ಬಿಹಾರ: ಎತ್ತಿನ ಗಾಡಿಯಲ್ಲಿ ಅಕ್ರಮ ಮದ್ಯ ಸಾಗಣೆ; ಕಾಲ್ಕಿತ್ತ ಕಳ್ಳಸಾಗಣೆದಾರರು; ಎತ್ತು ವಶಕ್ಕೆ

ಬಿಹಾರದಲ್ಲಿ ಮದ್ಯ ನಿಷೇಧವಿದ್ದರೂ ಜನ ಅಕ್ರಮವಾಗಿ ಮದ್ಯ ಸಾಗಿಸಲು ವಿವಿಧಠ ವಿಧಾನಗಳನ್ನು ಕಂಡುಕೊಳ್ಳುತ್ತಿದ್ದಾರೆ. ಇದರಲ್ಲಿ ಇತ್ತೀಚಿನದ್ದು ಎತ್ತಿನ ಗಾಡಿಯಲ್ಲಿ ಅಕ್ರಮ ಮದ್ಯ ಸಾಗಣೆ.“ನಾವು ಎತ್ತಿನ ಗಾಡಿಯಿಂದ ₹ 5 ಲಕ್ಷ ಮೌಲ್ಯದ ಭಾರತೀಯ ನಿರ್ಮಿತ ವಿದೇಶಿ ಮದ್ಯವನ್ನು (IMFL) ವಶಪಡಿಸಿಕೊಂಡಿದ್ದೇವೆ ಎಂದು ಅಬಕಾರಿ ಅಧೀಕ್ಷಕ ಅಮೃತೇಶ್ ಕುಮಾರ್ ಝಾ ಹೇಳಿದ್ದಾರೆ.

ಬಿಹಾರ: ಎತ್ತಿನ ಗಾಡಿಯಲ್ಲಿ ಅಕ್ರಮ ಮದ್ಯ ಸಾಗಣೆ; ಕಾಲ್ಕಿತ್ತ ಕಳ್ಳಸಾಗಣೆದಾರರು; ಎತ್ತು ವಶಕ್ಕೆ
ಪ್ರಾತಿನಿಧಿಕ ಚಿತ್ರ
Follow us
ರಶ್ಮಿ ಕಲ್ಲಕಟ್ಟ
|

Updated on:Feb 15, 2024 | 7:53 PM

ಪಟನಾ ಫೆಬ್ರುವರಿ 15:  ಡ್ರೈ ಸ್ಟೇಟ್  ಅಥವಾ ಮದ್ಯ ನಿಷೇಧ ಇರುವ ಬಿಹಾರದಲ್ಲಿ (Bihar) ಜನರು ಮದ್ಯವನ್ನು ತರಲು ಹೊಸ ಹೊಸ  ವಿಧಾನಗಳೊಂದಿಗೆ ಪದೇ ಪದೇ ಬರುತ್ತಾರೆ. ಟ್ಯಾಂಕರ್‌ಗಳು, ಟ್ರಾಕ್ಟರ್‌ಗಳು, ಟ್ರಕ್‌ಗಳು, ಬಸ್‌ಗಳು, ಕಾರುಗಳು ಮತ್ತು ಮೋಟಾರ್‌ಸೈಕಲ್‌ಗಳಲ್ಲಿ ಮದ್ಯ ಸಾಗಿಸುತ್ತಿರುವುದು ಒಂದೆಡೆಯಾದರೆ  ಇತ್ತೀಚಿಗೆ ಎತ್ತಿನ ಬಂಡಿಗಳಲ್ಲಿಯೂ ಅಕ್ರಮ ಮದ್ಯ (Illegal liquor) ಸಾಗಾಟವಾಗುತ್ತಿದೆ. ಎತ್ತಿನ ಗಾಡಿಯಲ್ಲಿ ಏನೋ ಇದೆ ಎಂದು ಶಂಕಿಸಿ ಗೋಪಾಲ್‌ಗಂಜ್ ಜಿಲ್ಲೆಯ ಅಬಕಾರಿ ಅಧಿಕಾರಿಗಳು ಅದನ್ನು ಪರಿಶೀಲಿಸಿದಾಗ ಗಾಡಿಯಲ್ಲಿ ಸಾಗಿಸುತ್ತಿದ್ದ ಅಪಾರ ಪ್ರಮಾಣದ ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಅಧಿಕಾರಿಗಳು ಮದ್ಯವನ್ನು ವಶಪಡಿಸಿಕೊಳ್ಳುತ್ತಿದ್ದ ವೇಳೆ  , ಕಳ್ಳಸಾಗಾಣಿಕೆದಾರರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

