ಐಷಾರಾಮಿ ಮನೆಯಲ್ಲಿ ವಾಸಿಸುತ್ತಿದ್ದ ಮಹಿಳೆಯ ಹತ್ಯೆ, ಕೊಲೆ ಮಾಡಿದ್ದು ವೈದ್ಯನಾ, ಕಾರು ಚಾಲಕನಾ?
ಪತಿ ಮತ್ತು ಮಗ ನಿಧನವಾದ ನಂತರ ಶಾಂತಿ ಸ್ಟೀಲ್ ಇಂಡಸ್ಟ್ರೀಸ್ ಮಾಲಿಕ ಉದ್ಯಮಿ ಉಗ್ರಪ್ಪ ಪತ್ನಿ ಶಾಂತಮ್ಮ (50) ಏಕಾಂಗಿಯಾಗಿ ಕಗ್ಗಲಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗಿರಿಗೌಡನ ದೊಡ್ಡಿಯಲ್ಲಿರುವ ಫಾರ್ಮ್ ಹೌಸ್ನಲ್ಲಿ ವಾಸವಾಗಿದ್ದರು. ಮಾರ್ಚ್ 6 ರಂದು ಫಾರ್ಮ್ ಹೌಸ್ನಲ್ಲಿ ಶಾಂತಮ್ಮ ಅವರ ಶವ ಪತ್ತೆಯಾಗುತ್ತದೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದಾಗ, ಅಚ್ಚರಿ ವಿಚಾರಗಳು ತಿಳಿಯುತ್ತವೆ.
ರಾಮನಗರ, ಏಪ್ರಿಲ್ 10: ರಾಮನಗರ ಜಿಲ್ಲೆಯ ಕಗ್ಗಲಿಪುರ ಪೊಲೀಸ್ (Police) ಠಾಣಾ ವ್ಯಾಪ್ತಿಯ ಗಿರಿಗೌಡನ ದೊಡ್ಡಿಯಲ್ಲಿರುವ ಫಾರ್ಮ್ ಹೌಸ್ನಲ್ಲಿ ಮಹಿಳೆ ಶವ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದಾಗ, ಮಹಿಳೆಯನ್ನು ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಶಾಂತಿ ಸ್ಟೀಲ್ ಇಂಡಸ್ಟ್ರೀಸ್ ಮಾಲಿಕ ಉದ್ಯಮಿ ಉಗ್ರಪ್ಪ ಪತ್ನಿ ಶಾಂತಮ್ಮ (50) ಕೊಲೆಯಾದ ಮಹಿಳೆ.
ಕೊಲೆಯಾದ ಶಾಂತಿ ಅವರ ಪತಿ ಉಗ್ರಪ್ಪ ವಿವಿಧ ಉದ್ಯಮಗಳನ್ನು ಮಾಡುತ್ತಿದ್ದರು. ಪತ್ನಿಯ ಹೆಸರಿನಲ್ಲಿ “ಶಾಂತಿ ಸ್ಟೀಲ್ಸ್” ಅಂತ ಹಲವು ಎಜೆನ್ಸಿಗಳನ್ನು ನಡೆಸುತ್ತಿದ್ದರು. ಬೆಂಗಳೂರಿನ ಹೊಸಕೇರೆಹಳ್ಳಿಯಲ್ಲಿ ವಾಸಿಸುತ್ತಿದ್ದ ಕುಟುಂಬ, ಕಳೆದ ಕೆಲ ವರ್ಷಗಳ ಹಿಂದೆ ಕಗ್ಗಲಿಪುರದ ಬಳಿ ಫಾರ್ಮಹೌಸ್ ಕಟ್ಟಿದ್ದರು. ಆಗಾಗ ಇಲ್ಲಿಗೆ ಬಂದು ನೆಲೆಸುತ್ತಿದ್ದರು. ಆದರೆ ಕೆಲ ದಿನಗಳ ಬಳಿಕ ಉದ್ಯಮಿ ಉಗ್ರಪ್ಪ ಹೃದಯಾಘಾತದಿಂದ ನಿಧನವಾದರು. ಪತಿ ಅಗಲಿಕೆಯ ನೋವಿನಿಂದ ಇದ್ದ ಶಾಂತಿ, ಮಗ ಹರ್ಷಿತ್ನೊಂದಿಗೆ ವಾಸವಾಗಿದ್ದರು.
