Viral Video: 14 ತಿಂಗಳ ಬಳಿಕ ಮಾಲೀಕನನ್ನು ನೋಡಿ ಓಡೋಡಿ ಬಂದ ಆನೆಗಳು
14 ತಿಂಗಳ ಬಳಿಕ ತಮ್ಮ ಮಾಲೀಕನನ್ನು ಕಂಡು ಆನೆಗಳ ಹಿಂಡು ಆತನನ್ನು ಸುತ್ತುವರೆದು ಮುದ್ದಿಸಿದ ಹೃದಯಸ್ಪರ್ಶಿ ವೀಡಿಯೋ ವೈರಲ್ ಆಗಿದೆ.
ಪ್ರಾಣಿಗಳ ಪ್ರೀತಿಯೇ ಹಾಗೆ. ನಿಷ್ಕಲ್ಮಶವಾದ ಎಂದಿಗೂ ಮರೆಯದ ಪ್ರೀತಿ. ತಮ್ಮನ್ನು ಸಾಕಿದ ಮಾಲೀಕರಿಗೆ ವಿಧೇಯರಾಗಿ, ಅವರ ಪ್ರೀತಿಗೆ, ಕಾಳಜಿಗೆ ತಮ್ಮದೇ ರೀತಿಯಲ್ಲಿ ಪ್ರೀತಿಯನ್ನು ವ್ಯಕ್ತಪಡಿಸುವುದು ಪ್ರಾಣಿಗಳ ವಿಶೇಷತೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಆನೆಗಳ ವೀಡಿಯೋವೊಂದು ವೈರಲ್ ಆಗಿದೆ. 14 ತಿಂಗಳ ಬಳಿಕ ತಮ್ಮ ಮಾಲೀಕನನ್ನು ಕಂಡು ಆನೆಗಳ ಹಿಂಡು ಆತನನ್ನು ಸುತ್ತುವರೆದು ಮುದ್ದಿಸಿದ ಹೃದಯಸ್ಪರ್ಶಿ ವೀಡಿಯೋ ವೈರಲ್ ಆಗಿದೆ. ನಟ್ಟಿಗರು ವೀಡಿಯೋ ನೋಡಿ ಪುಳಕಿತರಾಗಿದ್ದಾರೆ. ಆನೆಗಳಿಗೆ 14 ತಿಂಗಳ ಬಳಿಕವೂ ತಮ್ಮ ಹಳೆಯ ಮಾಲೀಕನ ಮೇಲಿರುವ ಪ್ರೀತಿ ಕಂಡು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ವೀಡಿಯೋದಲ್ಲಿ ನೀರಿನ ಮಧ್ಯದಲ್ಲಿ ಆನೆಗಳ ಹಳೆ ಮಾಲೀಕ ನಿಂತಿರುತ್ತಾನೆ. ದೂರದಲ್ಲಿರುವ ಆನೆಗಳು ಆತನನ್ನು ಕಂಡು ಓಡೋಡಿ ಬರುತ್ತವೆ. ಮೂರು ಆನೆಗಳು ವ್ಯಕ್ತಿಯನ್ನು ಸುತ್ತುವರೆದು ಮುದ್ದಿಸುತ್ತವೆ. ಆನೆಗಳು ತಮ್ಮದೇ ರೀತಿಯಲ್ಲಿ ಮಾಲೀಕನನ್ನು ಮುದ್ದಿಸುವ ಕ್ಯೂಟ್ ವೀಡಿಯೋ ಈಗ ನೋಡುಗರ ಮನ ಗೆದ್ದಿದೆ. ನೆದರ್ಲ್ಯಾಂಡ್ನ ಟ್ವಿಟರ್ ಬಳಕೆದಾರರೊಬ್ಬರು ಈ ವೀಡಿಯೋ ಹಂಚಿಕೊಂಡಿದ್ದು 3 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದಿದೆ.
Elephants reunite with their caretaker after 14 months..
Sound on pic.twitter.com/wSlnqyuTca
— Buitengebieden (@buitengebieden_) December 23, 2021
ವೀಡಿಯೋದಲ್ಲಿರುವ ವ್ಯಕ್ತಿಯನ್ನು ಡೆರೆಕ್ ಥಾಂಪ್ಸನ್ ಎಂದು ಗುರುತಿಸಲಾಗಿದ್ದು, ಅವರು ಟೊರೆಂಟೋದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಯಾಗಿದ್ದರು ಎನ್ನಲಾಗಿದೆ. ಇವರು ತಮ್ಮ ವೃತ್ತಿ ಜೀವನದಲ್ಲಿ ಆನೆಗಳ ಆರೈಕೆ ಮಾಡಿಯೇ ಹೆಚ್ಚು ಪರಿಚಿತರು ಎಂದು ಬಳಕೆದಾರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ:
Viral Video: ತಪ್ಪು ಮಾಡಿದ ಮಗನಿಗೆ ‘ನಾನು ಪುಂಡ’ ಎಂದು ಬೋರ್ಡ್ ಹಿಡಿಸಿ ರಸ್ತೆ ಪಕ್ಕ ನಿಲ್ಲಿಸಿದ ಪೋಷಕರು