‘ನೀನು ದಪ್ಪಗಿದ್ದೀಯ’ ಎಂದು ಪತಿ ಪದೇಪದೇ ಗೇಲಿ ಮಾಡಿದಕ್ಕೆ ಆತ್ಮಹತ್ಯೆಗೆ ಶರಣಾದ ಪತ್ನಿ

ಅಸ್ಲಂ ಕಾಂಡೆ ಮತ್ತು ತೆಹ್ಮಿನಾ 2016 ರಲ್ಲಿ ವಿವಾಹವಾಗಿದ್ದರು. ಆದರೆ ಪತ್ನಿ ತೆಹ್ಮಿನಾ ಸಾಕಷ್ಟು ದಪ್ಪಗಿದ್ದರಿಂದ ಮಗುವನ್ನು ಹೆರಲು ಸಾಧ್ಯವಾಗದ ಕಾರಣ ಬೇರೊಬ್ಬಳನ್ನು ಮದುವೆಯಾಗುವುದಾಗಿ ಪತಿ ಅಸ್ಲಂ ಕಾಂಡೆ ಪತೀ ದಿನ ಹೇಳುತ್ತಿದ್ದ. ಇದಲ್ಲದೇ ನೀನು ದಪ್ಪಗಿದ್ದೀಯ, ನಿಂಗೆ ಡ್ರೆಸ್ಸಿಂಗ್​ ಸೆನ್ಸ್ ಇಲ್ಲ ಎಂದು ಪದೇ ಪದೇ ಗೇಲಿ ಮಾಡುತ್ತಿದ್ದ. ಇದರಿಂದ ಖಿನ್ನತೆಗೆ ಜಾರಿದ್ದಳು.

ನೀನು ದಪ್ಪಗಿದ್ದೀಯ ಎಂದು ಪತಿ ಪದೇಪದೇ  ಗೇಲಿ ಮಾಡಿದಕ್ಕೆ ಆತ್ಮಹತ್ಯೆಗೆ ಶರಣಾದ ಪತ್ನಿ
Women dies after husband calls her fat
Image Credit source: Pinterest

Updated on: Feb 23, 2024 | 2:33 PM

ಮುಂಬೈ: ನೀನು ದಪ್ಪಗಿದ್ದೀಯ, ನಿಂಗೆ ಡ್ರೆಸ್ಸಿಂಗ್​ ಸೆನ್ಸ್ ಇಲ್ಲ ಎಂದು ಪ್ರತೀ ದಿನ ಗಂಡ ಹೆಂಡತಿಯನ್ನು ರೇಗಿಸುತ್ತಿದ್ದ. ಇದರಿಂದಾಗಿ ಸಾಕಷ್ಟು ನೊಂದಿದ್ದ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪತಿ ಪದೇ ಪದೇ ಗೇಲಿ ಮಾಡುತ್ತಿದ್ದ ಎಂದು ಪತ್ನಿ ಸಾವನ್ನಪ್ಪಿರುವ ಘಟನೆ ಮುಂಬೈನ ಬೈಕುಲ್ಲಾದಲ್ಲಿ ನಡೆದಿದೆ. ಈ ಕುರಿತು ತನಿಖೆ ಆರಂಭಿಸಿದ ಪೊಲೀಸರು ಆಕೆಯ ತಾಯಿ ದೂರಿನ ಮೇರೆಗೆ ಪತಿ ಹಾಗೂ ಆತನ ಸಹೋದರಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತ ಮಹಿಳೆಯನ್ನು ತೆಹ್ಮಿನಾ ಅಸ್ಲಂ ಕಾಂಡೆ ಮತ್ತು ಆಕೆಯ ಪತಿ ಅಸ್ಲಂ ಕಾಂಡೆ ಎಂದು ಗುರುತಿಸಲಾಗಿದೆ. “ನನ್ನ ಮಗಳು ಸಾಕಷ್ಟು ಮಾನಸಿಕವಾಗಿ ನೊಂದಿದ್ದಳು. ಆದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನನ್ನ ಮಗಳ ಸಾವಿಗೆ ನ್ಯಾಯ ಒದಗಿಸಿಕೊಡಿ” ಎಂದು ಮೃತ ಮಹಿಳೆಯ ತಾಯಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ತಂಗಿ ಪರೀಕ್ಷೆಯಲ್ಲಿ ಕಾಪಿ ಮಾಡಲು ಸಹಾಯವಾಗಲೆಂದು ಪೊಲೀಸ್​​​ ವೇಷ ತೊಟ್ಟು ಬಂದ ಅಣ್ಣ

ಪೊಲೀಸರ ವಿವರಗಳ ಪ್ರಕಾರ, ಅಸ್ಲಂ ಕಾಂಡೆ ಮತ್ತು ತೆಹ್ಮಿನಾ 2016 ರಲ್ಲಿ ವಿವಾಹವಾಗಿದ್ದರು. ಆದರೆ ಪತ್ನಿ ತೆಹ್ಮಿನಾ ಸಾಕಷ್ಟು ದಪ್ಪಗಿದ್ದರಿಂದ ಮಗುವನ್ನು ಹೆರಲು ಸಾಧ್ಯವಾಗದ ಕಾರಣ ಬೇರೊಬ್ಬಳನ್ನು ಮದುವೆಯಾಗುವುದಾಗಿ ಪತಿ ಅಸ್ಲಂ ಕಾಂಡೆ(43) ಪತೀ ದಿನ ಹೇಳುತ್ತಿದ್ದ. ಇದಲ್ಲದೇ ನೀನು ದಪ್ಪಗಿದ್ದೀಯ, ನಿಂಗೆ ಡ್ರೆಸ್ಸಿಂಗ್​ ಸೆನ್ಸ್ ಇಲ್ಲ ಎಂದು ಪದೇ ಪದೇ ಗೇಲಿ ಮಾಡುತ್ತಿದ್ದ. ಇದರಿಂದ ಖಿನ್ನತೆಗೆ ಜಾರಿದ್ದಳು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪತಿ ತನ್ನ ಹೆಂಡತಿಗೆ ಅಪಹಾಸ್ಯ ಮಾಡುತ್ತಿದ್ದಾನೆ ಎಂಬ ಆರೋಪದ ಆಧಾರದ ಮೇಲೆ ಪತಿ ಮತ್ತು ಆತನ ಸಹೋದರಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