ದೆಹಲಿ ಮೆಟ್ರೋದಲ್ಲಿ ಯುವತಿ ಡ್ಯಾನ್ಸ್​: ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ ನೆಟ್ಟಿಗರು

ದೆಹಲಿ ಮೆಟ್ರೋ ಒಂದರಲ್ಲಿ ಯುವತಿ ಒಬ್ಬಳು ಬಾಲಿವುಡ್ ಹಾಡಿಗೆ ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.

ದೆಹಲಿ ಮೆಟ್ರೋದಲ್ಲಿ ಯುವತಿ ಡ್ಯಾನ್ಸ್​: ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ ನೆಟ್ಟಿಗರು
ಮೆಟ್ರೋದಲ್ಲಿ ಡ್ಯಾನ್ಸ್​ ಮಾಡಿದ ಯುವತಿ

Updated on: Jun 11, 2023 | 8:17 PM

ಈಗೇನಿದ್ದರೂ ಸೋಶಿಯಲ್​ ಮೀಡಿಯಾ ಜಮಾನ. ಅದರಲ್ಲಿಯೂ ರೀಲ್ಸ್​ಗಳದ್ದೇ ಹವಾ. ವೀವ್ಸ್​ಗೋಸ್ಕರ ಕಂಡ ಕಂಡ ಸ್ಥಳಗಳಲ್ಲಿ ಮೈಮೇಲೆ ಅರಿವೇ ಇಲ್ಲದಂತೆ ವಿಡಿಯೋ ಮಾಡಿ ರೀಲ್ಸ್ ಕ್ರಿಯೇಟ್​ ಮಾಡಿ ಸೋಶಿಯಲ್​ ಮೀಡಿಯಾಗಳಲ್ಲಿ ಹರಿಬಿಡುತ್ತಾರೆ. ಈ ಸ್ಥಳಗಳ ಪೈಕಿ ಮೆಟ್ರೋ (Metro) ಕೂಡ ಸೇರಿದೆ. ಸದ್ಯ ಜನರಿಂದ ತುಂಬಿರುವ ದೆಹಲಿ ಮೆಟ್ರೋ ಒಂದರಲ್ಲಿ ಯುವತಿ ಒಬ್ಬಳು ಬಾಲಿವುಡ್ ಹಾಡಿಗೆ ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.

ವಿಡಿಯೋದಲ್ಲಿ, ಕಪ್ಪು ಬಣ್ಣದ ಟಾಪ್ ಮತ್ತು ನೀಲಿ ಜೀನ್ಸ್ ಧರಿಸಿದ ಯುವತಿ ಬಾಲಿವುಡ್​ನ ಅಸಲಾಮ್-ಎ-ಇಷ್ಕುಮ್ ಹಾಡಿಗೆ ಭರ್ಜರಿ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋದಲ್ಲಿರುವ ಯುವತಿಯನ್ನು ಪ್ರಿಯಾ ಶರ್ಮಾ ಎಂದು ಗುರುತಿಸಲಾಗಿದ್ದು, ಆಕೆಯ ಅಧಿಕೃತ ಇನ್ಸ್ಟಾಗ್ರಾಮ್​ ಖಾತೆಯನ್ನು ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: ತಾನು ಮದುವೆಯಾಗುವ ಹುಡುಗನಿಗೆ ದೊಡ್ಡ ಹೊಟ್ಟೆ ಇರಲೇ ಬೇಕು ಎಂದ ಯುವತಿ

ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲವರು ಯುವತಿಯ ಡ್ಯಾನ್ಸ್​ ಇಷ್ಟಪಟ್ಟಿದ್ದು, ಅವರ ಧೈರ್ಯವನ್ನು ಶ್ಲಾಘಿಸಿದರೆ. ಇತರರು ದೆಹಲಿ ಮೆಟ್ರೋ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯನ್ನು ಟ್ಯಾಗ್ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಇತರೆ ಬಳಕೆದಾರರು ಪ್ರತಿಕ್ರಿಯಿಸಿದ್ದು, ಉತ್ತಮ ಪ್ರಯತ್ನ, ಆದರೆ ದಯವಿಟ್ಟು ಇದನ್ನು ಮತ್ತೆ ಪ್ರಯತ್ನಿಸಬೇಡಿ ಎಂದಿದ್ದಾರೆ. ಈ ರೀತಿಯ ಪ್ರವೃತ್ತಿಯನ್ನು ನಿಲ್ಲಿಸಬೇಕಾಗಿದೆ ಎಂದು ಇನ್ನೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: Great Survival: ಭಯಂಕರ ಅಮೇಜಾನ್ ಕಾಡಿನಲ್ಲಿ ಕ್ರೂರಪ್ರಾಣಿ, ಅಪಾಯಕಾರಿ ಜೀವಜಂತುಗಳ ಮಧ್ಯೆ ಮಕ್ಕಳು ಬದುಕುಳಿದ ಥ್ರಿಲ್ಲಿಂಗ್ ಕಥೆ..!

ಮತ್ತೊಬ್ಬರು ಕಾಮೆಂಟ್ ಮಾಡಿದ್ದು, ಇದರಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದಾರೆ. ಸೂಪರ್ ಕೂಲ್​, ಕೆಲವರು ಎಲ್ಲವನ್ನೂ ಏಕೆ ವಿರೋಧಿಸುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಸಿಐಎಸ್ಎಫ್ ಸಿಬ್ಬಂದಿ ಎಲ್ಲಿದ್ದಾರೆ ಎಂದು ಇನ್ನೊಬ್ಬರು ಕಾಮೆಂಟ್​ ಮಾಡಿದ್ದಾರೆ.

ಮೆಟ್ರೋ ರೈಲು ಒಳಗಡೆ ವಿಡಿಯೋ ಮಾಡುವುದನ್ನು ದೆಹಲಿ ಮೆಟ್ರೋ ರೈಲು ನಿಗಮ ನಿಷೇಧಿಸಿದೆ. ಆದರೂ ಕೆಲ ಪ್ರಯಾಣಿಕರು ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ನಿಯಮ ಉಲ್ಲಂಘಿಸಿರುವುದು ಕಂಡುಬಂದಿದೆ.

ಮತ್ತಷ್ಟು ವೈರಲ್​ ವಿಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.