[lazy-load-videos-and-sticky-control id=”la2oZ9Zt0SU”]
ಬೆಂಗಳೂರು: ನಗರದ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿಗೆ ಸಂಬಂಧಪಟ್ಟಂತೆ ಬರೀ ಸಾವಿನ ಸುದ್ದಿಯನ್ನು ಕೇಳುತ್ತಿದ್ದ ನಗರದ ಜನರ ಮನಸಿಗೆ ಮುದ ನೀಡುವಂತಹ ವಿಚಾರವೊಂದು ವಾಣಿವಿಲಾಸ ಆಸ್ಪತ್ರೆಯಿಂದ ಹೊರಬಿದ್ದಿದೆ.
ಹೌದು ಕೊರೊನಾ ಸೋಂಕಿತ ಗರ್ಭಿಣಿಯರ ಮಕ್ಕಳ ಪಾಲಿಗೆ ವಾಣಿವಿಲಾಸ ಆಸ್ಪತ್ರೆ ಆಪದ್ಬಾಂಧವನಾಗಿದ್ದು, ಇಲ್ಲಿಯವರೆಗೆ 160 ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿದ ಕೀರ್ತಿ ವಾಣಿವಿಲಾಸ ಆಸ್ಪತ್ರೆಯ ವೈದ್ಯರಿಗೆ ಸಲ್ಲಬೇಕಾಗುತ್ತದೆ.
ಇಲ್ಲಿಯವರೆಗೆ ಹೆರಿಗೆಯಾದ ಯಾವೊಂದು ಮಗುವಿಗೂ ಕೊರೊನಾ ಸೋಂಕು ತಗುಲಿಲ್ಲ. ಹಾಗೂ ವಿಕ್ಟೋರಿಯಾದ ಟ್ರಾಮಾ ಕೇರ್ ಸೆಂಟರ್ನಲ್ಲಿ ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸಲಾಗುತ್ತದೆ. ಹೆರಿಗೆಯಾದ ಕೂಡಲೇ ಟ್ರಾನ್ಸ್‌ಪೋರ್ಟ್ ಇನ್ಕ್ಯುಬೇಷನ್ ಆಂಬ್ಯುಲೆನ್ಸ್ ಮೂಲಕ ಮಕ್ಕಳನ್ನು ವಾಣಿವಿಲಾಸ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತದೆ.
ಹೀಗೆ ಸ್ವಿಫ್ಟ್ ಮಾಡಲಾದ ಮಕ್ಕಳನ್ನು ಆಸ್ಪತ್ರೆಯ ಸ್ಟಾಫ್ ನರ್ಸ್ ಹಾಗೂ ವೈದ್ಯರು ಸದಾ ಕಾಲ ಜೋಪಾನ ಮಾಡುತ್ತಾರೆ. ಜೊತೆಗೆ ಮಕ್ಕಳ ಪಾಲಿಗೆ ಕೊರೊನಾ ವಾರಿಯರ್ಸೆ ತಾಯಂದಿರಾಗಿ ಹಾಲಿನ ಪೌಡರ್ ಬಳಸಿ ದಿನನಿತ್ಯ ಆಲುಣಿಸುತ್ತಾರೆ. ಹೀಗಾಗಿ ಎಲ್ಲಾ ಮಕ್ಕಳು ಆರೋಗ್ಯವಾಗಿದ್ದು, ಕೊರೊನಾ ಸೋಂಕಿತ ತಾಯಿಯ ವರದಿ ನೆಗೆಟಿವ್ ಆಗಿ ಗುಣಮುಖರಾದ ಕೂಡಲೆ ಮಗುವನ್ನು ತಾಯಿಯ ಜೊತೆ ಡಿಸ್ಚಾರ್ಜ್ ಮಾಡುತ್ತಿದ್ದಾರೆ.
Published On - 1:56 pm, Sun, 2 August 20