ಹನ್ನೆರಡು-ಅಡಿಗಳಷ್ಟು ಉದ್ದದ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು ಶಿರಸಿ ಸಮೀಪದ ಹಿತ್ತಲಕಾಯಿಯಲ್ಲಿ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 10, 2022 | 1:11 PM

ಸುಮಾರು 12 ಅಡಿಗಳಷ್ಟು ಉದ್ದವಿರುವ ಕಿಂಗ್ ಕೋಬ್ರಾ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಹಿತ್ತಲಕಾಯಿ ಹೆಸರಿನ ಗ್ರಾಮದಲ್ಲಿ ಕಾಣಿಸಿಕೊಂಡಿದೆ.

ಉತ್ತರ ಕನ್ನಡ:  ಭಾರಿ ಗಾತ್ರದ ಈ ಸರ್ಪವನ್ನು ನೋಡಿದರೆ ಹೆದರಿಕೆಯಾಗುತ್ತದೆ ಮಾರಾಯ್ರೇ. ಇದು ಅಂತಿಂಥ ಸರ್ಪವಲ್ಲ, ಮಹಾ ಅಪಾಯಕಾರಿ ಕಾಳಿಂಗ ಸರ್ಪ! ಸುಮಾರು 12 ಅಡಿಗಳಷ್ಟು ಉದ್ದವಿರುವ ಕಿಂಗ್ ಕೋಬ್ರಾ (king cobra) ಉತ್ತರ ಕನ್ನಡ ಜಿಲ್ಲೆ ಶಿರಸಿ (Sirsi) ತಾಲ್ಲೂಕಿನ ಹಿತ್ತಲಕಾಯಿ ಹೆಸರಿನ ಗ್ರಾಮದಲ್ಲಿ ಕಾಣಿಸಿಕೊಂಡಿದೆ. ಸ್ಥಳೀಯ ಉರಗ ತಜ್ಞ ಮ್ಹಿನಾಜ್ ಅಹ್ಮದ್ (Mhinaz Ahmed ) ಹಾವನ್ನು ಹಿಡಿದು ಅದನ್ನು ಸುರಕ್ಷಿತವಾದ ಸ್ಥಳಕ್ಕೆ ಒಯ್ದುಬಿಟ್ಟರು.