Video: ಹೆಂಡ್ತಿರು ಕಾಲ್ ಮಾಡಿ ಐ ಲವ್ ಯು ಹೇಳಿದಾಗ ಗಂಡಂದಿರ ರಿಯಾಕ್ಷನ್ ಹೇಗಿತ್ತು ನೋಡಿ
ಪ್ರತಿ ದಿನ ಐ ಲವ್ ಯು ಹೇಳೋ ಬದ್ಲು ಅಪರೂಪಕ್ಕೊಮ್ಮೆ ಗಂಡನಿಗೆ ಐ ಲವ್ ಯೂ ಅಂತ ಹೇಳಿದ್ರೆ ಏನ್ ಫಜೀತಿ ಆಗುತ್ತೆ ಎಂದು ತೋರಿಸುವ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ. ಹೌದು ಲೇಡಿ ಫ್ರೆಂಡ್ಸ್ ಎಲ್ಲಾ ಸೇರಿ ತಮ್ಮ ಗಂಡಂದಿರಿಗೆ ಕಾಲ್ ಮಾಡಿ ಸಡನ್ ಆಗಿ ಐ ಲವ್ ಯು ಅಂತ ಹೇಳಿದ್ದು, ಪತ್ನಿಯರ ಈ ಮಾತನ್ನು ಕೇಳಿ ಗಂಡಂದಿರು ಫುಲ್ ಶಾಕ್ ಆಗಿದ್ದಾರೆ.

ಸಂಗಾತಿಗಳು ಪ್ರೀತಿಯಲ್ಲಿರುವಾಗ ಅಥವಾ ಮದುವೆಯಾದ ಹೊಸತರಲ್ಲಿ ಪ್ರತಿನಿತ್ಯ ಐ ಲವ್ ಯು ಅಂತೆಲ್ಲಾ ಹೇಳೋದು ಕಾಮನ್ ಆಗಿರುತ್ತೆ. ಆದ್ರೆ ಸಮಯ ಕಳೆದಂತೆ ಹೆಂಡತಿ ಪ್ರತಿನಿತ್ಯ ಗಂಡನಿಗೆ ಅಥವಾ ಗಂಡ ಹೆಂಡತಿಗೆ (Husband and Wife) “ಐ ಲವ್ ಯೂ” (I love you) ಎಂದು ಪ್ರೀತಿ ತೋರಿಸುವುದು ಕಮ್ಮಿಯಾಗುತ್ತಾ ಬರುತ್ತದೆ. ಹೀಗೆ ಆಗೊಮ್ಮೆ ಹೀಗೊಮ್ಮೆ ಐ ಲವ್ ಯೂ ಹೇಳಿದ್ರೂ ಸಂಗಾತಿಗಳು ಒಮ್ಮೆಲೆ ಶಾಕ್ ಆಗಿ ಬಿಡುತ್ತಾರೆ. ಇದಕ್ಕೆ ಉತ್ತಮ ಉದಾಹರಣೆಯಂತಿರುವ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದ್ದು, ಲೇಡಿಸ್ ಫ್ರೆಂಡ್ಸ್ ಎಲ್ಲಾ ಸೇರಿ ತಮ್ಮ ತಮ್ಮ ಗಂಡಂದಿರಿಗೆ ಕಾಲ್ ಮಾಡಿ ಸಡನ್ ಆಗಿ ಐ ಲವ್ ಯು ರೀ ಎಂದು ಹೇಳಿದಾಗ, ಗಂಡಂದಿರು ಫುಲ್ ಶಾಕ್ ಆಗಿದ್ದಾರೆ. ಈ ಫನ್ನಿ ದೃಶ್ಯವನ್ನು ಕಂಡು ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ಹೆಂಡ್ತಿರೂ ಐ ಲವ್ ಯು ಹೇಳಿದ್ರೆ ಗಂಡಂದಿರ ರಿಯಾಕ್ಷನ್ ಹೇಗಿತ್ತು ನೋಡಿ:
ಅಪರೂಪಕ್ಕೊಮ್ಮೆ ಸಂಗಾತಿಗೆ ಐ ಲವ್ ಯೂ ಹೇಳಿದ್ರೆ ಏನಾಗುತ್ತೆ ಎಂದು ತೋರಿಸುವ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ. ಗೆಳತಿಯರೆಲ್ಲರೂ ಸೇರಿ ತಮ್ಮ ಗಂಡಂದಿರಿಗೆ ಫೋನ್ ಹಚ್ಚಿ ಐ ಲವ್ ಅಂದ್ರೆ ಅವರ ರಿಯಾಕ್ಷನ್ ಹೇಗಿರುತ್ತೆ ನೋಡೋಣ ಎಂದು ಪ್ಲಾನ್ ಮಾಡಿ ತಮ್ಮ ತಮ್ಮ ಗಂಡಂದಿರಿಗೆ ಕಾಲ್ ಮಾಡಿ ಐ ಲವ್ ಯು ಹೇಳಿದ್ದು, ಅಬ್ಬಬ್ಬಾ ಇದೇನಪ್ಪಾ ಹೆಂಡ್ತಿರೂ ಹೀಗ್ ಹೇಳ್ತಿದ್ದಾರಲ್ಲ ಎಂದು ಹೆಂಡ್ತಿಯರ ಮಾತು ಕೇಳಿ ಗಂಡಂದಿರು ಫುಲ್ ಶಾಕ್ ಆಗಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
This is what happens when you say “I Love You” to the people who’re meant to say “I am Sorry” by default. Our system hangs to “Kya Hua” 😭😭🤣🤣 pic.twitter.com/NbIdKrpBh1
— Yo Yo Funny Singh (@moronhumor) June 24, 2025
ಈ ವಿಡಿಯೋವನ್ನು Yo Yo Funny Singh ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಗೆಳತಿಯರೆಲ್ಲರೂ ಸೇರಿ ತಮ್ಮ ತಮ್ಮ ಗಂಡದಿರಿಗೆ ಫೋನ್ ಮಾಡಿ ಐ ಲವ್ ಯೂ ಎಂದು ಹೇಳುತ್ತಿರುವ ದೃಶ್ಯವನ್ನು ಕಾಣಬಹುದು. ಹೀಗೆ ಪ್ರೀತಿ ವ್ಯಕ್ತ ಪಡಿಸಿದಾಗ ಒಬ್ರ ಗಂಡ ಏನಾಗಿದೆ ನಿನ್ಗೆ ಎಂದು ಕೇಳಿದ್ರೆ, ಇನ್ನೊಬ್ರ ಗಂಡ ʼಏನಾಯ್ತೂ ಎಲ್ಲಾ ಸರಿ ಇದೆ ತಾನೇʼ ಎಂದು ಹೇಳಿದ್ದಾರೆ. ಆದ್ರೆ ಯಾರೊಬ್ಬರ ಗಂಡ ಕೂಡಾ ಐ ಲವ್ ಯೂ ಟೂ ಎಂದು ಹೇಳಲೇ ಇಲ್ಲ.
ಇದನ್ನೂ ಓದಿ: ಬೆಂಗಳೂರು ತೊರೆದ ಯುವ ಉದ್ಯಮಿ ದಂಪತಿ, ಕಾರಣ ತಿಳಿದ್ರೆ ಶಾಕ್ ಆಗ್ತೀರಾ
ಜೂನ್ 24 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಗಂಡಂದಿರು ಐ ಲವ್ ಯೂ ಹೇಳಬಹುದಿತ್ತು ತಾನೇʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಬಹುಶ: ಇವರು ಪ್ರತಿನಿತ್ಯ ಹೀಗೆ ಹೇಳಲ್ಲ ಎಂದು ಕಾಣಿಸುತ್ತೆ, ಅದಕ್ಕಾಗಿ ಗಂಡಂದಿರಿಗೆ ವಿಚಿತ್ರವೆನಿಸಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಈ ದೃಶ್ಯವನ್ನು ಕಂಡು ಹಿಂಗೂ ಇದ್ಯಾ ಎಂದು ನಕ್ಕಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