ಇನ್ಮುಂದೆ ಕಚೇರಿಯಲ್ಲಿ ಲವ್​​ ಮಾಡಿದ್ರೆ ಕೆಲಸದಿಂದ ವಜಾ! ಹೊಸ ಆದೇಶ ನೀಡಿದ ಕಂಪನಿ

ಕೆಲಸದ ಸ್ಥಳದಲ್ಲಿ ಪ್ರೀತಿ ಸಂಬಂಧಗಳಿಗೆ ಕಂಪನಿಯೊಂದು ನಿಷೇಧ ಹೇರಿರುವುದು ಸಖತ್ ವೈರಲ್ ಆಗಿದೆ. ಕಂಪನಿ ಒಳಗೆ ಅಥವಾ ಹೊರಗಿನ ಸಂಬಂಧಗಳ ಬಗ್ಗೆ ಬಹಿರಂಗಪಡಿಸದಿದ್ದರೆ ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಆದೇಶ ಹೊರಡಿಸಿದೆ. ಈ ಕಟ್ಟುನಿಟ್ಟಿನ ಹೊಸ ನಿಯಮವು ರೆಡ್ಡಿಟ್‌ನಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಉದ್ಯೋಗಿಗಳ ವಜಾಕ್ಕೆ ಕಾರಣವಾಗುವ ಈ ನಿರ್ಧಾರದ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದೆ.

ಇನ್ಮುಂದೆ ಕಚೇರಿಯಲ್ಲಿ ಲವ್​​ ಮಾಡಿದ್ರೆ ಕೆಲಸದಿಂದ ವಜಾ! ಹೊಸ ಆದೇಶ ನೀಡಿದ ಕಂಪನಿ
ಸಾಂದರ್ಭಿಕ ಚಿತ್ರ

Updated on: Nov 17, 2025 | 4:25 PM

ಕೆಲಸ ಮಾಡುವ ಸ್ಥಳಗಳಲ್ಲಿ ಲವ್​ ಮಾಡುವಂತಿಲ್ಲ (workplace relationships ban) ಎಂದು ಕಂಪನಿಯೊಂದು ಆದೇಶ ಹೊರಡಿಸಿದೆ. ಇದೀಗ ಈ ಆದೇಶ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಕಂಪನಿಯಲ್ಲಿ ಪರಸ್ಪರ ಲವ್​​ ಮಾಡುವುದು ಅಥವಾ ಬೇರೆ ಕಂಪನಿಯರನ್ನು ಪ್ರೀತಿ ಮಾಡುವುದು ತಿಳಿದರೆ, ಅಂತಹ ಉದ್ಯೋಗಿಯನ್ನು ಕೆಲಸದಿಂದ ವಜಾ ಮಾಡಿ ಎಂದು ಕಂಪನಿ ಹೇಳಿದೆ. ಹೊಸದಾಗಿ ಔಪಚಾರಿಕವಾಗಿ ಈ ನಿಯಮವನ್ನು ಕಂಪನಿ ತಂದಿದೆ. ಇದೀಗ ಪೋಸ್ಟ್​ವೊಂದು ರೆಡ್ಡಿಟ್​​​ನಲ್ಲಿ ವೈರಲ್​​ ಆಗಿದೆ. ಅಮೆರಿಕ ಕಂಪನಿಯೊಂದು ತನ್ನ ಐದು ರಾಜ್ಯಗಳಲ್ಲಿರುವ ಕಂಪನಿಗಳ ಉದ್ಯೋಗಿಗಳಿಗೆ ಈ ರೂಲ್ಸ್​​​ ಮಾಡಿದೆ. ಕಂಪನಿಯು ಕಾನೂನು ತಂಡದೊಂದಿಗಿನ ಸಭೆಯನ್ನು ಕರೆದು, ಈ ನಿರ್ಧಾರಕ್ಕೆ ಬಂದಿದೆ. ಈ ಪೋಸ್ಟ್​​​ಗೆ ಇದು ಮುಕ್ತಾಯದ ಹೊಸ ರೂಪ ಎಂದು ಶೀರ್ಷಿಕೆಯನ್ನು ನೀಡಿದ್ದಾರೆ.

