ಚೀನಾ: ವ್ಯಕ್ತಿಯ ಹೊಟ್ಟೆಯಲ್ಲಿದ್ದ ಟೂತ್ ಬ್ರಷ್ ಕಂಡು ಬೆಚ್ಚಿಬಿದ್ದ ವೈದ್ಯರು, 52 ವರ್ಷಗಳಿಂದ ಹೊಟ್ಟೆಯಲ್ಲಿತ್ತು!
ವ್ಯಕ್ತಿಯ ಹೊಟ್ಟೆಯೊಳಗೆ ಟೂತ್ ಬ್ರಷ್ ಪತ್ತೆಯಾಗಿರುವ ಘಟನೆ ಚೀನಾದಲ್ಲಿ ನಡೆದಿದೆ. ಚೀನಾದ ಈ ವ್ಯಕ್ತಿಯ ಕರುಳೊಳಗೆ ಕಳೆದ 52 ವರ್ಷಗಳಿಂದ ಈ ಬ್ರಷ್ ಸಿಲುಕಿಕೊಂಡಿತ್ತು. ಪರೀಕ್ಷೆಯ ಬಳಿಕ ವೈದ್ಯರು ಅವರಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿದ್ದಾರೆ. ಆ ವ್ಯಕ್ತಿಯ ಕರುಳೊಳಗಿಂತ 17 ಸೆಂ.ಮೀ ಉದ್ದದ ಬ್ರಷ್ ತೆಗೆದುಹಾಕಲು ವೈದ್ಯರಿಗೆ 80 ನಿಮಿಷಗಳು ಬೇಕಾಯಿತು.

ವ್ಯಕ್ತಿಯ ಹೊಟ್ಟೆಯಲ್ಲಿದ್ದ ಟೂತ್ ಬ್ರಷ್ ಕಂಡು ವೈದ್ಯರು(Doctor) ಬೆಚ್ಚಿಬಿದ್ದಿರುವ ಘಟನೆ ಚೀನಾದಲ್ಲಿ ನಡೆದಿದೆ. ಅವರಿಗೆ ಸ್ವಲ್ಪ ದಿನದಿಂದ ಹೊಟ್ಟೆ ನೋವು ಬರುತ್ತಿತ್ತು. ವೈದ್ಯರ ಬಳಿ ಹೋಗಿ ಪರೀಕ್ಷೆ ಮಾಡಿಸಿದಾಗ ಹೊಟ್ಟೆಯಲ್ಲಿ ಬ್ರಷ್ ಇರುವುದು ಪತ್ತೆಯಾಗಿದೆ. ಆ ವ್ಯಕ್ತಿ 12ನೇ ವಯಸ್ಸಿನಲ್ಲಿ ಆಕಸ್ಮಿಕವಾಗಿ ಬ್ರಷ್ ನುಂಗಿದ್ದರು. ಆದರೆ ಪೋಷಕರಿಗೆ ಹೇಳಿದರೆ ಬೈಯ್ಯಬಹುದು ಎನ್ನುವ ಭಯದಲ್ಲಿ ಹೇಳಿಯೇ ಇರಲಿಲ್ಲವಂತೆ.
ಚೀನಾದ ಈ ವ್ಯಕ್ತಿಯ ಕರುಳೊಳಗೆ ಕಳೆದ 52 ವರ್ಷಗಳಿಂದ ಈ ಬ್ರಷ್ ಸಿಲುಕಿಕೊಂಡಿತ್ತು. ಪರೀಕ್ಷೆಯ ಬಳಿಕ ವೈದ್ಯರು ಅವರಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿದ್ದಾರೆ. ಆ ವ್ಯಕ್ತಿಯ ಕರುಳೊಳಗಿಂದ 17 ಸೆಂ.ಮೀ ಉದ್ದದ ಬ್ರಷ್ ತೆಗೆದುಹಾಕಲು ವೈದ್ಯರಿಗೆ 80 ನಿಮಿಷಗಳು ಬೇಕಾಯಿತು.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಪೂರ್ವ ಚೀನಾದ ಅನ್ಹುಯಿ ಪ್ರಾಂತ್ಯದ ಯಾಂಗ್ ಎಂಬ ವ್ಯಕ್ತಿಯೊಬ್ಬರು 12ನೇ ವಯಸ್ಸಿನಲ್ಲಿ ಬ್ರಷ್ ನುಂಗಿದ್ದರು.ಬ್ರಷ್ ತಾನಾಗಿಯೇ ಕರಗುತ್ತದೆ ಎಂದು ಯಾಂಗ್ ಭಾವಿಸಿದ್ದರು. ಈ ಬ್ರಷ್ ಸಣ್ಣ ಕರುಳಿಗೆ ಹೋಗಿ ಸಿಕ್ಕಿಹಾಕಿಕೊಂಡಿತ್ತು.
