Akka caf Bengaluru: ಮಹಿಳೆಯರ ಸ್ವಾವಲಂಬಿ ಬದುಕಿಗಾಗಿ ʼಅಕ್ಕ ಕೆಫೆʼ, ಈ ಐಡಿಯಾ ಸರ್ಕಾರಕ್ಕೆ ಹೇಗೆ ಬಂತು?  

ಮೊನ್ನೆಯಷ್ಟೇ ಮಹಿಳಾ ದಿನಾಚರಣೆಯನ್ನು ವಿಶ್ವದೆಲ್ಲೆಡೆ ಬಹಳ ವೈಭವದಿಂದ ಆಚರಿಸಲಾಯಿತು. ನಮ್ಮ ಬೆಂಗಳೂರಿನಲ್ಲಿಯೂ ಈ ದಿನವನ್ನು ಬಹಳ ವಿಶೇಷವಾಗಿ ಆಚರಿಸಲಾಗಿದ್ದು, ಮಹಿಳಾ ಸಬಲೀಕರಣವನ್ನು ಉತ್ತೇಜಿಸಲು ಹಾಗೂ ಮಹಿಳೆಯರ ಸ್ವಾವಲಂಬಿ ಬದುಕಿಗೆ ಉತ್ತೇಜನ ನೀಡುವ ದೃಷ್ಟಿಯಿಂದ  ರಾಜ್ಯ ಸರ್ಕಾರದ ಉಪಕ್ರಮದ ಅಡಿಯಲ್ಲಿ  ಮಹಿಳೆಯರಿಂದ ನಡೆಸಲ್ಪಡುವ ʼಅಕ್ಕ ಕೆಫೆʼಗೆ  ಚಾಲನೆ ನೀಡಲಾಯಿತು.  

Akka caf Bengaluru: ಮಹಿಳೆಯರ ಸ್ವಾವಲಂಬಿ ಬದುಕಿಗಾಗಿ ʼಅಕ್ಕ ಕೆಫೆʼ, ಈ ಐಡಿಯಾ ಸರ್ಕಾರಕ್ಕೆ ಹೇಗೆ ಬಂತು?  
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 13, 2024 | 12:33 PM

ಮಾರ್ಚ್ 08 ರಂದು ವಿಶ್ವದೆಲ್ಲೆಡೆ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ನಮ್ಮ ಬೆಂಗಳೂರಿನಲ್ಲಿಯೂ ಈ ದಿನವನ್ನು ಬಹಳ ವಿಶೇಷ ರೀತಿಯಲ್ಲಿ ಆಚರಿಸಲಾಗಿದ್ದು, ಮಹಿಳಾ ಸಬಲೀಕರಣವನ್ನು ಉತ್ತೇಜಿಸಲು ಹಾಗೂ ಮಹಿಳೆಯರ ಸ್ವಾವಲಂಬಿ ಬದುಕಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಉಪಕ್ರಮದ ಅಡಿಯಲ್ಲಿ ʼಅಕ್ಕ ಕೆಫೆʼಯನ್ನು ಪ್ರಾರಂಭಿಸಲಾಯಿತು. ಮಹಿಳಾ ಸಬಲೀಕರಣದತ್ತ ಮಹತ್ವದ ಹೆಜ್ಜೆಯನ್ನಿಟ್ಟು  ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್(NRLM), ಕರ್ನಾಟಕ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿಯಲ್ಲಿ ಮೊದಲ ಅಕ್ಕ ಕೆಫೆಯನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಲಾಗಿದ್ದು,   ಈ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ  ಬಜೆಟ್​​ನಲ್ಲಿ ಘೋಷಣೆ ಮಾಡಿದಂತೆ ಅಕ್ಕ ಕೆಫೆಯು ಕಾರ್ಯರೂಪಕ್ಕೆ ಬಂದಿದೆ.

ಮಾರ್ಚ್ 8 ಶುಕ್ರವಾರದಂದು  ಮಹಿಳಾ ದಿನಾಚರಣೆಯ ಅಂಗವಾಗಿ  ಗಾಂಧಿ ನಗರದಲ್ಲಿ ಒಲವಿನ ಊಟ ಎಂಬ ಟ್ಯಾಗ್ ಅಡಿಯಲ್ಲಿ ಪ್ರಾರಂಭವಾದ  ಅಕ್ಕ ಕೆಫೆಗೆ ಕೌಶಲ್ಯಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್ ಚಾಲನೆ ನೀಡಿದರು.  ಮಹಿಳಾ ಸಬಲೀಕರಣವನ್ನು ಉತ್ತೇಜಿಸಲು, ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಲು ಇದು ಸರ್ಕಾರದ ನಿರ್ಣಾಯಕ ಉಪಕ್ರಮವಾಗಿದೆ.  ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿಯ ಪ್ರಕಾರ, ಸರ್ಕಾರದ ಈ ಉಪಕ್ರಮವು  ಕರ್ನಾಟಕದಲ್ಲಿ 200 ಕ್ಕೂ ಹೆಚ್ಚು ಇದೇ ರೀತಿ ಕೆಫೆಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ.

