Video : ಹುಷಾರಿಲ್ಲದ ಕಂದಮ್ಮನಿಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಕರೆದುಕೊಂಡು ಬಂದ ತಾಯಿ ಬೆಕ್ಕು
ತಾಯಿ ಪ್ರೀತಿಯೇ ಹಾಗೆ, ಮಕ್ಕಳಿಗೆ ಕಷ್ಟ ಎಂದರೆ ತಾಯಿ ಹೃದಯ ಮಿಡಿಯುತ್ತದೆ. ನಮಗೇನಾದ್ರೂ ಸ್ವಲ್ಪ ಹುಷಾರಿಲ್ಲ ಎಂದಾಗ ತಾಯಿ ಒದ್ದಾಡುತ್ತಾಳೆ. ಈ ವಿಚಾರದಲ್ಲಿ ಮೂಕ ಪ್ರಾಣಿಗಳು ಕೂಡ ಹೊರತಾಗಿಲ್ಲ. ಹುಷಾರಿಲ್ಲದ ತನ್ನ ಕಂದಮ್ಮನಿಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಕರೆದುಕೊಂಡು ಬಂದ ಬೆಕ್ಕಿನ ಹೃದಯಸ್ಪರ್ಶಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ. ಈ ವಿಡಿಯೋ ನೋಡಿದ ಬಳಕೆದಾರರು ತನ್ನ ಕಂದಮ್ಮನಿಗೆ ಏನೇ ಆದರೂ ಅದನ್ನು ತಾಯಿಯಾದವಳು ಅರಿತುಕೊಳ್ಳಲು ಸಾಧ್ಯ ಎಂದಿದ್ದಾರೆ.

ಟರ್ಕಿ, ಜುಲೈ 06: ತಾಯಿ (mother) ಪ್ರೀತಿಯನ್ನು ವಿವರಿಸಲು ಅಸಾಧ್ಯ. ತನ್ನ ಕರುಳ ಕುಡಿಯ ರಕ್ಷಣೆಗಾಗಿ ತಾಯಿಯಾದವಳು ಏನು ಬೇಕಾದರೂ ಮಾಡಲು ಸಿದ್ಧವಿರುತ್ತಾಳೆ. ತನ್ನ ಕಂದಮ್ಮನಿಗೆ ಹುಷಾರಿಲ್ಲ ಎಂದಾಗ ತಾಯಿಯಾದವಳು ಚಡಪಡಿಸುತ್ತಾಳೆ, ಹಗಲು ರಾತ್ರಿ ನಿದ್ದೆ ಬಿಟ್ಟು ಮಗುವಿನ ಆರೈಕೆ ಮಾಡುತ್ತಾಳೆ. ಈ ವಿಚಾರದಲ್ಲಿ ಪ್ರಾಣಿಗಳು ಕೂಡ ಹೊರತಾಗಿಲ್ಲ. ಇಂತಹದ್ದೇ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಬೆಕ್ಕೊಂದು (cat) ಹುಷಾರು ತಪ್ಪಿದ ತನ್ನ ಮರಿಗೆ ಚಿಕಿತ್ಸೆ ಕೊಡಿಸಲು ಪಶುವೈದ್ಯಕೀಯ ಆಸ್ಪತ್ರೆಗೆ (Veterinary Hospital) ಕರೆದುಕೊಂಡು ಬಂದಿದೆ. ಈ ಘಟನೆ ನಡೆಸಿರುವುದು ಟರ್ಕಿಯಲ್ಲಿ. ಇದಕ್ಕೆ ಸಂಬಂಧಿಸಿದ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
@MrLaalpotato ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಬೀದಿ ಬದಿಯ ಬೆಕ್ಕೊಂದು ಹುಷಾರು ತಪ್ಪಿದ ತನ್ನ ಮರಿಯನ್ನು ಬಾಯಲ್ಲಿ ಕಚ್ಚಿಕೊಂಡು ಪಶುವೈದ್ಯಕೀಯ ಆಸ್ಪತ್ರೆಗೆ ಕರೆದುಕೊಂಡು ಬರುವುದನ್ನು ಕಾಣಬಹುದು. ಈ ವೇಳೆ ಬೆಕ್ಕಿನ ಮರಿಯನ್ನು ಪರೀಕ್ಷಿಸಿದಾಗ ಈ ಮರಿಗೆ ಕಣ್ಣಿನ ಸೋಂಕು ತಗಲಿದೆ ಎಂದು ಆಸ್ಪತ್ರೆಯ ಸಿಬ್ಬಂದಿಗೆ ತಿಳಿಯಿತು. ಕೊನೆಗೆ ಬೆಕ್ಕಿನ ಮರಿಗೆ ಚಿಕಿತ್ಸೆ ನೀಡಿದ್ದು ತಾಯಿಗೆ ಮರಿಯನ್ನು ಹಿಂತಿರುಗಿಸಿದ್ದು, ತನ್ನ ಮರಿಯನ್ನು ಬಾಯಲ್ಲಿ ಕಚ್ಚಿಕೊಂಡು ಓಡಿ ಹೋಗುವುದನ್ನು ಕಾಣಬಹುದು.
ಇದನ್ನೂ ಓದಿ :Viral : ಚಾಟ್ ಜಿಪಿಟಿ ಸಲಹೆ ಪಡೆದು 30 ದಿನಗಳಲ್ಲಿ ಹತ್ತು ಲಕ್ಷ ಸಾಲ ತೀರಿಸಿದ ಮಹಿಳೆ
ವೈರಲ್ ವಿಡಿಯೋ ಇಲ್ಲಿದೆ ನೋಡಿ
A mother’s instinct: Stray cat brings her sick kitten to local vet, where it was treated for an eye infection and given back to its mother❤️ pic.twitter.com/yCnlebflSZ
— Potato (@MrLaalpotato) July 1, 2025
ಈ ವಿಡಿಯೋವೊಂದು ಹಲವಾರು ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ತಾಯಿ ಪ್ರೀತಿಯ ಕುರಿತು ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರು, ಈ ವಿಡಿಯೋ ನನಗೆ ತುಂಬಾ ಇಷ್ಟವಾಯಿತು ಎಂದಿದ್ದಾರೆ. ಇನ್ನೊಬ್ಬರು, ಬುದ್ಧಿವಂತ ಬೆಕ್ಕು ಎಂದು ಬರೆದರೆ, ಮತ್ತೊಬ್ಬರು, ತಾಯಿಯೂ ತನ್ನ ಮಕ್ಕಳಿಗಾಗಿ ಏನು ಬೇಕಾದರೂ ಮಾಡುತ್ತಾರೆ ಎಂದಿದ್ದಾರೆ. ಕೆಲವರು ಹಾರ್ಟ್ ಸಿಂಬಲ್ ಕಳುಹಿಸುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:06 pm, Sun, 6 July 25