ಆದರೆ ದುರ್ದೈವ ಐದು ವರ್ಷಗಳ ಹಿಂದೆ ಮಗ ಹರ್ಷಿತ್ ಕೂಡ ಬಿಡದಿ ಬಳಿ ಅಪಘಾತದಲ್ಲಿ ಮೃತಪಟ್ಟರು. ಪತಿ ಹಾಗೂ ಮಗನ ಸಾವಿನಿಂದ ಮೃತ ಶಾಂತಮ್ಮ ಮಾನಸಿಕವಾಗಿ ಜರ್ಜರಿತವಾಗಿದ್ದರು. ಹೀಗಾಗಿ ಬೆಂಗಳೂರಿನ ಹೊಸಕರೆಹಳ್ಳಿಯ ಮನೆ ಬಿಟ್ಟು ಕಗ್ಗಲಿಪುರದ ಫಾರ್ಮ್ ಹೌಸಿನಲ್ಲಿ ವಾಸವಾಗಿದ್ದರು. ಕೊರೊನಾ ಸಂದರ್ಭದಲ್ಲಿ ತೀರಾ ಆರೋಗ್ಯ ಹದಗೆಟ್ಟ ಕಾರಣ ಶಾಂತಮ್ಮ ಅವರ ಅಕ್ಕನ ಮಗ ವೈದ್ಯ ನಂಜೇಶ್, ಶಾಂತಮ್ಮ ಅವರ ಕೇರ್ ಟೇಕ್ ಮಾಡಿ, ಫಾರ್ಮ್ ಹೌಸಿನಲ್ಲೇ ಆರಾಮವಾಗಿ ಇರುವಂತೆ ಸಲಹೆ ನೀಡಿದ್ದರು. ವೈದ್ಯ ನಂಜೇಶ್ ಕೂಡ ಆಗಾಗ ಫಾರ್ಮ್ ಹೌಸ್ಗೆ ಬಂದು ಆರೋಗ್ಯ ವಿಚಾರಿಸಿಕೊಂಡು ಹೋಗುತ್ತಿದ್ದರು.
ಮಾರ್ಚ್ 5ರ ಸಂಜೆ 6:30ಕ್ಕೆ ಚಾಲಕ ವಿರೇಶ್ನನ್ನು ಕರೆದುಕೊಂಡು ಶಾಂತಮ್ಮ ಹೊರಗಡೆ ಹೋಗಿದ್ದರು. ರಾತ್ರಿ ಫಾರ್ಮ್ ಹೌಸಿಗೆ ಮರಳಿದ್ದಾರೆ. ಶಾಂತಮ್ಮ ಕೂತಿದ್ದ ಕಾರು ಒಳ ಬಂದ ಬಳಿಕ ಚಾಲಕ ಶಾಂತಮ್ಮ ಅವರನ್ನು ಕೆಳಗಿಳಿಯಲು ಹೇಳಿದ್ದಾನೆ. ಚಾಲಕ ಕಾರು ಪಾರ್ಕ್ ಮಾಡುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಮಾರಕಾಸ್ತ್ರದಿಂದ ಹಿಂಬದಿಯಿಂದ ಶಾಂತಮ್ಮ ಅವರ ತೆಲೆಗೆ ಹೊಡೆದಿದ್ದಾನೆ. ಇದರಿಂದ ಶಾಂತಮ್ಮ ಕುಸಿದು ಬಿದ್ದಿದ್ದಾರೆ. ಶಾಂತಮ್ಮ ನೆಲಕ್ಕೆ ಬಿದ್ದ ಮೇಲೆಯೂ ತಲೆಗೆ ಹಲವು ಬಾರಿ ಹಲ್ಲೆ ಮಾಡಿರುವ ಆರೋಪಿ, ಶಾಂತಮ್ಮ ಸತ್ತಿದ್ದಾರಾ ಅಂತ ಕಚಿತಪಡಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ.
ಇದನ್ನೂ ಓದಿ: ವಿಡಿಯೋ ಕಾಲ್ನಲ್ಲಿ ಬೆಂಗಳೂರು ಮಹಿಳೆಯ ಬೆತ್ತಲಾಗಿಸಿ 14.57 ಲಕ್ಷ ರೂ. ಎಗರಿಸಿದ ಸೈಬರ್ ವಂಚಕರು!
