Viral Video: ಹೀರೋನಂತೆ ಎಮ್ಮೆಯ ಮೇಲೇರಿ ಸವಾರಿ ಹೊರಟ ಸುರ ಸುಂದರ; ವಿಡಿಯೋ ವೈರಲ್
ಜನರಿಗೆ ಅತ್ಯಂತ ಹೆಚ್ಚು ಮನರಂಜನೆ ನೀಡುತ್ತಿರುವ ಜಾಗವೆಂದ್ರೆ ಅದು ಸೋಶಿಯಲ್ ಮೀಡಿಯಾ. ಇಲ್ಲಿ ಪ್ರತಿ ದಿನ ಸಾವಿರಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅದರಲ್ಲೂ ಕೆಲವೊಂದು ವಿಡಿಯೋ ತುಣುಕುಗಳು ನಮ್ಮನ್ನು ನಗಿಸುವುದರ ಜೊತೆಗೆ ಹುಬ್ಬೇರಿಸುವಂತೆ ಮಾಡುತ್ತವೆ. ಇದೀಗ ಅಂತಹದೊಂದು ವಿಡಿಯೋ ವೈರಲ್ ಆಗಿದ್ದು, ಸ್ಟೈಲಿಶ್ ಆಗಿ ರೆಡಿಯಾದ ಯುವಕನೊಬ್ಬ ಯಮರಾಜನಂತೆ ಎಮ್ಮೆಯ ಮೇಲೆ ಸವಾರಿ ಹೊರಟಿದ್ದಾನೆ. ಪೆಟ್ರೋಲ್ ಉಳಿಸಲು ಈತನದ್ದು ಒಳ್ಳೆಯ ಉಪಾಯ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.
ಈ ಆಧುನಿಕ ಕಾಲದಲ್ಲಿ ಎತ್ತಿನ ಗಾಡಿ, ಕುದುರೆ ಸವಾರಿ ಇವೆಲ್ಲಾ ಕಣ್ಮರೆಯಾಗಿ ಹೋಗಿವೆ. ಇಂದಿನ ಜನಗಳು ಏನಿದ್ದರೂ ಬಸ್, ಕಾರುಗಳಲ್ಲಿಯೇ ಓಡಾಡುತ್ತಿದ್ದಾರೆ. ಇನ್ನೂ ಕೆಲವೊಬ್ಬರು ತಮ್ಮ ಘನತೆಗೆ ತಕ್ಕಂತೆ ಬ್ರಾಂಡೆಡ್ ಕಾರು, ಬೈಕುಗಳನ್ನು ಖರೀದಿಸಿ ಅದರಲ್ಲೇ ಓಡಾಡುತ್ತಿರುತ್ತಾರೆ. ಆದರೆ ಇಲ್ಲೊಬ್ಬ ಯುವಕ ಕಾರ್, ಬೈಕ್ ಕಾಮನ್ ಆಗಿ ಎಲ್ಲರ ಬಳಿಯೂ ಇದೆ. ಆದ್ರೆ ನಾನು ಸ್ವಲ್ಪ ಡಿಫ್ರೆಂಟ್ ಎನ್ನುತ್ತಾ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿದೆ, ಸಂಬಳದಲ್ಲಿ ಬರೋ ಅರ್ಧ ದುಡ್ಡನ್ನು ಅದಕ್ಕೆ ಯಾಕೆ ಸುಮ್ಮನೆ ಖರ್ಚು ಮಾಡೋದು ಎಂದು ಟಿಪ್-ಟಾಪ್ ಆಗಿ ರೆಡಿಯಾಗಿ ಎಮ್ಮೆಯ ಮೇಲೆ ಸವಾರಿ ಹೊರಟಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಯುವಕನೊಬ್ಬ ಫಾರ್ಮಲ್ ಡ್ರೆಸ್, ಫಾರ್ಮಲ್ ಶೂ, ಕಣ್ಣಿಗೊಂದು ಕಪ್ಪು ಕನ್ನಡಕ ಹಾಕಿ ನಾನು ಯಾವ ಹೀರೋಗಳಿಗೂ ಕಮ್ಮಿಯಿಲ್ಲ ಎಂಬಂತೆ ಎಮ್ಮೆಯ ಮೇಲೇರಿ ನಗರದ ರಸ್ತೆಯಲ್ಲಿ ಸ್ಟೈಲ್ ಆಗಿ ಸವಾರಿ ಹೊರಟಿರುವ ದೃಶ್ಯವನ್ನು ಕಾಣಬಹುದು. @bull_rider_077 ಎಂಬ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
