Great Survival: ಭಯಂಕರ ಅಮೇಜಾನ್ ಕಾಡಿನಲ್ಲಿ ಕ್ರೂರಪ್ರಾಣಿ, ಅಪಾಯಕಾರಿ ಜೀವಜಂತುಗಳ ಮಧ್ಯೆ ಮಕ್ಕಳು ಬದುಕುಳಿದ ಥ್ರಿಲ್ಲಿಂಗ್ ಕಥೆ..!

4 Children, 40 Days Inside Amazon Rainforest: ದಕ್ಷಿಣ ಅಮೆರಿಕ ಖಂಡದಲ್ಲಿ ಕೊಲಂಬಿಯಾ ದೇಶದಲ್ಲಿರುವ ಅಮೇಜಾನ್ ದಟ್ಟ ಕಾಡಿನಲ್ಲಿ ಕಳೆದುಹೋಗಿದ್ದ 4 ಮಕ್ಕಳು ಸುಮಾರು 40 ದಿನಗಳ ಕಾಲ ಬದುಕಿ ಜೀವ ಉಳಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

Great Survival: ಭಯಂಕರ ಅಮೇಜಾನ್ ಕಾಡಿನಲ್ಲಿ ಕ್ರೂರಪ್ರಾಣಿ, ಅಪಾಯಕಾರಿ ಜೀವಜಂತುಗಳ ಮಧ್ಯೆ ಮಕ್ಕಳು ಬದುಕುಳಿದ ಥ್ರಿಲ್ಲಿಂಗ್ ಕಥೆ..!
ರಕ್ಷಣಾ ತಂಡ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jun 12, 2023 | 9:53 AM

ಇದೊಂದು ರೋಚಕ ಥ್ರಿಲ್ಲರ್ ಸಿನಿಮಾಗೆ ಒಳ್ಳೆಯ ಕಥೆಯಾಗಬಹುದಾದ ಘಟನೆ…! ನೀವು ಇಂಗ್ಲೀಷ್ ಸಿನಿಮಾಗಳನ್ನು ನೋಡುವ ಅಭ್ಯಾಸ ಇದ್ದರೆ ಇಂಥ ಕಥೆ ಇರುವ ಸಿನಿಮಾ ನೀಡಿರಬಹುದು. ದಕ್ಷಿಣ ಅಮೆರಿಕ ಖಂಡದಲ್ಲಿ ಕೊಲಂಬಿಯಾ ದೇಶದಲ್ಲಿರುವ ಅಮೇಜಾನ್ ದಟ್ಟ ಕಾಡಿನಲ್ಲಿ (Amazon Rainforest) ಕಳೆದುಹೋಗಿದ್ದ 4 ಮಕ್ಕಳು ಸುಮಾರು 40 ದಿನಗಳ ಕಾಲ ಬದುಕಿ ಜೀವ ಉಳಿಸಿಕೊಂಡಿರುವ (Survival) ಘಟನೆ ಬೆಳಕಿಗೆ ಬಂದಿದೆ. ಈ ನಾಲ್ವರು ಮಕ್ಕಳಲ್ಲಿ 1 ವರ್ಷದ ಮಗುವೂ ಇದೆ. ಇವರಲ್ಲಿ ಅತಿಹಿರಿಯಳೆಂದರೆ 13 ವರ್ಷದ ಬಾಲಕಿ. ಕಣ್ಮುಂದೆ ಅಮ್ಮನನ್ನು ಕಳೆದುಕೊಂಡರೂ ಇದೇ ಹುಡುಗಿ ತನ್ನ ಧೈರ್ಯ, ಸ್ಥೈರ್ಯ, ಸಾಹಸದಿಂದ ತನ್ನ ಒಡಹುಟ್ಟಿದವರನ್ನು ಕಾಪಾಡಿಕೊಂಡಿದ್ದಳು. ಅಮೇಜಾನ್ ಕಾಡಿನ ಬಗ್ಗೆ ನಿಮಗೆ ಗೊತ್ತಿರಬಹುದು. ಅದೇನೂ ಸಾಮಾನ್ಯ ಕಾಡಲ್ಲ. ಪ್ರಪಂಚದ ಅತ್ಯಂತ ದಟ್ಟಕಾನನ ಅದು. ಅನಕೊಂಡದಂತಹ ಭಯಂಕರ ಸರ್ಪಗಳು ವಾಸಿಸುವ ಕಾಡು ಅದು. ಮಿಂಚಿನಂತೆ ಓಡಿ ಹೋಗಿ ಬೇಟೆಯಾಡುವ ಜಾಗ್ವರ್​ನಂತಹ ಅಪಾಯಕಾರಿ ಕ್ರೂರಪ್ರಾಣಿಗಳಿರುವ ಕಾಡು ಅದು. ನಿರ್ದಯಿ ಮನುಷ್ಯರೆನಿಸಿರುವ ಮಾದಕದ್ರವ್ಯ ಕಳ್ಳಸಾಗಾಣಿಕೆದಾರರು ಬಂದೂಕು, ಗನ್ನು ಹಿಡಿದು ಅಲ್ಲಲ್ಲಿ ಸುತ್ತಾಡುವ ಕಾಡು ಅದು. ಇಂಥ ಘೋರ ಕಾಡಿನಲ್ಲಿ 40 ದಿನಗಳ ಕಾಲ ಸಣ್ಣ ಮಕ್ಕಳು ಬದುಕಿ ಬರುವುದು ಎಂದರೆ, ಸಾಮಾನ್ಯ ಮಾತಾ? ಎಂತಹ ರೋಚಕ ಮತ್ತು ರೋಮಾಂಚಕ ಕ್ಷಣಗಳನ್ನು ನಾವು ನೀವು ಅಂದಾಜು ಮಾಡುತ್ತಿರಬಹುದುಯೋಚಿಸಿ

