ಲಾಕ್ಡೌನ್ ನಡುವೆ Spain ಯುವತಿ ಆದಳು ಅಪ್ಪಟ ಕನ್ನಡತಿ !
[lazy-load-videos-and-sticky-control id=”OcCyeuVsXBk”] ಉಡುಪಿ: ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ. ಭಾರತದ ಸಂಸ್ಕೃತಿಗೆ ಮಾರು ಹೋಗದವರಿಲ್ಲ. ಲಕ್ಷಾಂತರ ಮಂದಿ ವಿದೇಶಿಗರು ಇಲ್ಲಿನ ಸಂಸ್ಕೃತಿ ತಿಳಿದುಕೊಳ್ಳಲು ಭಾರತಕ್ಕೆ ಬರುತ್ತಾರೆ. ಅದೇ ರೀತಿ, ಸ್ಪೇನ್ನ ಯುವತಿಯೊಬ್ಬಳು ಪ್ರವಾಸಕ್ಕೆಂದು ಬಂದು ಉಡುಪಿಯ ಹೆರಂಜಾಲಿನ ಮನೆ ಮಗಳಾಗಿಬಿಟ್ಟಿದ್ದಾಳೆ. ಜಿಲ್ಲೆಯ ಬೈಂದೂರಿನಲ್ಲಿ ಇಂತಹ ಅಪರೂಪದ ಘಟನೆ ನಡೆದಿದೆ. ಹೌದು, ಸ್ಪೇನ್ ಮೂಲದ ಯುವತಿ ಥೆರೆಸಾ ಪ್ರವಾಸಕ್ಕೆಂದು ಭಾರತಕ್ಕೆ ಬಂದಿದ್ರು. ಆದರೆ ದೇಶ ಲಾಕ್ಡೌನ್ ಆದ ನಂತರ ಕುಂದಾಪುರದ ಹೆರಂಜಾಲಿನಲ್ಲಿ ಲಾಕ್ ಆಗಿಬಿಟ್ಟಿದ್ದಾರೆ. ಈ ನಡುವೆ ಇವರು […]
[lazy-load-videos-and-sticky-control id=”OcCyeuVsXBk”]
ಉಡುಪಿ: ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ. ಭಾರತದ ಸಂಸ್ಕೃತಿಗೆ ಮಾರು ಹೋಗದವರಿಲ್ಲ. ಲಕ್ಷಾಂತರ ಮಂದಿ ವಿದೇಶಿಗರು ಇಲ್ಲಿನ ಸಂಸ್ಕೃತಿ ತಿಳಿದುಕೊಳ್ಳಲು ಭಾರತಕ್ಕೆ ಬರುತ್ತಾರೆ. ಅದೇ ರೀತಿ, ಸ್ಪೇನ್ನ ಯುವತಿಯೊಬ್ಬಳು ಪ್ರವಾಸಕ್ಕೆಂದು ಬಂದು ಉಡುಪಿಯ ಹೆರಂಜಾಲಿನ ಮನೆ ಮಗಳಾಗಿಬಿಟ್ಟಿದ್ದಾಳೆ. ಜಿಲ್ಲೆಯ ಬೈಂದೂರಿನಲ್ಲಿ ಇಂತಹ ಅಪರೂಪದ ಘಟನೆ ನಡೆದಿದೆ.
ಹೌದು, ಸ್ಪೇನ್ ಮೂಲದ ಯುವತಿ ಥೆರೆಸಾ ಪ್ರವಾಸಕ್ಕೆಂದು ಭಾರತಕ್ಕೆ ಬಂದಿದ್ರು. ಆದರೆ ದೇಶ ಲಾಕ್ಡೌನ್ ಆದ ನಂತರ ಕುಂದಾಪುರದ ಹೆರಂಜಾಲಿನಲ್ಲಿ ಲಾಕ್ ಆಗಿಬಿಟ್ಟಿದ್ದಾರೆ. ಈ ನಡುವೆ ಇವರು ನಮ್ಮ ಭಾಷೆ, ಉಡುಗೆ-ತೊಡುಗೆ, ಆಚರಣೆಗಳಿಗೆ ಮಾರು ಹೋಗಿದ್ದಾರೆ. ಹೀಗಾಗಿ, ಥೆರೆಸಾ ಸಹ ನಮ್ಮಲೊಬ್ಬರಾಗಿ ಕನ್ನಡ ಕಲಿತು ಇಲ್ಲಿನ ಉಡುಗೆ-ತೊಡುಗೆಗಳನ್ನು ಹಾಕಿಕೊಂಡು ಅಪ್ಪಟ ಕರಾವಳಿ ಕನ್ನಡತಿಯಂತೆ ಕಾಣಿಸುತ್ತಾರೆ.
ಸ್ನೇಹಿತರಾದ ಕೃಷ್ಣ ಪೂಜಾರಿ ಎಂಬವವರ ಮನೆಯಲ್ಲಿ ಆಶ್ರಯ ಪಡೆದಿರುವ ಈಕೆ, ಅಪ್ಪಟ ಕನ್ನಡತಿ ಆಗಿಬಿಟ್ಟಿದ್ದಾಳೆ. ಅದರಲ್ಲೂ ಈಕೆಯ ದನಿಯಲ್ಲಿ ಕುಂದಾಪುರ ಕನ್ನಡವನ್ನ ಕೇಳಿಸಿಕೊಂಡರೇ ಖಂಡಿತ ವಾಹ್ ಅಂತಾ ಹೇಳ್ತೀರಾ. ಒಟ್ನಲ್ಲಿ, ಇಲ್ಲಿನ ಸಂಸ್ಕೃತಿಗೆ ಮಾರು ಹೋಗಿ ಇಲ್ಲಿಯವಳೇ ಆಗಿಬಿಟ್ಟಿದ್ದಾಳೆ.
Published On - 11:43 am, Sun, 2 August 20