
ಬಹುನಿರೀಕ್ಷಿತ ಐಸಿಸಿ 13 ನೇ ಆವೃತ್ತಿಯ ಮಹಿಳಾ ಏಕದಿನ ವಿಶ್ವಕಪ್ ಗೆ (Women’s Cricket World Cup 2025) ಇಂದು (ಸೆಪ್ಟೆಂಬರ್ 30) ಗುಹಾವಟಿಯಲ್ಲಿ ಅಧಿಕೃತ ಚಾಲನೆ ಸಿಗಲಿದೆ. ಭಾರತ ಹಾಗೂ ಶ್ರೀಲಂಕಾ ಈ ಟೂರ್ನಿಗೆ ಅತಿಥ್ಯ ವಹಿಸಲಿದೆ. ಈ ಎರಡು ತಂಡಗಳು ಇಂದಿನ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಇದೀಗ ಗೂಗಲ್ ವಿಶೇಷ ಡೂಡಲ್ (Google Doodle) ರಚಿಸಿ ಈ ಉದ್ಘಾಟನಾ ಪಂದ್ಯಕ್ಕೆ ವಿಶೇಷ ಗೌರವವನ್ನು ಸಲ್ಲಿಸಿದೆ. ಗೂಗಲ್ ಈ ರೀತಿ ವಿಶೇಷ ಗೌರವ ಸಲ್ಲಿಸಿರುವುದು ಜಾಗತಿಕ ಮಹತ್ವವನ್ನು ಮಾತ್ರವಲ್ಲದೇ ಪ್ರಪಂಚದಾದಂತ್ಯ ಮಹಿಳಾ ಕ್ರಿಕೆಟ್‌ನ ಮಹತ್ವವನ್ನು ಎತ್ತಿ ತೋರಿಸುತ್ತಿದೆ.
ಬಹುನಿರೀಕ್ಷಿತ ಐಸಿಸಿ 13 ನೇ ಆವೃತ್ತಿಯ ಮಹಿಳಾ ಏಕದಿನ ವಿಶ್ವಕಪ್ ನ ಮೊದಲ ಪಂದ್ಯವೂ ಗುವಾಹಟಿಯಲ್ಲಿ ನಡೆಯಲಿದ್ದು, ಅತಿಥೇಯ ಭಾರತವನ್ನು ಶ್ರೀಲಂಕಾವೂ ಎದುರಿಸಲಿದೆ. ಭಾರತ ತಂಡದ ನಾಯಕತ್ವವನ್ನು ಹರ್ಮನ್ ಪ್ರೀತ್ ವಹಿಸಲಿದ್ದು, ಚಾಮರಿ ಅಟ್ಟ ಪಟ್ಟು ಶ್ರೀಲಂಕಾ ತಂಡವನ್ನು ಮುನ್ನೆಡೆಸಲಿದ್ದಾರೆ. ಒಟ್ಟು 50 ಓವರ್‌ನ ಈ ಪಂದ್ಯದಲ್ಲಿ ಭಾರತ ಹಾಗೂ ಶ್ರೀಲಂಕಾದಾದಂತ್ಯ ಒಟ್ಟು 31 ಪಂದ್ಯಗಳು ನಡೆಯಲಿದೆ. ಎಂಟು ಅಗ್ರ ತಂಡಗಳು ಪ್ರತಿಷ್ಠಿತ ಟ್ರೋಫಿಗಾಗಿ ಸ್ಪರ್ಧಿಸುತ್ತಿವೆ.
ಇದನ್ನೂ ಓದಿ:Video:18 ಅಡಿ ಎತ್ತರದ ಗೋಡೆ ಹಾರಿದ ಭಾರತೀಯ ಶ್ವಾನ, ಇಲ್ಲಿದೆ ನೋಡಿ ವಿಡಿಯೋ
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