ಮಕ್ಕಳು ಕಾಡಿಗೆ ಹೋಗಿದ್ದು ಹೇಗೆ?

ಅಮೇಜಾನ್ ಕಾಡಿನಲ್ಲಿ ಸಿಕ್ಕ ಮಕ್ಕಳ ವಯಸ್ಸು 1, 5, 9 ಮತ್ತು 13 ವರ್ಷ. ಕೊಲಂಬಿಯಾದ ಅಮೇಜಾನ್​ನಲ್ಲಿರುವ ಅರಾರಕುವಾರ ಎಂಬಲ್ಲಿಂದ 350 ಕಿಮೀ ದೂರದಲ್ಲಿರುವ ಸ್ಯಾನ್ ಜೋಸ್ ನಗರಕ್ಕೆ ಹೊರಟಿದ್ದ ವಿಮಾನದಲ್ಲಿ ಈ ನಾಲ್ವರು ಮಕ್ಕಳು ಹಾಗೂ ಇವರ ತಾಯಿ ಮತ್ತು ಒಬ್ಬ ಸ್ಥಳೀಯ ನಾಯಕ ಇದ್ದರೆನ್ನಲಾಗಿದೆ. ಮೇ ತಿಂಗಳಲ್ಲಿ ಈ ಘಟನೆ ಆಗಿದ್ದು. ಎಂಜಿನ್ ಸಮಸ್ಯೆಯಿಂದಾಗಿ ವಿಮಾನ ಕಾಡಿನ ಮಧ್ಯೆಯೇ ಪತನಗೊಂಡಿತ್ತು. ಅಧಿಕಾರಿಗಳ ಪ್ರಕಾರ ಯಾವುದೋ ಸಶಸ್ತ್ರಧಾರಿ ಗುಂಪಿನ ಸದಸ್ಯರಿಂದ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಅವರಿಂದ ತಪ್ಪಿಸಿಕೊಂಡು ವಿಮಾನದಲ್ಲಿ ಇವರು ಹೋಗುತ್ತಿದ್ದರೆನ್ನಲಾಗಿದೆ. ಎಂಜಿನ್ ವೈಫಲ್ಯದಿಂದ ಕಾಡಿನಲ್ಲಿ ಪತನಗೊಂಡ ವಿಮಾನವು ಮರಕ್ಕೆ ಅಪ್ಪಳಿಸಿ ನಿಂತಿತ್ತು. ಈ ನಾಲ್ವರು ಮಕ್ಕಳು ಮಾತ್ರ ಅದೃಷ್ಟಕ್ಕೆ ಬದುಕಿದ್ದರು. ಇವರ ತಾಯಿ, ಪೈಲಟ್ ಹಾಗೂ ಸ್ಥಳೀಯ ನಾಯಕ ಈ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರು.

ಇದನ್ನೂ ಓದಿತಾನು ಮದುವೆಯಾಗುವ ಹುಡುಗನಿಗೆ ದೊಡ್ಡ ಹೊಟ್ಟೆ ಇರಲೇ ಬೇಕು ಎಂದ ಯುವತಿ

ಈ ನಾಲ್ವರು ಹುಡುಗರು ಸಾಮಾನ್ಯರಲ್ಲಅವರು ಬದುಕಿದ ಥ್ರಿಲಿಂಗ್ ಕಥೆ ಇಲ್ಲಿದೆ….

