ಬಿಪಿಎಲ್ ರೇಷನ್ ಕಾರ್ಡ್ ರದ್ದು ಮಾಡುತ್ತಿರುವುದ್ಯಾಕೆ? ಅಸಲಿ ಕಾರಣ ಬಿಚ್ಚಿಟ್ಟ ಅಧಿಕಾರಿ

Updated on: Sep 28, 2025 | 7:18 PM

1 ಲಕ್ಷ 20 ಸಾವಿರ ಆದಾಯ ಹೊಂದಿದ ಕುಟುಂಬ, ತೆರಿಗೆ ಹಾಗೂ 7 ಎಕರೆ ಗೂ ಅಧಿಕ ಜಮೀನು ಹೊಂದಿರೋ ಕುಟುಂಬದ ಬಿಪಿಎಲ್ ಕಾರ್ಡ್ ರದ್ದು ಮಾಡಲು ಸರ್ಕಾರ ಆದೇಶ ಮಾಡಿದೆ. ಪಡಿತರ ಅಂಗಡಿಗಳ ಮುಂದೆ ನೋಟಿಸ್ ಹಾಕಿ ದಾಖಲೆಗಳನ್ನ ನೀಡಲು ಸೂಚನೆ ನೀಡಿದೆ. ಇದರಿಂದ ಬಡಕುಟುಂಬಗಳು ಕಂಗಲಾಗಿದ್ದು, ಸರ್ಕಾರ ಮರುಪರಿಶೀಲನೆ ಮಾಡಿ ಅನರ್ಹ ಮಾಡಬೇಕು. ಹಾವೇರಿ ಜಿಲ್ಲೆಯಲ್ಲಿಯೇ 14 ಸಾವಿರಕ್ಕೂ ಅಧಿಕ ಕಾರ್ಡ್ ರದ್ದು ಮಾಡಲು ಆದೇಶ‌ ಮಾಡಲಾಗಿದೆ. ಒಟ್ಟು ಹಾವೇರಿ ಜಿಲ್ಲೆಯಲ್ಲಿ 2 ಲಕ್ಷಕ್ಕೂ ಅಧಿಕ ರೇಷನ್ ಕಾರ್ಡ್ ಗಳಿದ್ದು, ಈ ಪೈಕಿ 14,771 ಅನರ್ಹ ಪಡಿತರ ಚೀಟಿಗಳನ್ನ ಗುರುತಿಸಲಾಗಿದೆ.

ಹಾವೇರಿ, (ಸೆಪ್ಟೆಂಬರ್ 28): 1 ಲಕ್ಷ 20 ಸಾವಿರ ಆದಾಯ ಹೊಂದಿದ ಕುಟುಂಬ, ತೆರಿಗೆ ಹಾಗೂ 7 ಎಕರೆ ಗೂ ಅಧಿಕ ಜಮೀನು ಹೊಂದಿರೋ ಕುಟುಂಬದ ಬಿಪಿಎಲ್ ಕಾರ್ಡ್ ರದ್ದು ಮಾಡಲು ಸರ್ಕಾರ ಆದೇಶ ಮಾಡಿದೆ. ಪಡಿತರ ಅಂಗಡಿಗಳ ಮುಂದೆ ನೋಟಿಸ್ ಹಾಕಿ ದಾಖಲೆಗಳನ್ನ ನೀಡಲು ಸೂಚನೆ ನೀಡಿದೆ. ಇದರಿಂದ ಬಡಕುಟುಂಬಗಳು ಕಂಗಲಾಗಿದ್ದು, ಸರ್ಕಾರ ಮರುಪರಿಶೀಲನೆ ಮಾಡಿ ಅನರ್ಹ ಮಾಡಬೇಕು. ಹಾವೇರಿ ಜಿಲ್ಲೆಯಲ್ಲಿಯೇ 14 ಸಾವಿರಕ್ಕೂ ಅಧಿಕ ಕಾರ್ಡ್ ರದ್ದು ಮಾಡಲು ಆದೇಶ‌ ಮಾಡಲಾಗಿದೆ. ಒಟ್ಟು ಹಾವೇರಿ ಜಿಲ್ಲೆಯಲ್ಲಿ 2 ಲಕ್ಷಕ್ಕೂ ಅಧಿಕ ರೇಷನ್ ಕಾರ್ಡ್ ಗಳಿದ್ದು, ಈ ಪೈಕಿ 14,771 ಅನರ್ಹ ಪಡಿತರ ಚೀಟಿಗಳನ್ನ ಗುರುತಿಸಲಾಗಿದೆ.

Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More