ಆರು ಸಿಂಹಿಣಿಗಳ ಜತೆ ಕಾಡಿನಲ್ಲಿ ರಾಜಾರೋಷವಾಗಿ ನಡೆದ ಮಹಿಳೆ: ವಿಡಿಯೋ ವೈರಲ್​

| Updated By: Pavitra Bhat Jigalemane

Updated on: Jan 13, 2022 | 4:19 PM

ವಿಡಿಯೋವನ್ನು ವಿವಿಧ ಆ್ಯಂಗಲ್​ಗಳಲ್ಲಿ ಸೆರೆಹಿಡಿಯಲಾಗಿದ್ದು, ಮಹಿಳೆ 6 ಸಿಂಹಗಳ ಹಿಂದೆ ನಡೆಯುತ್ತಿರುವುದನ್ನು ಕಾಣಬಹುದು. ನಂತರ ಆಕೆ ಸಿಂಹದ ಬಾಲವನ್ನೂ ಹಿಡಿದು ನಡೆಯುತ್ತಾಳೆ

ಆರು ಸಿಂಹಿಣಿಗಳ ಜತೆ ಕಾಡಿನಲ್ಲಿ ರಾಜಾರೋಷವಾಗಿ ನಡೆದ ಮಹಿಳೆ: ವಿಡಿಯೋ ವೈರಲ್​
ವಿಡಿಯೋದಿಂದ ಸೆರೆಹಿಡಿದ ಚಿತ್ರ
Follow us on

ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವಿಚಿತ್ರ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತವೆ. ಕೆಲವು ಹುಬ್ಬೇರಿಸುವಂತಿದ್ದರೆ ಇನ್ನೂ ಕೆಲವು ನೋಡುಗರನ್ನು ದಂಗಾಗಿಸುತ್ತದೆ. ಇತ್ತೀಚೆಗಷ್ಟೇ ಕೆಲವು  ದಿನಗಳ ಹಿಂದೆ ಮಹಿಳೆಯೊಬ್ಬಳು ನಡು ಬೀದಿಯಲ್ಲಿ ಸಿಂಹವನ್ನು ಎತ್ತಿಕೊಂಡು ಹೋದ ವಿಡಿಯೋ ವೈರಲ್​ ಆಗಿತ್ತು. ಇದೀಗ ಮಹಿಳೆಯೊಬ್ಬಳು 6 ಸಿಂಹಿಣಿಗಳೊಂದಿಗೆ ರಾಜಾರೋಷವಾಗಿ ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್​ ಆಗಿದೆ. ಇನ್ಸ್ಟಾಗ್ರಾಮ್​ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋ 1.39 ಲಕ್ಷ ವೀಕ್ಷಣೆ ಪಡೆದಿದ್ದು 6 ಸಾವಿರ ಲೈಕ್ಸ್​ ಪಡೆದಿದೆ. ಸದ್ಯ ವಿಡಿಯೋ ವೈರಲ್​ ಆಗಿದ್ದು ನೆಟ್ಟಿಗರು ಮಹಿಳೆಯ ಧೈರ್ಯ ನೋಡಿ ದಂಗಾಗಿದ್ದಾರೆ.

ವಿಡಿಯೋವನ್ನು ವಿವಿಧ ಆ್ಯಂಗಲ್​ಗಳಲ್ಲಿ ಸೆರೆಹಿಡಿಯಲಾಗಿದ್ದು, ಮಹಿಳೆ 6 ಸಿಂಹಗಳ ಹಿಂದೆ ನಡೆಯುತ್ತಿರುವುದನ್ನು ಕಾಣಬಹುದು. ನಂತರ ಆಕೆ ಸಿಂಹದ ಬಾಲವನ್ನೂ ಹಿಡಿದು ನಡೆಯುತ್ತಾಳೆ. ಮನೆಯಲ್ಲಿ ಸಾಕಿದ ಬೆಕ್ಕಿನ ಬಾಲದಂತೆ ಸಿಂಹಿಣಿಯ ಬಾಲವನ್ನು ಹಿಡಿದು ಎತ್ತಿ ಅದರ ಜತೆಯೇ ನಡೆದುಕೊಂಡು ಹೋಗುವುದನ್ನು ಕಾಣಬಹುದು. ವಿಡಿಯೋವನ್ನು ಸಫಾರಿಗ್ಯಾಲರಿ ಇನ್ಸ್ಟಾಗ್ರಾಮ್​ ಹಂಚಿಕೊಂಡಿದೆ. ಸ್ಥಳವನ್ನು ಕೀನ್ಯಾ, ಆಫ್ರಿಕಾ ಎಂದು ನೀಡಲಾಗಿದೆ.

ವಿಡಿಯೋ ನೋಡಿ ನೆಟ್ಟಿಗರು ಹಲವು ರೀತಿ ಕಾಮೆಂಟ್​ ಮಾಡಿದ್ದಾರೆ. ವಿಡಿಯೋಗ್ರಾಫರ್​ ಆಗಿರುವುದಕ್ಕೆ ಹೆಮ್ಮೆಯಿದೆ ಎಂದು ಒಬ್ಬರು ಹೇಳಿದರೆ,  ಇನ್ನೊಬ್ಬ ಬಳಕೆದಾರರು, ವಿಡಿಯೋ ಹಿಂದಿನ ದೃಶ್ಯಾವಳಿಗಳನ್ನು ನೋಡಲು ಕಾತುರರಾಗಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ:

Viral Video: ಪೊಲೀಸ್ ಅಧಿಕಾರಿಯನ್ನು ಕೊಂದ ಕೈದಿಗೆ ಚುಂಬಿಸಿದ ಜಡ್ಜ್; ವಿಡಿಯೋ ವೈರಲ್

Published On - 4:18 pm, Thu, 13 January 22