ಈ ನಾಲ್ವರು ಮಕ್ಕಳು ಸ್ಥಳೀಯ ಬುಡಕಟ್ಟು ಸಮುದಾಯಕ್ಕೆ ಸೇರಿದವರು. ಈ ಮಕ್ಕಳು ಕಾಡನ್ನು ನೋಡಿಕೊಂಡೇ ಬೆಳೆದವರಾದ್ದರಿಂದ ಅನುಕೂಲವಾಯಿತು. ಅದರಲ್ಲಿ ಹಿರಿಯಳಾದ 13 ವರ್ಷದ ಬಾಲಕಿಗೆ ಕಾಡಿನ ಬಗ್ಗೆ ಬಹಳ ವಿಶೇಷ ಜ್ಞಾನ ಇತ್ತು. ಕಾಡಿನಲ್ಲಿ ಯಾವ ಹಣ್ಣು ತಿನ್ನಲು ಯೋಗ್ಯ, ಯಾವ ಬೀಜ, ಕಾಳು, ಕಾಯಿ ತಿನ್ನಬಹುದು ಎಂಬುದನ್ನು ತಿಳಿದಿದ್ದವಳು ಈಕೆ.

ಈ ಅಮೇಜಾನ್ ಕಾಡಿನಲ್ಲಿ ಸದಾ ಮಳೆ ಸುರಿಯುತ್ತಿರುತ್ತದೆ. ಕೆಸರು, ಹುಳ ಹುಪ್ಪಟೆ, ಇತ್ಯಾದಿಗೆ ಸಿಲುಕಿ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲಿ ಹಾವುಗಳ ಸಂಖ್ಯೆ ವಿಪರೀತ. ಅದೆಲ್ಲದರ ಮಧ್ಯೆಯೂ ಬದುಕಿ ಬರುವುದು ಅಮೋಘವೇ. ಇದರ ಜೊತೆಗೆ ವಿಮಾನದಲ್ಲಿ ಇದ್ದ ಕಸ್ಸಾವ ಗೆಡ್ಡೆಯ ಹಿಟ್ಟು ಇವರಿಗೆ ಬಹಳ ದಿನ ಹೊಟ್ಟೆ ಭರಿಸಲು ಸಹಾಯವಾಗಿತ್ತು.

ಈ ಹಿಟ್ಟು ಖಾಲಿಯಾದ ಬಳಿಕ ಮಕ್ಕಳು ಕಾಡಿನಲ್ಲಿ ಅಲ್ಲಲ್ಲಿ ಸಿಗುತ್ತಿದ್ದ ಕಾಯಿ, ಬೀಜಗಳನ್ನು ತಿನ್ನುತ್ತಾ ಬದುಕಿದ್ದರು. ಇವರ ಅದೃಷ್ಟಕ್ಕೆ ಆಗ ಕಾಡಿನಲ್ಲಿ ಮನುಷ್ಯರು ತಿನ್ನಲು ಯೋಗ್ಯವೆನಿಸಿದ ಹಣ್ಣುಗಳು ಚಿಗುರುವ ಋತು ಅದಾಗಿತ್ತು. ಇವೂ ಕೂಡ ಮಕ್ಕಳಿಗೆ ಆಹಾರವಾದವು.

Great Survival Story Of 4 Children For 40 Days In Scary Amazon Rainforest

ರಕ್ಷಣಾ ತಂಡ

ಈ ಮಕ್ಕಳ ರಕ್ಷಣೆಗೆ ನಡೆದಿತ್ತು ಅದ್ವಿತೀಯ ಕಾರ್ಯಾಚರಣೆ….

ವಿಮಾನ ಪತನಗೊಂಡಿದ್ದು, ಜನರು ಅದರಲ್ಲಿ ಇದ್ದ ವಿಚಾರ ಗೊತ್ತಾದ ಬಳಿಕ ಕೊಲಂಬಿಯ ಸರ್ಕಾರ, ಅವರನ್ನು ಪತ್ತೆ ಹಚ್ಚಲು ವಿಶೇಷ ಶೋಧ ಕಾರ್ಯಾಚರಣೆ ಕೈಗೊಂಡಿತು. 160 ಮಂದಿ ಸೈನಿಕರ ಜೊತೆ ಸ್ಥಳೀಯ ಬುಡಕಟ್ಟು ಸಮುದಾಯದ 70 ಮಂದಿ ವೀರರ ತಂಡ ಅಣಿಗೊಂಡು, ಕಾಡನ್ನು ಜಾಲಾಡತೊಡಗಿತು.