View this post on Instagram
ವೈರಲ್ ಆಗಿರುವ ವಿಡಿಯೋದಲ್ಲಿ ಸುಮ್ಮನೆ ಪೆಟ್ರೋಲ್ ಗೆ ಯಾಕಪ್ಪಾ ದುಡ್ಡು ಖರ್ಚು ಮಾಡ್ಬೇಕು ಎನ್ನುತ್ತಾ ಯುವಕನೊಬ್ಬ ಮನೆಯಲ್ಲಿ ಸಾಕಿದಂತಹ ಎಮ್ಮೆಯ ಮೇಲೆ ಸವಾರಿ ಹೊರಟಿರುವ ದೃಶ್ಯವನ್ನು ಕಾಣಬಹುದು. ಫಾರ್ಮಲ್ ಡ್ರೆಸ್, ಫಾರ್ಮಲ್ ಶೂ, ಕಣ್ಣಿಗೊಂದು ಕಪ್ಪು ಕನ್ನಡಕವನ್ನು ಹಾಕಿ ಟಿಪ್-ಟಾಪ್ ಆಗಿ ರೆಡಿಯಾದ ಯುವಕನೊಬ್ಬ ತನ್ನ ಎಮ್ಮೆಯ ಜೊತೆಗೆ ಪೆಟ್ಟಿ ಅಂಗಡಿಗೆ ಬಂದು ಅಲ್ಲಿ ಚಹಾ ಸವಿದು, ನಂತರ ಯಾವ ಹೀರೋಗಳಿಗೂ ನಾನೇನು ಕಮ್ಮಿಯಿಲ್ಲ ಎಂಬಂತೆ ಸ್ಟೈಲ್ ಆಗಿ ಎಮ್ಮೆಯ ಮೇಲೆರಿ ನಗರದ ರಸ್ತೆಯಲ್ಲಿ ರಾಜಕುಮಾರನಂತೆ ಸವಾರಿ ಮಾಡಿದ್ದಾನೆ.
ಇದನ್ನೂ ಓದಿ: ಪ್ಲೀಸ್ ಸರ್ ಪಾಸ್ ಮಾಡಿ, ಇಲ್ಲಾಂದ್ರೆ ಮನೇಲಿ ನನ್ಗೆ ಮದ್ವೆ ಮಾಡ್ತಾರೆ, ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿನಿಯ ಕೋರಿಕೆ
ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 4.6 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಮೂರು ಲಕ್ಷಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಲವಾರು ಕಾಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಯುರಾಜರನ್ನೇ ನೋಡಿದಂತಾಯಿತುʼ ಎಂಬ ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಸಹೋದರ ನೀವು ಫೇಮಸ್ ಆಗಬೇಕೆಂಬ ಕಾರಣಕ್ಕೆ ಮೂಕ ಪ್ರಾಣಿಗಳಿಗೆ ಹಿಂಸೆ ನೀಡಬೇಡಿʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಕಲಿಯುಗದ ಯಮರಾಜ ಅವನ ವಾಹನವನ್ನೇರಿ ವಿಹಾರಿಸುತ್ತಿದ್ದಾನೆʼ ಎಂಬ ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಪೆಟ್ರೋಲ್ ಹಣ ಉಳಿಸಲು ಒಳ್ಳೆಯ ಉಪಾಯʼ ಅಂತ ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