ಇದುವರೆಗೂ ಬ್ರಷ್ನಿಂದ ಯಾವುದೇ ತೊಂದರೆಯಾಗಿರಲಿಲ್ಲ, ಆದರೆ ಇತ್ತೀಚೆಗೆ ಹೊಟ್ಟೆ ನೋವು ಹೆಚ್ಚಾಗುತ್ತಿದ್ದ ಕಾರಣ ಆಸ್ಪತ್ರೆಯ ವೈದ್ಯರು ಅವರ ಜೀರ್ಣಾಂಗ ವ್ಯವಸ್ಥೆಯನ್ನು ಪರೀಕ್ಷಿಸಿದಾಗ, ಟೂತ್ ಬ್ರಷ್ ಅವರ ಸಣ್ಣ ಕರುಳಿನಲ್ಲಿ ಸಿಲುಕಿಕೊಂಡಿರುವುದು ಕಂಡುಬಂದಿದೆ.
80 ನಿಮಿಷಗಳ ಕಾಲ ಎಂಡೋಸ್ಕೋಪಿಕ್ ಶಸ್ತ್ರ ಚಿಕಿತ್ಸೆ ನಡೆಸಿ, ಕರುಳಿನಿಂದ 17 ಸೆಂ.ಮೀ ಉದ್ದದ ಬ್ರಷ್ ಅನ್ನು ಹೊರತೆಗೆದಿದ್ದಾರೆ. ಸಾಮಾನ್ಯವಾಗಿ ಬ್ರಷ್ ಕರುಳಿನಲ್ಲಿ ಒಂದೆಡೆಯಿಂದ ಒಂದೆಡೆ ತಿರುಗಬಹುದು, ನೋವುಂಟು ಮಾಡಬಹುದು, ಬೇರೆ ಬೇರೆ ಭಾಗಗಳಿಗೆ ಚುಚ್ಚಬಹುದು, ಕರುಳಲ್ಲಿ ರಂಧ್ರವನ್ನು ಉಂಟು ಮಾಡಬಹುದು, ಜೀವಕ್ಕೆ ಮಾರಕವೂ ಆಗಬಹುದು.
ಮತ್ತಷ್ಟು ಓದಿ: ಮೈಸೂರು: ಆಪರೇಷನ್ ವೇಳೆ ದಂಗಾದ ವೈದ್ಯರು, ಮಹಿಳೆ ದೇಹದಲ್ಲಿ 861 ಕಲ್ಲುಗಳು ಪತ್ತೆ
ಆದರೆ ಈ ವಿಚಾರದಲ್ಲಿ ಯಾಂಗ್ ಅದೃಷ್ಟಶಾಲಿ. ಹೆಚ್ಚಿನ ನೋವುಂಟು ಮಾಡಿರಲಿಲ್ಲ. ಎಲ್ಲಿಯೂ ಹಾನಿಮಾಡದೆ ಇದ್ದಲ್ಲಿಯೇ ಇತ್ತು. ಶಸ್ತ್ರಚಿಕಿತ್ಸೆ ಮೂಲಕ ಕೊನೆಗೂ ಬ್ರಷ್ ಹೊರ ತೆಗೆಯಲಾಗಿದ್ದು, ಯಾಂಗ್ ಆರೋಗ್ಯವಾಗಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