ಇದನ್ನೂ ಓದಿಆತ 6 ಅಡಿ ಎತ್ತರದ ಸುಂದರಾಂಗ! ಆದರೂ ಇನ್ನೂ ಅರ್ಧ ಅಡಿ ಹೆಚ್ಚು ಎತ್ತರ ಇರಬೇಕಂತೆ! ಅದಕ್ಕಾಗಿ ಏನು ಮಾಡಿಸಿಕೊಂಡ ನೋಡಿ

ನೀವು ನಂಬುತ್ತೀರೋ ಇಲ್ಲವೋ ಈ ತಂಡದ ಸದಸ್ಯರು ವಿಮಾನ ಹಾಗೂ ಸಂತ್ರಸ್ತರನ್ನು ಪತ್ತೆಹಚ್ಚಲು ಸಾಗುತ್ತಾ ಸಾಗುತ್ತಾ 2,600 ಕಿಲೋಮೀಟರ್​ನಷ್ಟು ದೂರ ಕ್ರಮಿಸಿತ್ತು. ಜನರ ಹೆಜ್ಜೆಗುರುತುಗಳು, ಅವರು ಅರ್ಧ ತಿಂದುಬಿಟ್ಟಿದ್ದ ಹಣ್ಣುಗಳು, ಡಯಾಪರ್ ಇತ್ಯಾದಿಗಳ ಸುಳಿವುಗಳನ್ನು ಬೆನ್ನತ್ತುತ್ತಾ ಇವರು ಸಾಗುತ್ತಿದ್ದರು.

ಈ ಮಕ್ಕಳು ಒಂದೇ ಕಡೆ ನಿಲ್ಲುತ್ತಿಲ್ಲ ಎಂಬುದು ದೃಢಪಟ್ಟ ಮೇಲೆ ರಕ್ಷಣಾ ತಂಡದವರು ಕಾಡಿನ ವಿವಿಧೆಡೆ ಬರೋಬ್ಬರಿ 10,000 ಫ್ಲಯರ್​ಗಳನ್ನು (ಪತ್ರ) ತೂರಿಬಿಟ್ಟಿದ್ದರು. ಅದರಲ್ಲಿ ಸ್ಪ್ಯಾನಿಷ್ ಹಾಗು ಸ್ಥಳೀಯ ಬುಡಕಟ್ಟು ಭಾಷೆಯಲ್ಲಿ ಸೂಚನೆ ಬರೆಯಲಾಗಿತ್ತು. ಮಕ್ಕಳು ಎಲ್ಲಿದ್ದಾರೋ ಅಲ್ಲಿಯೇ ಇರಬೇಕೆಂದು ಈ ಪತ್ರದಲ್ಲಿ ಮನಿ ಮಾಡಲಾಗಿತ್ತು. ಹಾಗೆಯೇ ಈ ಮಕ್ಕಳ ಅಜ್ಜಿಯ ಧ್ವನಿಮುದ್ರಿತ ಸಂದೇಶವನ್ನೂ ರಕ್ಷಣಾ ತಂಡದವರು ಕಾಡಿನಲ್ಲಿ ಆಡಿಸುತ್ತಿದ್ದರು. ಇದೆಲ್ಲಕ್ಕಿಂತ ಮುಖ್ಯವಾಗಿ ಮಕ್ಕಳಿಗೆ ಬದುಕಲು ನೆರವಾಗುವಂತೆ ಆಹಾರದ ಪಾರ್ಸಲ್, ವಾಟರ್ ಬಾಟಲ್ ಇತ್ಯಾದಿಗಳನ್ನು ಹೆಲಿಕಾಪ್ಟರ್ ಮೂಲಕ ಕಾಡಿನ ವಿವಿಧೆಡೆ ಹಾಕಲಾಗುತ್ತಿತ್ತು.

ಇಷ್ಟೆಲ್ಲಾ ಶ್ರಮ ಪಟ್ಟ ರಕ್ಷಣಾ ತಂಡದವರಿಗೆ ಮಕ್ಕಳ ಕೊನೆಗೂ ಸಿಕ್ಕಿಬಿಡುತ್ತಾರೆ. ವಿಮಾನ ಅಪಘಾತಗೊಂಡ ಸ್ಥಳದಿಂದ 5 ಕಿಮೀ ದೂರದಲ್ಲಿ ಈ ಮಕ್ಕಳಿದ್ದರು. ತರಬೇತಿ ಪಡೆದ ಒಂದು ಮಿಲಿಟರಿ ಶ್ವಾನದ ನೆರವಿನಿಂದ ಮಕ್ಕಳು ಇರುವ ಜಾಗ ಸಿಕ್ಕಿತ್ತು.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:32 pm, Sun, 11 June 23

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