ಕಂಪನಿಯ ಒಳಗೆ ಅಥವಾ ಹೊರಗೆ ಯಾರೊಂದಿಗೂ ಸಂಬಂಧವನ್ನು ಹೊಂದಿರಬಾರದು, ಒಂದು ವೇಳೆ ಸಂಬಂಧ ಹೊಂದಿದ್ದರೆ ಕಂಪನಿಗೆ ನೇರವಾಗಿ ಗಮನಕ್ಕೆ ತರಬೇಕು ಎಂದು ಹೇಳಿದೆ. ಕಂಪನಿಗೆ ತಿಳಿಸದೇ ಗುಟ್ಟಾಗಿ ಲವ್​​ ಮಾಡಿದ್ರೆ, ಅಂತಹ ಉದ್ಯೋಗಿಗಳನ್ನು ವಜಾ ಮಾಡಲಾಗುವುದು. ಜತೆಗೆ ಬೇರೆ ಕಂಪನಿಯ ವ್ಯಕ್ತಿಗಳೊಂದಿಗೆ ಸಂಬಂಧ ಹೊಂದಿದ್ದರೆ ಅದನ್ನು ಮೊದಲೇ ಕಂಪನಿಗೆ ಹೇಳಬೇಕು. ಹೇಳದಿದ್ದರೆ ಅಂತವರನ್ನು ಕೂಡ ಕಂಪನಿಯಿಂದ ವಜಾ ಮಾಡಲಾಗುವುದು. ಇಲ್ಲಿ ಯಾವುದೇ ರಿಯಾಯಿತಿಯನ್ನು ನೀಡಲಾಗುವುದಿಲ್ಲ. ನೇರ ಮನೆ ಕಳಿಸುತ್ತೇವೆ ಎಂದು ಆದೇಶ ನೀಡಿದೆ. ಇದರ ಜತೆಗೆ ಮತ್ತೊಂದು ಮಹತ್ವದ ಆದೇಶ ಕೂಡ ನೀಡಿದೆ. ಕಂಪನಿಯಲ್ಲಿ ಯಾವುದೇ ತೊಂದರೆ ಅಥವಾ ಕಿರುಕುಳ ಉಂಟಾದರೆ ಅದನ್ನು HRಗೆ ಅಲ್ಲ, ಕಾರ್ಪೊರೇಟ್ ವಕೀಲರಿಗೆ ತಿಳಿಸಬೇಕು ಎಂದು ಹೇಳಿದೆ.

ಇದನ್ನೂ ಓದಿ: ಒತ್ತಡ ಬದಿಗಿಟ್ಟು ಯುವಕರೊಂದಿಗೆ ಕ್ರಿಕೆಟ್ ಆಡಿದ ಡೆಲಿವರಿ ಬಾಯ್ಸ್

ಇಲ್ಲಿದೆ ನೋಡಿ ಪೋಸ್ಟ್​​:

Untitled Design

ರೆಡ್ಡಿಟ್​​​ನಲ್ಲಿ ನೆಟ್ಟಿಗರ ಪ್ರತಿಕ್ರಿಯೆ ಹೀಗಿತ್ತು;

ಈ ಆದೇಶಕ್ಕೆ ಅನೇಕ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ಕೆಲವೊಂದು ಕಂಪನಿಗಳಲ್ಲಿ ಈಗಾಗಲೇ ಈ ನಿಯಮ ಜಾರಿಯಲ್ಲಿದೆ ಎಂದು ಒಬ್ಬರು ಹೇಳಿದ್ದಾರೆ. ಇದು ನಿಮ್ಮ ಕಂಪನಿಗೆ ಹೊಸದೇ? ಆದರೆ ನಮ್ಮ ಕಂಪನಿಯಲ್ಲಿ ಜಾರಿಯಲ್ಲಿದೆ. ಇದರಿಂದ ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಮತ್ತೊಬ್ಬರು ಕಮೆಂಟ್​ ಮಾಡಿದ್ದಾರೆ. ನಮ್ಮ ಕಂಪನಿಯ ಮಾಜಿ ಬಾಸ್​​​​ ಒಬ್ಬರು ಮಹಿಳೆಯೊಂದಿಗೆ ಡೇಟಿಂಗ್ ಮಾಡಿದಕ್ಕೆ ಇಬ್ಬರನ್ನು ಕಂಪನಿಯಿಂದ ವಜಾ ಮಾಡಿದ್ದಾರೆ ಎಂದು ಮತ್ತೊಬ್ಬರು ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