿದ್ದಾರೆ.
ಈ ಘಟನೆ ಗುಜರಾತಿನ ಸೂರತ್ ನಗರದಲ್ಲಿ ನಡೆದಿದ್ದು, ಇಲ್ಲಿನ ವ್ಯಕ್ತಿಯೊಬ್ಬರು ತನಗೆ ಹೆಣ್ಣು ಮಗು ಜನಿಸಿದ ಖುಷಿಯಲ್ಲಿ ತಮ್ಮ ಕೋಟಿ ಬೆಲೆಯ ರೇಂಜ್ ರೋವರ್ ಕಾರನ್ನು ಬೇಬಿ ಗರ್ಲ್ ಥೀಮ್ ಅಲ್ಲಿ ಗುಲಾಬಿ ಬಣ್ಣದಲ್ಲಿ ಅಲಂಕರಿಸಿ, ತಮ್ಮ ಖುಷಿಯನ್ನು ವಿಶಿಷ್ಟ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ. @suratupdatesofficial ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, “ಸೂರತ್ ನಲ್ಲಿ ತಂದೆಯೊಬ್ಬರು ತನಗೆ ಹೆಣ್ಣು ಮಗು ಜನಿಸಿದ ಖುಷಿಯಲ್ಲಿ ಐಷಾರಾಮಿ ಕಾರನ್ನು ಗುಲಾಬಿ ಬಣ್ಣದಿಂದ ಅಲಂಕರಿಸಿದ್ದಾರೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ:
View this post on Instagram
ವೈರಲ್ ವಿಡಿಯೋದಲ್ಲಿ ಸೂರತ್ ನ ವ್ಯಕ್ತಿಯೊಬ್ಬರು ತನಗೆ ಹೆಣ್ಣು ಮಗು ಜನಿಸಿದ ಖುಷಿಯಲ್ಲಿ ತಮ್ಮ ಐಷಾರಾಮಿ ರೇಂಜ್ ರೋವರ್ ಕಾರನ್ನು ಬೇಬಿ ಗರ್ಲ್ ಥೀಮ್ ಗೆ ಅನುಗುಣವಾಗಿ ಸಂಪೂರ್ಣವಾಗಿ ಗುಲಾಬಿ ಬಣ್ಣಕ್ಕೆ ಮೋಡಿಫೈಗೊಳಿಸಿ, ಕಾರಿನ ಸುತ್ತಲೂ ಗೊಂಬೆಗಳನ್ನು ಗ್ರಾಫಿಕ್ ಡಿಸೈನ್ ಮಾಡಿಸಿಕೊಂಡು, ದುಬಾರಿ ಕಾರನ್ನು ಆಟಿಕೆಯಂತೆ ಅಲಂಕರಿಸಿ ಆ ಕಾರಿನಲ್ಲಿ ನಗರದ ಬೀದಿಗಳಲ್ಲಿ ಸವಾರಿ ಮಾಡುತ್ತಾ ತಮ್ಮ ಖುಷಿಯನ್ನು ವಿಶಿಷ್ಟ ರೀತಿಯಲ್ಲಿ ವ್ಯಕ್ತಪಡಿಸಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಪ್ಲೀಸ್ ಸರ್ ಬೇಸಿಗೆ ರಜೆ ಬೇಡ, ನನಗೆ ಶಾಲೆಯಲ್ಲಿ ಸಿಗುವ ಮಧ್ಯಾಹ್ನದ ಊಟ ತುಂಬಾ ಮುಖ್ಯ ಎಂದ ವಿದ್ಯಾರ್ಥಿ
ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 2.5 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ನೆಟ್ಟಿಗರಿಂದ ಭಾರಿ ಮೆಚ್ಚುಗೆಯನ್ನು ಪಡೆದುಕೊಂಡಿದೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