ಒಬ್ಬಂಟಿ ಮಹಿಳೆಯೊಬ್ಬರು ವಾಸಿಸುತ್ತಿದ್ರೂ, ಬೆಳಗಿನ ಜಾವ ವಾಕಿಂಗ್ ಬರುತ್ತಿದ್ದ ಶಾಂತಮ್ಮ ಅವತ್ತು ಹೊತ್ತೇರಿದರೂ ಹೊರಗಡೆ ಬಂದಿರಲಿಲ್ಲ. ಅನುಮಾನಗೊಂಡ ಸ್ಥಳೀಯರು ಮನೆ ಬಳಿ ಬಂದು ನೋಡಿದಾಗ ಶಾಂತಮ್ಮ ಅವರ ಮೃತದೇಹ ಕಂಡಿದೆ. ಕೂಡಲೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಕಗ್ಗಲಿಪುರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ಬಳಿಕ ಶಾಂತಮ್ಮ ಅವರ ಕಾರು ಚಾಲಕ ವಿರೇಶ್ ಸ್ಥಳೀಯರಿಗೆ ಕರೆ ಮಾಡಿ “ನಾನು ಮಂಗಳೂರಿನಿಂದ ಕರೆ ಮಾಡುತ್ತಿದ್ದೇನೆ. ಯಾರೋ ಅಪರಿಚಿತರು ಒಳ ನುಗ್ಗಿ ಶಾಂತಮ್ಮ ಹಾಗೂ ನನ್ನ ತಲೆಗೆ ಹೊಡೆದರು. ನಾನು ಹೇಗೋ ಕಷ್ಟಪಟ್ಟು ಬದುಕಿದೆ. ಆದರೆ ಶಾಂತಮ್ಮ ಅವರ ಪರಿಸ್ಥಿತಿ ಹೇಗಿದೆ ನನಗೆ ಗೊತ್ತಿಲ್ಲ ಅಂತ ಹೇಳಿದ್ದಾನೆ. ಇದೆ ವಿಚಾರವನ್ನು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ.
ಇನ್ನು ಚಾಲಕ ವಿರೇಶ್ ಹೇಳುವ ಪ್ರಕಾರ, ಹಲ್ಲೆ ನಡೆದ ಕೂಡಲೇ ತನನ್ನು ತಾನು ಬಚಾವ್ ಮಾಡಿಕೊಳ್ಳಲು ಅಲ್ಲಿಂದ ಮಂಗಳೂರಿಗೆ ಹೋಗಿರುವುದಾಗಿ ಹೇಳಿದ್ದಾನೆ. ಆದರೆ ತನ್ನನ್ನು ಬಚಾವ್ ಮಾಡಿಕೊಳ್ಳಲೇ ಬೇಕಿದ್ದರೆ 500 ಕಿ.ಮಿ ದೂರ ಇರುವ ಮಂಗಳೂರು ಹೋಗುವ ಬದಲು 5 ಕಿಮಿ ದೂರದಲ್ಲಿರುವ ಕಗ್ಗಲಿಪುರ ಪೊಲೀಸ್ ಠಾಣೆಗೆ ಬರಬಹುದಿತ್ತಲ್ವಾ ಎಂಬ ಪ್ರಶ್ನೆಗೆ ಚಾಲಕ ವಿರೇಶ್ ಬಳಿ ಯಾವುದೆ ಉತ್ತರ ಇಲ್ಲವೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಶಾಂತಮ್ಮ ತನ್ನ ಕೋಟ್ಯಾಂತರ ಆಸ್ತಿಯ ವಿಲ್ನ್ನು ತನ್ನ ಅಕ್ಕನ ಮಗ ವೈದ್ಯ ನಂಜೇಶ್ ಅವರ ಹೆಸರಿಗೆಮಾಡಿದ್ದಾರೆ. ಕನಕಪುರ ಸೇರಿದಂತೆ ಹಲವು ಕಡೆ ಆಸ್ತಿ ಇದ್ದು ಬಹುಕೋಟಿ ಮೌಲ್ಯದ ಹಲವು ಜಾಗಗಳನ್ನು ನಂಜೇಶ್ ಅವರ ಹೆಸರಿಗೆ ಮಾಡಲಾಗಿದೆ. ತಾನು ಸತ್ತ ಬಳಿಕ ಇವೆಲ್ಲವೂ ನೀನೆ ನೋಡಿಕೊ ಎಂದಿದ್ದ ಶಾಂತಮ್ಮ, ಇತ್ತೀಚೆಗೆ ತಮ್ಮ ಆಸ್ತಿ ಬಡವರಿಗೆ ದಾನ ಮಾಡಬೇಕು ಅಂತ ಅಂದುಕೊಂಡಿದ್ದರಂತೆ. ತಾವಿರುವ ಫಾರ್ಮ್ ಹೌಸ್ ಕೂಡ ರಾಮಕೃಷ್ಣ ಶಾಂತಿಧಾಮ ಮಾಡಬೇಕು, ಬಡ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತನ್ನೆಲ್ಲ ಆಸ್ತಿ ದಾನ ಮಾಡಬೇಕು ಅಂತ ನಿರ್ಧಾರ ಮಾಡಿದ್ದರಂತೆ. ಅಷ್ಟೆ ಅಲ್ಲದೆ ಆಶ್ರಮ ನಿರ್ಮಾಣಕ್ಕೆ ದುಡ್ಡು ಕೂಡ ದಾನವಾಗಿ ನೀಡಿದ್ದರು ಎನ್ನಲಾಗಿದೆ. ಈ ವಿಚಾರಕ್ಕೆ ಆಗಾಗ ಕುಟುಂಬಸ್ಥರಲ್ಲಿ ಮಾತಿನ ಚಕಮಕಿಯೂ ನಡೆದಿತ್ತು ಎನ್ನಲಾಗಿದೆ.
