Viral Video: ಹಸುವನ್ನು ಕಾರಿನಲ್ಲಿ ಕುಳಿಸಿಕೊಂಡು ರೈಡ್ ಹೊರಟ ವ್ಯಕ್ತಿ; ವಿಡಿಯೋ ವೈರಲ್​

ಮೊದಲಿಗೆ ಫೇಸ್​ಬುಕ್​ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಬಳಿಕ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಅಪರೂಪದಲ್ಲಿ ಅಪರೂಪದ ದೃಶ್ಯ ನೋಡಿದ ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ.

Viral Video: ಹಸುವನ್ನು ಕಾರಿನಲ್ಲಿ ಕುಳಿಸಿಕೊಂಡು ರೈಡ್ ಹೊರಟ ವ್ಯಕ್ತಿ; ವಿಡಿಯೋ ವೈರಲ್​
ಹಸುವನ್ನು ಕಾರಿನಲ್ಲಿ ಕುಳಿಸಿಕೊಂಡು ರೈಡ್ ಹೊರಟ ವ್ಯಕ್ತಿ; ಆಶ್ಚರ್ಯಗೊಂಡ ನೆಟ್ಟಿಗರು
Edited By:

Updated on: Aug 29, 2021 | 10:57 AM

ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೋಗಳು ಹರಿದಾಡುತ್ತಿರುತ್ತದೆ. ಕೆಲವೊಂದಿಷ್ಟು ವಿಡಿಯೋಗಳು ತಮಾಷೆಯಾಗಿ ಕಾಣಿಸುತ್ತವೆ. ಇನ್ನು ಕೆಲವು ಆಶ್ಚರ್ಯವನ್ನುಂಟು ಮಾಡುತ್ತವೆ. ಕೆಲವು ಬೆರಗಾಗುವ ದೃಶ್ಯಗಳನ್ನು ನೋಡಿ ನಿಜವಾಗಿಯೂ ಆಶ್ಚರ್ಯವಾಗುತ್ತಿದೆ ಎಂದು ಪ್ರತಿಕ್ರಿಯಿಸಿದವರೂ ಇದ್ದಾರೆ. ಇದೀಗ ವೈರಲ್ ಆದ ಸುದ್ದಿಯೂ ಅಂಥದ್ದೇ, ಕಾರಿನಲ್ಲಿ ಹಸುವನ್ನು ಕುಳಿಸಿಕೊಂಡು ವ್ಯಕ್ತಿ ರಸ್ತೆಯಲ್ಲಿ ಸಾಗುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಪರೂಪದ ದೃಶ್ಯ ನೋಡಿದ ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ.

ಕೆಲವೊಂದಿಷ್ಟನ್ನು ನಿಜವಾಗಿಯೂ ನೋಡುತ್ತಿದ್ದರೂ ನಮ್ಮ ಕಣ್ಣೇ ಸುಳ್ಳು ಹೇಳುತ್ತಿದೆ ಅನ್ನುವಷ್ಟರ ಮಟ್ಟಿಗೆ ಆಶ್ಚರ್ಯವನ್ನುಂಟು ಮಾಡುತ್ತವೆ. ಅಂತಹುದೇ ವಿಡಿಯೋ ಇದಾಗಿದ್ದು, ಅಂಗಡಿಯ ಒಳಗೆ ಕುಳಿತಿದ್ದ ಮಹಿಳೆ ದೃಶ್ಯ ಸೆರೆ ಹಿಡಿದು ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದಾರೆ.

ಜೆಸ್ಸಿಕಾ ನೆಲ್ಸನ್ ಎಂಬ ಮಹಿಳೆ ವಿಸ್ಕಾಂಸಿನ್​ನಲ್ಲಿ ದೃಶ್ಯ ಸೆರೆಹಿಡಿದಿದ್ದಾರೆ. ಆಶ್ಚರ್ಯಗೊಂಡ ಆಕೆ ಫೇಸ್​ಬುಕ್​ ಪುಟದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಮೊದಲಿಗೆ ನಾನು ಇದು ಸುಳ್ಳು ಅಂದುಕೊಂಡೆ. ಮತ್ತೊಮ್ಮೆ ಕಣ್ಮಿಟುಕಿಸಿ ನೋಡಿದೆ. ಅಷ್ಟರಲ್ಲಿ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಹಸು ತಲೆ ಎತ್ತಿದೆ. ಒಮ್ಮೆಲೆ ಶಾಕ್ ಆದೆ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ಮೊದಲಿಗೆ ಫೇಸ್​ಬುಕ್​ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಬಳಿಕ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಅಪರೂಪದಲ್ಲಿ ಅಪರೂಪದ ದೃಶ್ಯ ನೋಡಿದ ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ.

ಇದನ್ನೂ ಓದಿ:

Viral Video: ಬೇರೊಂದು ಯುವತಿ ಜತೆ ತಿರುಗಾಡುತ್ತಿದ್ದ ಗಂಡನನ್ನು ನೋಡಿದ ಹೆಂಡತಿ ಏನು ಮಾಡ್ತಾಳೆ ನೋಡಿ! ವಿಡಿಯೋ ವೈರಲ್​

ವೈರಲ್​ ವಿಡಿಯೋ; ಕೊರೊನಾ ಕಂಟಕ.. ಹೆಂಡತಿಯೊಂದಿಗೆ ಮನೆಯೊಳಗೆ ಕ್ರಿಕೆಟ್ ಆಡಿದ ಮೊಹಮ್ಮದ್ ಕೈಫ್

(Women spot a cow sitting in the car video goes viral)