ಫ್ರಾನ್ಸ್ ರಾಜಧಾನಿ ಪ್ಯಾರಿಸ್ ಬಳಿ ಇರುವ ವಿಶ್ವದ ಅತ್ಯಂತ ದುಬಾರಿ ಮನೆ ಇದೀಗ ಭಾರೀ ಸುದ್ದಿಯಲ್ಲಿದೆ. ಯಾಕೆಂದರೆ ಈ ಭವ್ಯ ಅರಮನೆ ಇದೀಗ ಮಾರಾಟಕ್ಕೆ ಸಿದ್ಧವಾಗಿದೆ. ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ಮನೆ 100 ಕೊಠಡಿಗಳನ್ನು ಹೊಂದಿದೆ. ಒಂದು ಕಾಲದಲ್ಲಿ ರಾಜಮನೆತನದ ಆಸ್ತಿಯಾಗಿದ್ದ ಈ ಮನೆ ಎಲ್ಲ ರೀತಿಯ ಐಷಾರಾಮಿ ಸೌಲಭ್ಯಗಳನ್ನು ಒಳಗೊಂಡಿದೆ. ಸದ್ಯ ಈ ಮನೆಯ ಬೆಲೆ ಕೇಳಿ ಕೋಟ್ಯಾಧಿಪತಿಗಳು ಕೂಡ ಅದನ್ನು ಖರೀದಿಸುವ ಮೊದಲು 10 ಬಾರಿ ಯೋಚಿಸುತ್ತಾರೆ. ಮಾರುಕಟ್ಟೆಯಲ್ಲಿ ಇದರ ಬೆಲೆ 363 ಮಿಲಿಯನ್ ಪೌಂಡ್ ಅಂದರೆ ರೂ. 3743 ಕೋಟಿ ರೂ.ಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ.
ಪ್ಯಾರಿಸ್ ಬಳಿಯ ಸೀನ್-ಎಟ್-ಮಾರ್ನೆಯಲ್ಲಿ ನೆಲೆಗೊಂಡಿರುವ ಈ ಮನೆಯನ್ನು ‘ಚಟೌ ಡಿ’ಅರ್ಮೆನ್ವಿಲಿಯರ್ಸ್’ ಎಂದು ಕರೆಯಲಾಗುತ್ತದೆ. ಇದು ವಿಶ್ವದ ಅತ್ಯಂತ ದುಬಾರಿ ಮನೆ ಎಂದು ಪರಿಗಣಿಸಲಾಗಿದೆ. ಈ ಭವ್ಯ ಕಟ್ಟಡವನ್ನು 12 ನೇ ಶತಮಾನದ ಅರಮನೆಯ ಅಡಿಪಾಯದ ಮೇಲೆ ನಿರ್ಮಿಸಲಾಗಿದೆ. 19 ನೇ ಶತಮಾನದ ಉತ್ತರಾರ್ಧದಲ್ಲಿ ರಾಥ್‌ಸ್ಚೈಲ್ಡ್ ಬ್ಯಾಂಕಿಂಗ್ ಸಾಮ್ರಾಜ್ಯದಿಂದ ಖರೀದಿಸಲಾದ ಈ ಅರಮನೆಯನ್ನು 1980 ರ ದಶಕದಲ್ಲಿ ಮೊರಾಕೊದ ಕಿಂಗ್ ಹಸನ್ II ಖರೀದಿಸಿದ್ದರು.
ಮತ್ತಷ್ಟು ಓದಿ: Viral News: ಶ್ರೀಕೃಷ್ಣನ ಮೂರ್ತಿಯನ್ನೇ ಮದುವೆಯಾದ 23ರ ಯುವತಿ
ನಂತರ 2008 ರಲ್ಲಿ ಅವರು ಈ ಬೃಹತ್ ಆಸ್ತಿಯನ್ನು ಅಪರಿಚಿತ ಖರೀದಿದಾರರಿಗೆ ಮಾರಾಟ ಮಾಡಲಾಯಿತು. ಆಗ ಇದರ ಬೆಲೆ 170 ಮಿಲಿಯನ್ ಪೌಂಡ್ ಆಗಿತ್ತು ಆದರೆ ಈಗ ಈ ಮನೆಯ ಬೆಲೆ ಸುಮಾರು 425 ಮಿಲಿಯನ್ ಪೌಂಡ್ ಆಗಿರಬಹುದು ಎಂದು ಕೆಲವು ರಿಯಲ್ ಎಸ್ಟೇಟ್ ಏಜೆಂಟರು ಮತ್ತು ತಜ್ಞರು ತಿಳಿಸಿರುವುದು ವರದಿಯಾಗಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:01 am, Mon, 22 April 24