ಆದರೆ ಕೆಲ ತಿಂಗಳುಗಳ ಹಿಂದೆ ಚಾಲಕನಾಗಿ ಕೆಲಸಕ್ಕೆ ಸೇರಿಕೊಂಡ ಚಾಲಕ ವಿರೇಶ್ ನಡೆ ಅನುಮಾನ ಆಗಿತ್ತು ಅಂತ ವೈದ್ಯ ನಂಜೇಶ್ ಪೊಲಿಸರಿಗೆ ಮಾಹಿತಿ ನೀಡಿದ್ದಾರೆ. ಇದರ ಅನ್ವಯ ಚಾಲಕ ವಿರೇಶ್ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ. ವಿಚಾರಣೆ ವೇಳೆ ಮಹತ್ವದ ಸುಳಿವು ಪಡೆದುಕೊಂಡಿರುವ ರಾಮನಗರ ಪೊಲೀಸರು, ಬೆಂಗಳೂರಿನ ಹೊಸಕೇರಿಹಳ್ಳಿಯಲ್ಲಿರುವ ಮನೆಯ ಸಿಸಿಟಿವು ಡಿವಿಆರ್ ಮಂಗಳೂರನಿಂದ ವಶ ಪಡಿಸಿಕೊಂಡಿದ್ದಾರೆ. ಇದರರ್ಥ ಕೊಲೆ ನಡೆದ ಬಳಿಲ ಹೊಸಕೆರೆಹಳ್ಳಿಯ ಮನೆಯಲ್ಲಿನ ಹಣ ಒಡವೆ ದೋಚಲು ಅಲ್ಲಿ ಯಾರೋ ಹೋಗಿವರುವ ಮಾಹಿತಿ ಖಚಿತಗೊಂಡಿದೆ. ಅಲ್ಲದೆ ಇಪ್ಪತ್ತೆರಡು ವರ್ಷದ ಒಬ್ಬ ಮುಸ್ಲಿಂ ಯುವಕನನ್ನು ವಶಕ್ಕೆ ಪಡೆದಿರುವ ಪೊಲೀಸರು, ಮಾರ್ಚ್ 5ರ ಸಂಜೆ 6:30ಕ್ಕೆ ಮುಸ್ಲಿಂ ಯುವಕ ಎಲ್ಲಿದ್ದ ಎಂಬ ಖಚಿತ ಮಾಹಿತಿ ಪಡೆಯಲು ಅಂದಿನ ಆತನ ಲೊಕೆಶನ್ ಡೇಟಾ ಪರಿಶೀಲನೆ ಮಾಡುತ್ತಿದ್ದಾರೆ.
ಎರಡು ಆಯಾಮಾಗಳಲ್ಲಿ ಪ್ರಕರಣವನ್ನು ತನಿಖೆ ಮಾಡುತ್ತಿರುವ ಕಗ್ಗಲಿಪುರ ಪೊಲೀಸರು ಇನ್ನೂ ಯಾವುದೇ ಉಪಸಂಹಾರಕ್ಕೆ ಬಂದಿಲ್ಲ. ಇಡೀ ಆಸ್ತಿ ತನ್ನ ಹೆಸರಿಗೆನೇ ಬರೆದುಕೊಟ್ಟ ಶಾಂತಮ್ಮ ಕೊಲೆಗೆ ವೈದ್ಯ ನಂಜೇಶ್ ಸುಪಾರಿ ಕೊಟ್ಟಿದ್ನಾ, ಅಥವಾ ಮನೆಯಲ್ಲಿದ್ದ ಚಿನ್ನಾಭರಣ ದೋಚಲು ಮುಸ್ಲಿಂ ಯುವಕನ ಸಹಾಯ ಪಡೆದು ಚಾಲಕ ವಿರೇಶ್ ಮಾಡಿದ ಕುತಂತ್ರವೇ? ಅಂತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.