“ನಾವು ಎತ್ತಿನ ಗಾಡಿಯಿಂದ ₹ 5 ಲಕ್ಷ ಮೌಲ್ಯದ ಭಾರತ ನಿರ್ಮಿತ ವಿದೇಶಿ ಮದ್ಯವನ್ನು (IMFL) ವಶಪಡಿಸಿಕೊಂಡಿದ್ದೇವೆ. ಇದೇ ಮೊದಲ ಬಾರಿಗೆ ನಾವು ಎತ್ತಿನ ಗಾಡಿಯಲ್ಲಿ ಕಳ್ಳಸಾಗಣೆ ಮಾಡುವ ವಿಧಾನವನ್ನು ಕಂಡುಕೊಂಡಿದ್ದೇವೆ ಎಂದು ಅಬಕಾರಿ ಅಧೀಕ್ಷಕ ಅಮೃತೇಶ್ ಕುಮಾರ್ ಝಾ ಹೇಳಿದ್ದಾರೆ.

ಕಳ್ಳಸಾಗಣೆದಾರರು ಪರಾರಿಯಾಗಿದ್ದು  ಅಬಕಾರಿ ಅಧಿಕಾರಿಗಳು ಗಾಡಿ, ಎರಡು ಎತ್ತುಗಳು ಮತ್ತು ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. “ಎತ್ತುಗಳ ಗಾಡಿ, ಎತ್ತುಗಳು ಮತ್ತು ವಶಪಡಿಸಿಕೊಂಡ ಮದ್ಯವನ್ನು ಗುರುವಾರ ವಿಶೇಷ ಅಬಕಾರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಎತ್ತುಗಳನ್ನು ಯಾರಿಗಾದರೂ ವಹಿಸಿಕೊಡುವಂತೆ ನ್ಯಾಯಾಲಯವು ಸೂಚಿಸಿದೆ” ಎಂದು ಅಧಿಕಾರಿ ಹೇಳಿದರು.

ಈ ಹಿಂದೆ, ರೈಲುಗಳು ಮತ್ತು ದೋಣಿಗಳನ್ನು ಹೊರತುಪಡಿಸಿ, ಟ್ರಕ್‌ಗಳು, ಟ್ಯಾಂಕರ್‌ಗಳು, ಆಂಬ್ಯುಲೆನ್ಸ್‌ಗಳು, ಬೈಕ್‌ಗಳು ಅಥವಾ ಎಣ್ಣೆ ಟ್ಯಾಂಕ್‌ಗಳು, ಹಾಲಿನ ಡಬ್ಬಿಗಳಲ್ಲಿ, ತರಕಾರಿಗಳ ಅಡಿಯಲ್ಲಿ ಮದ್ಯದ ಬಾಟಲಿಗಳನ್ನು ಸಾಗಿಸಿದ್ದು, ಈ ಮದ್ಯ ಬಾಟಲಿಗಳನ್ನು  ಅಧಿಕಾರಿ ವಶಪಡಿಸಿಕೊಂಡಿದ್ದರು.

ಇದನ್ನೂ ಓದಿ: ಬಿಹಾರ ಸಿಎಂ ನಿತೀಶ್​ ಕುಮಾರ್​ಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿ ಕರ್ನಾಟಕದಲ್ಲಿ ಬಂಧನ

ನಿತೀಶ್ ಕುಮಾರ್ ಸರ್ಕಾರವು IMFL ಸೇರಿದಂತೆ ಮದ್ಯ ಮಾರಾಟ ಮತ್ತು ಸೇವನೆಯ ಮೇಲೆ ಸಂಪೂರ್ಣ ನಿಷೇಧವನ್ನು ಹೇರುವುದರೊಂದಿಗೆ ಬಿಹಾರವನ್ನು ಏಪ್ರಿಲ್ 2016 ರಲ್ಲಿ ಮದ್ಯ ನಿಷೇಧಿತ ರಾಜ್ಯ ಎಂದು ಘೋಷಿಸಿತ್ತು.

