Viral : ನೀನ್ ಸ್ನಾನ ಮಾಡಲ್ಲ, ಮೂರು ದಿನ ಒಂದೇ ಒಳಉಡುಪು ಧರಿಸ್ತೀಯಾ, ನೀನು ನನಗೆ ಬೇಡ ಎಂದ ಪತ್ನಿ

ಏನೇ ಹೇಳಿ ಈಗಿನ ಕಾಲದ ದಂಪತಿಗಳ ನಡುವೆ ಹೊಂದಾಣಿಕೆ ಅನ್ನೋದೇ ಇಲ್ಲ. ಸಣ್ಣ ಪುಟ್ಟ ವಿಷ್ಯಕ್ಕೂ ಜಗಳ, ಮನಸ್ತಾಪ ಮಾಡಿಕೊಳ್ತಾರೆ. ಹೀಗಾಗಿಯೇ ಇತ್ತೀಚೆಗಿನ ದಿನಗಳಲ್ಲಿ ದಂಪತಿಗಳು ಡಿವೋರ್ಸ್‌ ಪಡೆದುಕೊಳ್ಳುವ ಪ್ರಕರಣಗಳು ತೀರಾ ಹೆಚ್ಚಾಗುತ್ತಿದೆ. ಹೌದು, ವಿದೇಶಗಳಲ್ಲಿ ಕಾಮನ್‌ ಎನ್ನುವಂತಿದ್ದ ಡಿವೋರ್ಸ್‌ ಈಗ ಭಾರತದಲ್ಲಿಯೂ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಇದೀಗ ಇಲ್ಲೊಬ್ಬಳು ಮಡದಿ ಡಿವೋರ್ಸ್ ನೀಡಲು ನೀಡಿದ ಕಾರಣ ಕೇಳಿದ್ರೆ ಶಾಕ್ ಆಗ್ತೀರಾ. ಹೌದು ಗಂಡನ ಈ ಅಭ್ಯಾಸದಿಂದ ಬೇಸತ್ತ ಪತ್ನಿಯೂ ಪತಿಗೆ ವಿಚ್ಛೇದನ ಪತ್ರ ಬರೆದಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಇದನ್ನು ನೋಡಿ ಶಾಕ್ ಆಗಿದ್ದಾರೆ.

Viral : ನೀನ್ ಸ್ನಾನ ಮಾಡಲ್ಲ, ಮೂರು ದಿನ ಒಂದೇ ಒಳಉಡುಪು ಧರಿಸ್ತೀಯಾ, ನೀನು ನನಗೆ ಬೇಡ ಎಂದ ಪತ್ನಿ
ವೈರಲ್ ಪೋಸ್ಟ್

Updated on: Jul 07, 2025 | 4:21 PM

ನಮ್ಮ ಅಜ್ಜ ಅಜ್ಜಿ ಕಾಲದಲ್ಲಿಯೇ ದಾಂಪತ್ಯ ಜೀವನವೇ (married life) ಚೆನ್ನಾಗಿತ್ತು. ಆ ಕಾಲದಲ್ಲಿ ದಂಪತಿಗಳ ನಡುವೆ ಎಷ್ಟೇ ಮನಸ್ತಾಪಗಳು ಬರಲಿ, ಮಾತುಕತೆಯ ಮೂಲಕ ಇಲ್ಲದಿದ್ದರೆ ಹಿರಿಯರ ಮುಂದೆ ನಿಂತು ಇಂತಹ ಮನಸ್ತಾಪಗಳನ್ನು ಬಗೆಹರಿಸಿ ಮತ್ತೆ ಒಂದಾಗಿಸುವ ಪ್ರಯತ್ನಗಳು ನಡೆಯುತ್ತಿತ್ತು. ಆದರೆ ಇದೀಗ ಸಣ್ಣ ಪುಟ್ಟ ವಿಷಯಕ್ಕೂ ಡಿವೋರ್ಸ್ (divorce), ಕೋರ್ಟ್ ಮೆಟ್ಟಿಲೇರುವುದು ಕಾಮನ್ ಆಗಿ ಬಿಟ್ಟಿದೆ. ಆದರೆ ಇಲ್ಲೊಬ್ಬಳು ಮಡದಿ ಪತಿಯ ಈ ಕೆಟ್ಟ ಅಭ್ಯಾಸದಿಂದ ಬೇಸೆತ್ತು ಹೋಗಿದ್ದಾಳೆ. ಹೀಗಾಗಿ ಪತಿಯ ಈ ಕೆಟ್ಟ ಅಭ್ಯಾಸದ ಬಗ್ಗೆ ಈ ಪತ್ರದಲ್ಲಿ ಉಲ್ಲೇಖಿಸಿದ್ದು, ನೀನು ಮೂರು ದಿನಗಳ ಕಾಲ ಒಂದೇ ಒಳ ಉಡುಪು ಧರಿಸ್ತೀಯಾ ಎಂದಿದ್ದಾಳೆ. ಈ ಪತ್ರ ವೈರಲ್ ಆಗುತ್ತಿದ್ದು, ಬಳಕೆದಾರರು ಈ ಪತಿಯ ಪರಿಸ್ಥಿತಿಯನ್ನು ನೆನೆದು ಬಿದ್ದು ಬಿದ್ದು ನಕ್ಕಿದ್ದಾರೆ.

