AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video : ಭಾರತದಲ್ಲಿ ಇಷ್ಟೊಂದು ಕಸನಾ? ನಾನು ಇಷ್ಟೊಂದು ಕೊಳಕು ಎಂದಿಗೂ ನೋಡಿಲ್ಲ ಎಂದ ಫ್ರೆಂಚ್ ಮಹಿಳೆ

ಭಾರತದಲ್ಲಿ ಇಷ್ಟೊಂದು ಕಸ ಯಾಕಿದೆ, ಇದೀಗ ವಿದೇಶಿಗರ ಮುಂದೆ ಭಾರತ ತಲೆತಗ್ಗಿಸುವ ಸ್ಥಿತಿಯನ್ನು ಇಲ್ಲಿನ ಸಾರ್ವಜನಿಕರು ಹಾಗೂ ಅಧಿಕಾರಿಗಳು ತಂದಿದ್ದಾರೆ. ಪ್ರಧಾನಿ ಮೋದಿ ಅವರು ದೇಶದಲ್ಲಿ ಸ್ವಚ್ಛ ಭಾರತ ಪರಿಕಲ್ಪನೆಯನ್ನು ತಂದರು, ಅದರೂ ಈ ಬಗ್ಗೆ ಯಾರು ಅಷ್ಟೊಂದು ಯೋಚನೆಯೇ ಮಾಡಿಲ್ಲ. ಅದಕ್ಕಾಗಿ ಅಭಿಮಾನ ಮಾಡಿ ಜನರನ್ನು ಎಚ್ಚರಿಸಿದರು. ಅದನ್ನು ಕೇಳಲಿಲ್ಲ. ಆದರೆ ಇದೀಗ ವಿದೇಶಿಗರ ಮುಂದೆ ತಲೆ ತಗ್ಗಿಸುವಂತಾಗಿದೆ. ಯಾಕೆ ಗೊತ್ತಾ? ಈ ವಿಡಿಯೋ ಕಾರಣ ನೋಡಿ.

Video : ಭಾರತದಲ್ಲಿ ಇಷ್ಟೊಂದು ಕಸನಾ? ನಾನು ಇಷ್ಟೊಂದು ಕೊಳಕು ಎಂದಿಗೂ ನೋಡಿಲ್ಲ ಎಂದ ಫ್ರೆಂಚ್ ಮಹಿಳೆ
ವೈರಲ್​​ ವಿಡಿಯೋ
ಸಾಯಿನಂದಾ
|

Updated on: Jul 07, 2025 | 3:21 PM

Share

ಭಾರತದ  ಬಗ್ಗೆ ವಿದೇಶಿಗರಿಗೆ (cleanliness in Gurgaon) ಒಳ್ಳೆಯ ಅಭಿಪ್ರಾಯವಿದೆ. ಭಾರತದ ಸಂಸ್ಕೃತಿ, ಆಹಾರ ಪದ್ಧತಿ, ಆಚರಣೆಗಳ ಬಗ್ಗೆ ಅಪಾರ ಗೌರವ, ಎಲ್ಲಿ ಹೋದ್ರು ಭಾರತಕ್ಕೆ ಒಂದು ವಿಶೇಷ ಸ್ಥಾನವಿದೆ. ಜತೆಗೆ ಭಾರತ ಸ್ವಲ್ಪ ಸೇಫ್ ಎಂಬುದು ಅವರಿಗೂ ಗೊತ್ತು. ಆದರೆ ನಮ್ಮವರು ಮಾಡುವ ಕೆಲಸಕ್ಕೆ ಹೇಗೆ ಮರ್ಯಾದೆ ಹೋಗುತ್ತದೆ ನೋಡಿ. ಸ್ವಚ್ಛತೆ ಬಗ್ಗೆ ಭಾರತದ ಜನರಿಗೆ ಸ್ವಲ್ಪ ಕಡಿಮೆ ಕಾಳಜಿ, ಭಾರತದ ಪ್ರಧಾನಿ ಮೋದಿ ಅವರು ಸ್ವಚ್ಛ ಭಾರತ್​​​ ಅಭಿಯಾನದ ಮೂಲಕ ಅನೇಕ ಬದಲಾವಣೆಗಳನ್ನು ತರಲು ಪ್ರಯತ್ನಪಟ್ಟಿದ್ದರು,  ಅದರೂ ಇದನ್ನು ಗಾಳಿ ತೂರಿ, ಇಂತಹ ಕೆಲಸಗಳು ನಡೆಯುತ್ತಿದೆ. ಇದನ್ನು ನೋಡಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ . ಇದೀಗ ಕಸದಿಂದ ಭಾರತ ಹೇಗಿದೆ ಎಂಬುದನ್ನು  ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.  ಈ ವಿಡಿಯೋವನ್ನು ಫ್ರೆಂಚ್ ವಲಸಿಗರೊಬ್ಬರು ಹಂಚಿಕೊಂಡಿದ್ದು, ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ವಿದೇಶಿ ಮಹಿಳೆ ಬೀದಿಯೊಂದರಲ್ಲಿ ಹರಡಿರುವ ಕಸವನ್ನು ನೋಡಿ ಭಯಭೀತರಾಗಿದ್ದಾರೆ. ಭಾರತದಲ್ಲಿ ವಾಸಿಸುತ್ತಿರುವ ಫ್ರೆಂಚ್ ಮಹಿಳೆ ಮಥಿಲ್ಡೆ , ತಾನು ಭೇಟಿ ನೀಡಿದ ಯಾವುದೇ ದೇಶದಲ್ಲಿ ಇಷ್ಟೊಂದು ಕೊಳಕನ್ನು ಎಂದಿಗೂ ನೋಡಿಲ್ಲ ಎಂದು ಹೇಳಿದ್ದಾರೆ.