ಅಕ್ರಮ ಮದ್ಯ ಸಾಗಾಟದ ಮತ್ತೊಂದು ಪ್ರಕರಣದಲ್ಲಿ ಎಚ್‌ಪಿ ಗ್ಯಾಸ್‌ನ 14 ಚಕ್ರದ ಟ್ಯಾಂಕರ್‌ನಿಂದ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.  ಪಾಟ್ನಾದ ಪಾಲಿಗಂಜ್​​ನಲ್ಲಿ ವಶಪಡಿಸಿಕೊಂಡ ವಿದೇಶಿ ಮದ್ಯದ ಮೌಲ್ಯ ಸುಮಾರು 10 ರಿಂದ 15 ಲಕ್ಷ ರೂ. ಎಚ್‌ಪಿ ಗ್ಯಾಸ್‌ಗೆ ಸೇರಿದ 14 ಚಕ್ರಗಳ ಟ್ಯಾಂಕರ್ ಲಾರಿ ಪಂಜಾಬ್‌ನಿಂದ ಮುಜಾಫರ್‌ಪುರಕ್ಕೆ  ಮದ್ಯವನ್ನು ತಲುಪಿಸಲು ಹೋಗುತ್ತಿತ್ತು ಎಂದು ಪೊಲೀಸರು ಹೇಳುತ್ತಾರೆ. ಇದೇ ವೇಳೆ ಗ್ಯಾಸ್ ಟ್ಯಾಂಕರ್ ಗಳಲ್ಲಿ ಭಾರೀ ಪ್ರಮಾಣದಲ್ಲಿ ಮದ್ಯ ಸಾಗಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಬಿಹಾರ ಪೊಲೀಸರ ಕೇಂದ್ರೀಯ ನಿಷೇಧ ಘಟಕಕ್ಕೆ ಲಭಿಸಿದೆ. ಮಾಹಿತಿ ಲಭಿಸಿದ ಕೂಡಲೇ ಬಿಹಾರ ಪೊಲೀಸ್‌ನ ಕೇಂದ್ರ ನಿಷೇಧಾಜ್ಞೆ ಘಟಕದ ಡಿಎಸ್‌ಪಿ ಅಭಿಜಿತ್‌ ಕುಮಾರ್‌ ತಂಡದೊಂದಿಗೆ ಪಾಲಿಗಂಜ್‌ ಗಡಿ ತಲುಪಿ ಟ್ಯಾಂಕರ್‌ ನ್ನು ತಡೆದು ನಿಲ್ಲಿಸಿ ಪರಿಶೀಲಿಸಿದ್ದಾರೆ. ಅಷ್ಟರಲ್ಲಿ  ಚಾಲಕ ಹಾಗೂ ಸಹಾಯಕ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಅಮರ್ ಉಜಾಲಾ ಡಾಟ್ ಕಾಮ್ ವರದಿ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:51 pm, Thu, 15 February 24

ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?
ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?
ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ
ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ
‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು
‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು
ಬಿಗ್​ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?
ಬಿಗ್​ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?
ಮಂಡ್ಯ: ಸಾಹಿತ್ಯ ಸಮ್ಮೇಳನದಲ್ಲಿ ಚಲುವರಾಯಸ್ವಾಮಿ ಭರ್ಜರಿ ಡ್ಯಾನ್ಸ್​
ಮಂಡ್ಯ: ಸಾಹಿತ್ಯ ಸಮ್ಮೇಳನದಲ್ಲಿ ಚಲುವರಾಯಸ್ವಾಮಿ ಭರ್ಜರಿ ಡ್ಯಾನ್ಸ್​
ಬಾಕ್ಸಿಂಗ್ ಡೇ ಟೆಸ್ಟ್​ಗಾಗಿ ಬೆವರಿಳಿಸಿದ ಟೀಮ್ ಇಂಡಿಯಾ ಬೌಲರ್​ಗಳು
ಬಾಕ್ಸಿಂಗ್ ಡೇ ಟೆಸ್ಟ್​ಗಾಗಿ ಬೆವರಿಳಿಸಿದ ಟೀಮ್ ಇಂಡಿಯಾ ಬೌಲರ್​ಗಳು
Weekly Astrology: ಡಿಸೆಂಬರ್ 23 ರಿಂದ 29ರ ವರೆಗಿನ ರಾಶಿ ಭವಿಷ್ಯ
Weekly Astrology: ಡಿಸೆಂಬರ್ 23 ರಿಂದ 29ರ ವರೆಗಿನ ರಾಶಿ ಭವಿಷ್ಯ
ವೀಳ್ಯದೆಲೆ ದೀಪದ ಮಹತ್ವ ಮತ್ತು ಹಚ್ಚುವ ವಿಧಾನ ತಿಳಿಯಿರಿ
ವೀಳ್ಯದೆಲೆ ದೀಪದ ಮಹತ್ವ ಮತ್ತು ಹಚ್ಚುವ ವಿಧಾನ ತಿಳಿಯಿರಿ