ವಿಚ್ಛೇದನ ಪತ್ರದಲ್ಲಿ ಏನಿದೆ?

ಪತಿಗೆ ವಿಚ್ಛೇದನ ಪತ್ರ ಬರೆದಿದ್ದು ಇದರಲ್ಲಿ ಪತ್ನಿಯು ಕೆಲವು ವಿಷಯಗಳನ್ನು ಉಲ್ಲೇಖಿಸಿರುವುದನ್ನು ಕಾಣಬಹುದು. ಈ ಪತ್ರದಲ್ಲಿ “ಪ್ರಿಯ ಅಂಕಿತ್, ನೀನು ಅಯೋಗ್ಯ “ಪ್ರೇಮಿ”. ನನಗೆ ನಿನ್ನಿಂದ ಬೇಸತ್ತಿದ್ದೇನೆ. ನನಗೆ ಇನ್ನು ಮುಂದೆ ಅದನ್ನು ಸಹಿಸಲು ಸಾಧ್ಯವಿಲ್ಲ. ಈ ಮದುವೆಯಲ್ಲಿ ನಾನು ಬದುಕಲು ಸಾಧ್ಯವಿಲ್ಲ. ನೀನು ಸ್ನಾನ ಮಾಡುವುದಿಲ್ಲ, ನೀನು ಮೂರು ದಿನಗಳವರೆಗೆ ಅದೇ ಒಳ ಉಡುಪು ಧರಿಸುತ್ತೀಯ. ನೀನು ತಪ್ಪಾಗಿ ಸ್ನಾನ ಮಾಡಿದ ದಿನ, ನೀನು ಟವೆಲ್ ಮತ್ತು ಹಾಸಿಗೆಯನ್ನು ಎಸೆಯುತ್ತೀಯ, ಹಣಕ್ಕೆ ಯಾವುದೇ ಮೌಲ್ಯವಿಲ್ಲ, ನೀನು 80 ಸಾವಿರ ಮೌಲ್ಯದ ಏನೂ ಇಲ್ಲದ ಫೋನ್ ಖರೀದಿಸಿದೆ. ಅದಕ್ಕೆ ಹೆಸರಿಲ್ಲ, ಅದು ಯಾವುದೇ ವೈಶಿಷ್ಟ್ಯಗಳನ್ನು ನೀಡುವುದಿಲ್ಲ. ನೀನು ಫ್ಲಶ್ ಕೂಡ ಮಾಡುವುದಿಲ್ಲ. ನನ್ನ ವಕೀಲರು ನಿಮಗೆ ವಿಚ್ಛೇದನ ಪತ್ರಗಳನ್ನು ಕಳುಹಿಸುತ್ತಾರೆ. ಶುಭವಾಗಲಿ ಎಂದು ಬರೆದುಕೊಂಡಿರುವುದನ್ನು ಕಾಣಬಹುದು.

ಇದನ್ನೂ ಓದಿ
ರ‍್ಯಾಂಪ್ ವಾಕ್ ಮಾಡುವಾಗ ಮಾಡೆಲ್‌ಗಳು ನಗುವುದಿಲ್ಲ, ಯಾಕೆ ಗೊತ್ತಾ?
ಈ ಬುಡಕಟ್ಟಿನ ಹೆಣ್ಣು ಮಕ್ಕಳು ತುಟಿಯನ್ನೇ ತೂತು ಮಾಡ್ತಾರೆ? ಯಾಕೆ ಗೊತ್ತಾ?
ಕಂದಮ್ಮನಿಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಕರೆದುಕೊಂಡು ಬಂದ ತಾಯಿ ಬೆಕ್ಕು
ಚಾಟ್ ಜಿಪಿಟಿ ಸಲಹೆ ಪಡೆದು 30 ದಿನಗಳಲ್ಲಿ ಹತ್ತು ಲಕ್ಷ ಸಾಲ ತೀರಿಸಿದ ಮಹಿಳೆ

ಇದನ್ನೂ ಓದಿ :Video : ಭಾರತದಲ್ಲಿ ಇಷ್ಟೊಂದು ಕಸನಾ? ನಾನು ಇಷ್ಟೊಂದು ಕೊಳಕು ಎಂದಿಗೂ ನೋಡಿಲ್ಲ ಎಂದ ಫ್ರೆಂಚ್ ಮಹಿಳೆ

ಈ ಪತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಕಾಮೆಂಟ್‌ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು ಡಿವೋರ್ಸ್‌ಗೆ ಓಕೆ ಹೇಳಿ ಬಿಡು, ಇಂತಹ ಹೆಂಡ್ತಿಯನ್ನು ಹೇಗೆ ಸಹಿಸಿಕೊಳ್ತೀಯಾ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬರು, ಡಿವೋರ್ಸ್‌ಗೆ ಇದು ಕಾರಣವಾಗುತ್ತಾ, ಗಂಡ್ಮಕ್ಕಳೇ ಹುಷಾರು ಕಣ್ರಪ್ಪ ಎಂದಿದ್ದಾರೆ. ಮತ್ತೊಬ್ಬರು, ಡಿವೋರ್ಸ್ ಅನ್ನೋದು ಮಕ್ಕಳಾಟ ಎನ್ನುವಂತಾಗಿದೆ, ಹೀಗೆ ಆದ್ರೆ ಮದ್ವೆಗೆ ಏನ್ ಅರ್ಥ ಇದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:19 pm, Mon, 7 July 25