ವೀಡಿಯೋ ಹಂಚಿಕೊಂಡ ಗೆಲ್ವಿನ್ ಕ್ಲೈನ್ ಅವರು ಘಟನೆಯ ಬಗ್ಗೆ ಪೂರ್ಣ ವಿವರ ತಿಳಿದಿಲ್ಲ. ಆದರೆ ಬಾಲಕನನ್ನು ಸಾರ್ವಜನಿಕವಾಗಿ ಅವಮಾನಿಸುವುದು ಸರಿಯಲ್ಲ ಎಂದಿದ್ದಾರೆ. ಈ ಬಗ್ಗೆ ಹಲವರು ಆಕ್ರೋಶದಿಂದಲೇ ಕಾಮೆಂಟ್ ಮಾಡಿದ್ದಾರೆ. ಶಿಕ್ಷೆಯ ಶಿಸ್ತು ಸರಿಯಾಗಿದೆ ಆದರೆ ಸಾರ್ವಜನಿಕರು ಬಾಲಕನಿಗೆ ಏನನ್ನೂ ಕಲಿಸುವುದಿಲ್ಲ ಎಂದಿದ್ದಾರೆ.
ಇನ್ನೊಬ್ಬರು ಸಾರ್ವಜನಿಕರ ಎದುರು ನಿಮ್ಮ ಮಗನನ್ನು ಮುಜುಗರಕ್ಕೆ ಒಳಪಡಿಸಿದರೆ ಸಮಸ್ಯೆ ಪರಿಹಾರವಾಗುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಬಾಲಕನಿಗೆ ನೀಡಿದ ಶಿಕ್ಷೆಯನ್ನು ಕಂಡು ನೆಟ್ಟಿಗರು ಕಿಡಿಕಾರಿದ್ದಾರೆ. ಮಕ್ಕಳು ತಪ್ಪು ಮಾಡಿದರೆ ಅವರಿಗೆ ತಿಳಿ ಹೇಳಿವುದರ ಬದಲು ಈ ರೀತಿ ಸಾರ್ವಜನಿಕವಾಗಿ ಅವಮಾನ ಮಾಡಿದರೆ ಅವರ ಸೂಕ್ಷ್ಮ ಮನಸ್ಥಿತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎನ್ನುವುದು ಹಲವರ ಅಭಿಪ್ರಾಯ.
ಇದನ್ನೂ ಓದಿ:
ಜಗತ್ತು ನೈಸರ್ಗಿಕ ವಿಕೋಪ, ಹೊಸ ಮಾರಕ ವೈರಸ್ಗೆ ತುತ್ತಾಗಲಿದೆ: 2022ರ ಬಗ್ಗೆ ಬಾಬಾ ವಂಗಾ ಭವಿಷ್ಯ