ಒತ್ತಡ ಬದಿಗಿಟ್ಟು ಯುವಕರೊಂದಿಗೆ ಕ್ರಿಕೆಟ್ ಆಡಿದ ಡೆಲಿವರಿ ಬಾಯ್ಸ್
ಡೆಲಿವರಿ ಹುಡುಗರೊಂದಿಗೆ ಯುವಕರ ತಂಡ ಕ್ರಿಕೆಟ್ ಆಡಿದ ವೈರಲ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ಕೆಲಸದ ಒತ್ತಡದಿಂದ ವಿರಾಮ ಸಿಕ್ಕಿದ ಡೆಲಿವರಿ ಬಾಯ್ಸ್ ಖುಷಿಯಿಂದ ಆಟದಲ್ಲಿ ಪಾಲ್ಗೊಂಡರು. ಯುವಕರ ಈ ಹೃದಯಸ್ಪರ್ಶಿ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಟದ ಕೊನೆಯಲ್ಲಿ ವಿಜೇತ ಪದಕ ಪಡೆದು ಡೆಲಿವರಿ ಬಾಯ್ಸ್ ಸಂತೋಷಪಟ್ಟರು.

ಡೆಲಿವರಿ ಬಾಯ್ಸ್ ಜತೆಗೆ ಯುವಕರ ತಂಡವೊಂದು ಕ್ರಿಕೆಟ್ ಆಡಿರುವ (viral cricket video) ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಕ್ರಿಕೆಟ್ ಪಂದ್ಯಕ್ಕೆ ಡೆಲಿವರಿ ಹುಡುಗರನ್ನು ಯುವಕರ ತಂಡ ಆಹ್ವಾನಿಸುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ನೆಟ್ಟಿಗರು ಕೂಡ ಈ ವಿಡಿಯೋವನ್ನು ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ. ಡೆಲಿವರಿ ಬಾಯ್ಸ್ ದಿನನಿತ್ಯದ ಕೆಲಸದ ಒತ್ತಡದ ನಡುವೆ, ಇದೊಂದು ಒಳ್ಳೆಯ ಬದಲಾವಣೆಯನ್ನು ತಂದಿದೆ ಎಂದು ಈ ವಿಡಿಯೋದಲ್ಲಿ ಹೇಳಿಕೊಳ್ಳಲಾಗಿದೆ. ಡೆಲಿವರಿ ಹುಡುಗರ ಮುಖದಲ್ಲಿ ಖುಷಿಗೆ ತಂದ ಯುವಕರಿಗೆ ನೆಟ್ಟಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋವನ್ನು ಮಯೂರೇಶ್ ಗುಜಾರ್ ಎಂಬುವವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಡೆಲಿವರಿ ಬಾಯ್ಸ್ ತಮ್ಮ ಆರ್ಡರ್ಗಳನ್ನು ಕೊಡಲು ಬರುತ್ತಿದ್ದ ವೇಳೆ, ಪ್ಲಾಟ್ನ ಕೆಳಗೆ ಆಡುತ್ತಿದ್ದ ಯುವಕರನ್ನು ನೋಡಿಕೊಂಡು ಬರುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋದಲ್ಲಿ ಯುವಕರ ತಂಡದಲ್ಲಿದ್ದ ಒಬ್ಬರು ಬಂದು ನಮ್ಮ ಜತೆಗೆ ಆಟಕ್ಕೆ ಸೇರಿಕೊಳ್ಳಿ ಎಂದು ಹೇಳುತ್ತಿರುವುದನ್ನು ನೋಡಬಹುದು. ಏನಾದರೂ ಆಗಲಿ, ಒಂದು ಕೈ ನೋಡಿಯೇ ಬಿಡೋಣ ಎಂದು ಡೆಲಿವರಿ ಬಾಯ್ಸ್ ಕೂಡ ಆಟಕ್ಕೆ ಇಳಿಯುತ್ತಾರೆ. ತುಂಬಾ ಖುಷಿಯಲ್ಲಿ ಎಲ್ಲರೂ ಪಂದ್ಯ ಆಡುತ್ತಾರೆ. ಎಲ್ಲ ಒತ್ತಡಗಳನ್ನು ಮರೆತು ಯುವಕರ ಜತೆಗೆ, ಈ ಡೆಲಿವರಿ ಬಾಯ್ಸ್ ಆಡಿರುವುದು ನೆಟ್ಟಿಗರಿಗೂ ಸಂತೋಷ ತಂದಿದೆ. ಇನ್ನು ಪಂದ್ಯದಲ್ಲಿ ಭಾಗವಹಿಸಿದ ಡೆಲಿವರಿ ಬಾಯ್ಸ್ಗೆ ವಿಜೇತ ಪದಕವನ್ನು ಕೂಡ ನೀಡುತ್ತಾರೆ.
ಇದನ್ನೂ ಓದಿ: ಪ್ರಯಾಣಿಕ ಮರೆತುಹೋದ ಹಣದ ಬ್ಯಾಗ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬೆಂಗಳೂರಿನ ಆಟೋ ಚಾಲಕ
ಇಲ್ಲಿದೆ ನೋಡಿ ವಿಡಿಯೋ:
View this post on Instagram
ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ಪಡೆದ ಯುವಕರ ತಂಡ
ಇಂದೊಂದು ಆರೋಗ್ಯಕರ ಕ್ಷಣ ಎಂದು ಕೆಲವು ನೆಟ್ಟಿಗರು ಹೇಳಿದ್ದಾರೆ. ಅಪರೂಪಕ್ಕೆ ಸಿಗುವ ಈ ಡೆಲಿವರಿ ಬಾಯ್ಸ್ಗೂ ಒಂದು ಅವಕಾಶ ನೀಡಿದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ. ಯಾವುದೇ ಲಾಭ ಇಲ್ಲದೆ ಅವರನ್ನು ಖುಷಿಪಡಿಸಿದ ನೀವು ನಮ್ಮ ಮನಸ್ಸು ಗೆದ್ದಿದ್ದೀರಿ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಅವರು ಮಕ್ಕಳಂತೆ ನಗುತ್ತಿದ್ದಾರೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




