Viral Video: ತಪ್ಪು ಮಾಡಿದ ಮಗನಿಗೆ ‘ನಾನು ಪುಂಡ’ ಎಂದು ಬೋರ್ಡ್​ ಹಿಡಿಸಿ ರಸ್ತೆ ಪಕ್ಕ ನಿಲ್ಲಿಸಿದ ಪೋಷಕರು

| Updated By: Pavitra Bhat Jigalemane

Updated on: Dec 26, 2021 | 12:36 PM

ತಪ್ಪು ಮಾಡಿದ ಮಗನಿಗೆ ಶಿಕ್ಷೆಯಾಗಿ ಪೋಷಕರು ಪುಂಡ ಎನ್ನುವ ಬೋರ್ಡ್ ಹಿಡಿಸಿ ರಸ್ತೆಯ ಪಕ್ಕ ನಿಲ್ಲಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ  ವೈರಲ್​ ಆಗಿದೆ

Viral Video: ತಪ್ಪು ಮಾಡಿದ ಮಗನಿಗೆ ನಾನು ಪುಂಡ ಎಂದು ಬೋರ್ಡ್​ ಹಿಡಿಸಿ ರಸ್ತೆ ಪಕ್ಕ ನಿಲ್ಲಿಸಿದ ಪೋಷಕರು
ಬೋರ್ಡ್​ ಹಿಡಿದಿರುವ ಬಾಲಕ
Follow us on

ತಪ್ಪು ಮಾಡಿದ ಮಗನಿಗೆ ಶಿಕ್ಷೆಯಾಗಿ ಪೋಷಕರು ನಾನು ಪುಂಡ ಎನ್ನುವ ಬೋರ್ಡ್ ಹಿಡಿಸಿ ರಸ್ತೆಯ ಪಕ್ಕ ನಿಲ್ಲಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ  ವೈರಲ್​ ಆಗಿದೆ. ಯುಎಸ್​ನಲ್ಲಿ ಈ ಘಟನೆ ನಡೆದಿದೆ. ಪ್ಲೋರಿಡಾದ ಗೆಲ್ವಿನ್​ ​ ಕ್ಲೈನ್​ ಎನ್ನುವ ಟಿಕ್​ ಟಾಕ್​ ಬಳಕೆದಾರರೊಬ್ಬರು ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಳತಾಣದಲ್ಲಿ ವೀಡಿಯೋ ಸಖತ್​ ಸದಸ ಮಾಡುತ್ತಿದೆ. ಜತೆಗೆ ಬಾಲಕನಿಗೆ ಈ ರಿತಿ ಶಿಕ್ಷೆ ನೀಡಿದ ತಂದೆ ತಾಯಿಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.  ಬಾಲಕ ಹಿಡಿದುಕೊಂಡ ಬೋರ್ಡ್​ನಲ್ಲಿ ನಾನು ಪುಂಡ. ಪುಂಡರನ್ನು ದ್ವೇಷಿಸುವುದಾದರೆ ನಿಮ್ಮ ಗಾಡಿಯಲ್ಲಿ ಹಾರ್ನ್ ಮಾಡಿರಿ ಎಂದು ಬರೆಯಲಾಗಿತ್ತು. ಬಾಲಕನ ಪಕ್ಕದಲ್ಲೇ ಬೇಂಚಿನ ಮೇಲೆ  ಆತನ ಪೋಷಕರು ಕುಳಿತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.

ವೀಡಿಯೋ ಹಂಚಿಕೊಂಡ ಗೆಲ್ವಿನ್​ ​ ಕ್ಲೈನ್​  ಅವರು ಘಟನೆಯ ಬಗ್ಗೆ ಪೂರ್ಣ ವಿವರ ತಿಳಿದಿಲ್ಲ. ಆದರೆ ಬಾಲಕನನ್ನು ಸಾರ್ವಜನಿಕವಾಗಿ ಅವಮಾನಿಸುವುದು ಸರಿಯಲ್ಲ ಎಂದಿದ್ದಾರೆ. ಈ ಬಗ್ಗೆ ಹಲವರು ಆಕ್ರೋಶದಿಂದಲೇ ಕಾಮೆಂಟ್​ ಮಾಡಿದ್ದಾರೆ. ಶಿಕ್ಷೆಯ ಶಿಸ್ತು ಸರಿಯಾಗಿದೆ ಆದರೆ ಸಾರ್ವಜನಿಕರು ಬಾಲಕನಿಗೆ ಏನನ್ನೂ ಕಲಿಸುವುದಿಲ್ಲ ಎಂದಿದ್ದಾರೆ.

ಇನ್ನೊಬ್ಬರು ಸಾರ್ವಜನಿಕರ ಎದುರು ನಿಮ್ಮ ಮಗನನ್ನು ಮುಜುಗರಕ್ಕೆ ಒಳಪಡಿಸಿದರೆ ಸಮಸ್ಯೆ ಪರಿಹಾರವಾಗುವುದಿಲ್ಲ ಎಂದು ಕಾಮೆಂಟ್​ ಮಾಡಿದ್ದಾರೆ. ಒಟ್ಟಿನಲ್ಲಿ ಬಾಲಕನಿಗೆ ನೀಡಿದ ಶಿಕ್ಷೆಯನ್ನು ಕಂಡು ನೆಟ್ಟಿಗರು ಕಿಡಿಕಾರಿದ್ದಾರೆ. ಮಕ್ಕಳು ತಪ್ಪು ಮಾಡಿದರೆ ಅವರಿಗೆ ತಿಳಿ ಹೇಳಿವುದರ ಬದಲು ಈ ರೀತಿ ಸಾರ್ವಜನಿಕವಾಗಿ ಅವಮಾನ ಮಾಡಿದರೆ ಅವರ ಸೂಕ್ಷ್ಮ ಮನಸ್ಥಿತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎನ್ನುವುದು ಹಲವರ ಅಭಿಪ್ರಾಯ.

ಇದನ್ನೂ ಓದಿ:

ಜಗತ್ತು ನೈಸರ್ಗಿಕ ವಿಕೋಪ, ಹೊಸ ಮಾರಕ ವೈರಸ್​ಗೆ ತುತ್ತಾಗಲಿದೆ: 2022ರ ಬಗ್ಗೆ ಬಾಬಾ ವಂಗಾ ಭವಿಷ್ಯ