ನೈಜೀರಿಯಾದ ಮೊಕ್ವಾ ನಗರದಲ್ಲಿ ಡ್ಯಾಂ ಕುಸಿದು ಭಾರೀ ಪ್ರವಾಹ; 111 ಜನ ಸಾವು
ನೈಜೀರಿಯಾದ ಮೊಕ್ವಾ ಪಟ್ಟಣದಲ್ಲಿ ಪ್ರವಾಹ ಉಂಟಾಗಿದೆ. ಡ್ಯಾಂ ಒಡೆದ ಹಿನ್ನೆಲೆಯಲ್ಲಿ 111 ಜನರು ಸಾವನ್ನಪ್ಪಿದ್ದಾರೆ. ನೈಜೀರಿಯಾದ ನೈಜರ್ ರಾಜ್ಯದ ಜನನಿಬಿಡ ಮಾರುಕಟ್ಟೆ ಪಟ್ಟಣವಾದ ಮೊಕ್ವಾವನ್ನು ಆವರಿಸಿರುವ ಪ್ರವಾಹವು ಗುರುವಾರದ ವೇಳೆಗೆ ಕನಿಷ್ಠ 111 ಜನರನ್ನು ಬಲಿ ತೆಗೆದುಕೊಂಡಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ರಾಜ್ಯ ರಾಜಧಾನಿ ಮಿನ್ನಾದಲ್ಲಿನ ಕಾರ್ಯಾಚರಣೆ ಕಚೇರಿಯ ಮುಖ್ಯಸ್ಥ ಹುಸೇನಿ ಇಸಾಹ್ ರಕ್ಷಣಾ ಪ್ರಯತ್ನಗಳು ನಡೆಯುತ್ತಿವೆ ಮತ್ತು ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಹೇಳಿದ್ದಾರೆ.
ಅಬುಜಾ, ಮೇ 30: ನೈಜೀರಿಯಾದ ನೈಜರ್ ರಾಜ್ಯದ ಮಾರುಕಟ್ಟೆ ಪಟ್ಟಣವಾದ ಮೊಕ್ವಾದಲ್ಲಿ ಪ್ರವಾಹ ಉಂಟಾಗಿದೆ. ಡ್ಯಾಂ (Dam) ಒಡೆದು ಹೋಗಿದ್ದರಿಂದ ಪಟ್ಟಣದೊಳಗೆ ನೀರು ನುಗ್ಗಿ ಕನಿಷ್ಠ 111 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನೈಜರ್ ರಾಜ್ಯದ ರಾಜಧಾನಿ ಮಿನ್ನಾದಲ್ಲಿನ ಕಾರ್ಯಾಚರಣೆ ಕಚೇರಿಯ ಮುಖ್ಯಸ್ಥ ಹುಸೇನಿ ಇಸಾಹ್, ಶುಕ್ರವಾರ ರಕ್ಷಣಾ ಕಾರ್ಯಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುತ್ತಲೇ ಇದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