ಸಾಮಾಜಿಕ ಜಾಲತಾಣದಲ್ಲಿ ಕೆಲವೊಮ್ಮೆ ಕಾಣಿಸಿಕೊಳ್ಳುವ ಪ್ರಾಣಿಗಳ ವಿಡಿಯೋಗಳು ನೆಟ್ಟಿಗರ ಗಮನ ಸೆಳೆಯುತ್ತವೆ. ಅವುಗಳ ತುಂಟಾಟ, ಅವರದೇ ಆದ ಸಂಭಾಷಣೆ ನೋಡುಗರನ್ನು ಸೆಳೆಯುತ್ತದೆ. ಇದೀಗ ಪಾಂಡಾ (Panda) ಮರಿಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೃಗಾಲಯದಲ್ಲಿರುವ ಪಾಂಡಾ ಮರಿಯೊಂದಕ್ಕೆ ಝೂಕೀಪರ್(Zookeeper) ಒನ್ನರು ಬಾಟಲ್ನಲ್ಲಿ ಹಾಲನ್ನು ಕುಡಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಟ್ವಿಟರ್ನಲ್ಲಿ ಹಂಚಿಕೊಳ್ಳಲಾದ ವಿಡಿಯೋ ಬಳಕೆದಾರರನ್ನು ಸೆಳೆದಿದೆ. Buitengebieden ಎನ್ನುವ ಟ್ವಿಟರ್ ಖಾತೆಯಲ್ಲಿ (Twitter) ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದಾರೆ.
Bottle feeding a baby panda.. pic.twitter.com/xNmYEjBXME
— Buitengebieden (@buitengebieden_) February 21, 2022
ವಿಡಿಯೋದಲ್ಲಿ ನೀಲಿ ಬಣ್ಣದ ಸೇಪ್ಟಿ ಡ್ರೆಸ್ ಧರಿಸಿರುವ ಝೂಕೀಪರ್ ಒಬ್ಬರು ಪಾಂಡಾ ಮರಿಯನ್ನು ತೊಡೆಯ ಮೇಲೆ ಕೂರಿಸಿಕೊಂಡು ಬಾಡಲ್ನಲ್ಲಿ ಹಾಲನ್ನು ಕುಡಿಸುತ್ತಿರುವುದನ್ನು ಕಾಣಬಹುದು. ಅದೇ ವಿಡಿಯೋದಲ್ಲಿ ಇನ್ನೊಂದು ಪಾಂಡಾ ಮರಿ ಝೂ ಕೀಪರ್ ಕಾಲಿನ ಬಳಿ ಅಂಟಿಕೊಂಡು ಓಡಾಡುತ್ತಿರುವುದನ್ನು ಕಾಣಬಹುದು. ಯಾವುದೇ ಪ್ರಾಣಿಗಳಾಗಲಿ ನಾವು ಪ್ರೀತಿ, ಅಕ್ಕರೆ ತೋರಿಸಿದರೆ, ಅವುಗಳೂ ನಮ್ಮೊಂದಿಗೆ ಅದೇ ರಿತಿ ನಡೆದುಕೊಳ್ಳುತ್ತವೆ ಎನ್ನುವುದನ್ನು ಈ ವಿಡಿಯೋ ವಿವರಿಸಿದೆ.
ಈ ಕ್ಯೂಟ್ ವಿಡಿಯೋ ನೋಡಿ ನೆಟ್ಟಿಗರು ಮೆಚ್ಚಿಕೊಂಡಿದ್ದು, 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಯನ್ನು ವಿಡಿಯೋ ಪಡೆದುಕೊಂಡಿದೆ. ವಿಡಿಯೋ ನೋಡಿದ ಬಳಕೆದಾರರು ವಿವಿಧ ರೀತಿಯ ಕಾಮೆಂಟ್ಗಳನ್ನು ಹಂಚಿಕೊಂಡಿದ್ದಾರೆ. ನನ್ನ ಮುಂದಿನ ಕೆಲಸ ಅದೇ ಇರಬಹುದು ಎಂದು ಕಾಮೆಂಟ್ ಮಾಡಿದರೆ ಈ ಕೆಲಸವನ್ನು ನಾನು ಪಡೆದುಕೊಳ್ಳುವುದು ಹೇಗೆ ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ:
ರಷ್ಯಾ-ಉಕ್ರೇನ್ ಯುದ್ಧ: ದೇಶದ ಪರವಾಗಿ ನಿಂತು ಮಗಳಿಗೆ ಕಣ್ಣೀರಿನ ವಿದಾಯ ಹೇಳಿದ ತಂದೆ: ವಿಡಿಯೋ ವೈರಲ್
Published On - 10:28 am, Fri, 25 February 22