ಈ ಮಹಿಳೆ ಯುರೋಪಿನ ಕೆಲವು ದೇಶಗಳು ಸ್ವಚ್ಛತೆ ಮತ್ತು ಮೂಲಸೌಕರ್ಯಕ್ಕೆ ಹೆಸರುವಾಸಿಯಾಗಿದ್ದರೂ, ಆಫ್ರಿಕಾ, ಏಷ್ಯಾ ಮತ್ತು ದಕ್ಷಿಣ ಅಮೆರಿಕಾದ ದೇಶಗಳು ಸಹ ಭಾರತಕ್ಕಿಂತ 100 ಪಟ್ಟು ಸ್ವಚ್ಛವಾಗಿವೆ ಎಂದು ಮ್ಯಾಥಿಲ್ಡೆ ಹೇಳಿದ್ದಾರೆ. ನಾನು ನೋಡಿದ ಒಂದು ದೃಶ್ಯದ ಬಗ್ಗೆ ಇಲ್ಲಿ ಹಂಚಿಕೊಳ್ಳಲು ಇಷ್ಟಪಡುವೆ, ಶಾಲೆಯ ಮುಂಭಾಗದ ರಸ್ತೆಯ ಸಂಪೂರ್ಣ ಕಸದ ರಾಶಿಗಳು ಆವರಿಸಿದೆ ನೋಡಿ ಎಂದು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಫ್ರೆಂಚ್ ವಲಸಿಗ ಗುರ್ಗಾಂವ್‌ ಈ ಬಗ್ಗೆ ಭಾರೀ ಟೀಕೆಯನ್ನು ವ್ಯಕ್ತಪಡಿಸಿದ್ದಾರೆ. ನಗರದ ಸ್ಥಿತಿಯಿಂದ ತಾನು ಭಯಗೊಂಡಿದ್ದೇನೆ ಎಂದು ಒಂದೇ ಮಾತಿನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ
Image
ರ‍್ಯಾಂಪ್ ವಾಕ್ ಮಾಡುವಾಗ ಮಾಡೆಲ್‌ಗಳು ನಗುವುದಿಲ್ಲ, ಯಾಕೆ ಗೊತ್ತಾ?
Image
ಈ ಬುಡಕಟ್ಟಿನ ಹೆಣ್ಣು ಮಕ್ಕಳು ತುಟಿಯನ್ನೇ ತೂತು ಮಾಡ್ತಾರೆ? ಯಾಕೆ ಗೊತ್ತಾ?
Image
ಕಂದಮ್ಮನಿಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಕರೆದುಕೊಂಡು ಬಂದ ತಾಯಿ ಬೆಕ್ಕು
Image
ಚಾಟ್ ಜಿಪಿಟಿ ಸಲಹೆ ಪಡೆದು 30 ದಿನಗಳಲ್ಲಿ ಹತ್ತು ಲಕ್ಷ ಸಾಲ ತೀರಿಸಿದ ಮಹಿಳೆ

ಇದನ್ನೂ ಓದಿ: ಈ ಮಹಿಳಾ ಅಧಿಕಾರಿಯ ಧೈರ್ಯಕ್ಕೆ ಮೆಚ್ಚಲೇಬೇಕು, 18 ಅಡಿ ಉದ್ದದ ಕಿಂಗ್‌ ಕೋಬ್ರಾವನ್ನು ರಕ್ಷಣೆ ಮಾಡಿದ ಲೇಡಿ ಸಿಂಗಂ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ನಗರದ ವಾಸ್ತವಿಕ ಸ್ಥಿತಿಯನ್ನು ನೋಡಿ ನನಗೆ ಭಯವಾಗಿದೆ. ನಾನು ಭೇಟಿ ನೀಡಿದ ಬೇರೆ ಯಾವುದೇ ದೇಶದಲ್ಲಿ ಇಷ್ಟೊಂದು ಹೊಲಸು, ಕಸ ಮತ್ತು ಹದಗೆಟ್ಟ ರಸ್ತೆಗಳನ್ನು  ನೋಡಿಲ್ಲ ಎಂದು ತಮ್ಮ ಎಕ್ಸ್​​​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದು ಭಾರತೀಯರಿಗೆ ದುಃಖಕರವಾಗಿದೆ. ಭಾರತಕ್ಕೂ ಸಹ ಇದು ತುಂಬಾ ವಿಷಾದ ವಿಚಾರ ಎಂದು ಹೇಳಿದ್ದಾರೆ. ಹರಿಯಾಣ ಸರ್ಕಾರವು ಈ ನಗರದ ಬಳಿ ಡಿಸ್ನಿಲ್ಯಾಂಡ್ ಥೀಮ್ ಪಾರ್ಕ್ ಮಾಡುವೆ ಎಂದು ಹೇಳಿತ್ತು. ಇದೇ ಸಮಯದಲ್ಲಿ ಫ್ರೆಂಚ್ ಮಹಿಳೆ ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಫೋಟೋವೊಂದನ್ನು ಕೂಡ ಹಂಚಿಕೊಂಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ
ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