ಮಹಿಳೆಯರಿಗೆಂದೆ ಮಾಡಲಾದ ಅಕ್ಕ ಕೆಫೆ ಯೋಜನೆಯಡಿ ಮಹಿಳೆಯರಿಗೆ ತಮ್ಮದೇ ಆಹಾರೋದ್ಯಮ ಸ್ಥಾಪಿಸಲು ಬೇಕಾದ ತರಬೇತಿಯನ್ನೂ ನೀಡಲಾಗುತ್ತದೆ. ಪ್ರಮುಖ ಪ್ರವಾಸಿ ತಾಣಗಳು, ಜನನಿಬಿಡ ಸ್ಥಳಗಳು ಮುಂತಾದೆಡೆ ಈ ಕೆಫೆಗಳು ಸಧ್ಯದಲ್ಲೇ ಆರಂಭವಾಗಲಿದೆ. ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಈ ಬ್ರಾಂಡ್ ಅಡಿಯಲ್ಲಿ ಆಹಾರೋದ್ಯಮ ಸಂಸ್ಥೆ ಕಟ್ಟಿ ಮಹಿಳೆಯರು ಉದ್ಯಮ ಕ್ಷೇತ್ರದಲ್ಲಿ ತಮ್ಮದೇ ಹೆಸರು ಮಾಡಬಹುದಾಗಿದೆ.

ಅಕ್ಕ ಕೆಫೆಯನ್ನು ಸ್ಥಾಪಿಸುವ ಐಡಿಯಾ ಹೇಗೆ ಬಂತು: ಮಹಿಳಾ ಸ್ವಸಹಾಯ ಸಂಘವು ಕಳೆದ  ಆರು ವರ್ಷಗಳಿಂದ ದೀನ್ ದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ  ಮಹಿಳಾ ಉದ್ಯಮಿಗಳು ಮತ್ತು ರುಚಿ ರುಚಿಯಾದ ಅಡುಗೆ ಮಾಡುವವರಿಗೆ ಸರ್ಕಾರಿ ಕಾರ್ಯಕ್ರಮಗಳಿಗೆ ಮತ್ತು ಇತರೆ ಕಾರ್ಯಕ್ರಮಗಳಿಗೆ ತಿಂಡಿ ಮತ್ತು ಪಾನೀಯವನ್ನು ಪೂರೈಸುವ ಅವಕಾಶವನ್ನು ನೀಡುವ ಮೂಲಕ ಅವರನ್ನು ಬೆಂಬಲಿಸುತ್ತಾ ಬಂದಿದೆ.  ಇದನ್ನು ಗಮನಿಸಿದ  ಸಂಸ್ಥೆಯು ಮಹಿಳೆಯರೇ ನಡೆಸುವ ಕೆಫೆಯನ್ನು ತೆರೆಯಲು ಯೋಜಿಸಿದೆ. ಕರ್ನಾಟಕದಾದ್ಯಂತ 250 ಕ್ಕೂ ಹೆಚ್ಚು ಈ ರೀತಿಯ ಕೆಫೆಗಳು ತೆರೆಯಲಿವೆ. ಮತ್ತು ಮೊದಲ ಕೆಫೆ ನಮ್ಮದೇ” ಎಂದು ಅಕ್ಕ ಕೆಫೆಯ ಮಾಲೀಕರಲ್ಲಿ ಒಬ್ಬರಾದ ಪುಷ್ಪಾ ಎಂಬವರು ತಿಳಿಸಿದ್ದಾರೆ.

ಇದನ್ನೂ ಓದಿ; ಮೂಕ ಜೀವಿಗಳ ಬಾಯಾರಿಕೆ ನೀಗಿಸಲು ಬೆಂಗಳೂರಿನ ಯುವಕರ ತಂಡ ಮಾಡಿದ ಕಾರ್ಯ ನಿಜಕ್ಕೂ ಶ್ಲಾಘನೀಯ

ಸ್ವಸಹಾಯ ಗುಂಪಿಗೆ ಸೇರಿದ 12 ಮಹಿಳೆಯರ ತಂಡವು  ಈ ಕೆಫೆಯನ್ನು ನಡೆಸುತ್ತದೆ. ಅಕ್ಕ ಕೆಫೆ ಬೆಳಗ್ಗೆ 09 ರಿಂದ ರಾತ್ರಿ 09 ರ ವರೆಗೆ ವಾರವಿಡಿ ಕಾರ್ಯನಿರ್ಹಿಸಲಿದೆ.  ಮತ್ತು  ಇಲ್ಲಿ ಆರೋಗ್ಯಕರ, ಸ್ವಾದಿಷ್ಟಕರವಾದ ಆಹಾರ ಲಭ್ಯವಿದ್ದು,  ಶುಚಿ-ರುಚಿಯ ಜೊತೆಗೆ ಕೈಗೆಟಕುವ ದರದಲ್ಲಿ ಗ್ರಾಹಕರಿಗೆ ಆಹಾರವನ್ನು ಪೂರೈಸಲಾಗುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