ಮನೆಯಿಂದ ಹೊರ ಹೋಗಿದ್ದಾಕೆ ಶವವಾಗಿ ಪತ್ತೆ: ಕೊಲೆ ಮಾಡಿ ಆರೋಪಿಗಳು ಎಸ್ಕೇಪ್​?

Edited By:

Updated on: Jan 21, 2026 | 3:28 PM

ಧಾರವಾಡ ಹೊರವಲಯದಲ್ಲಿ 19 ವರ್ಷದ ಜಕಿಯಾ ಮುಲ್ಲಾ ಎಂಬ ಯುವತಿಯ ಶವ ಪತ್ತೆಯಾಗಿದೆ. ಮನೆಯಿಂದ ಹೊರ ಹೋಗಿದ್ದ ಯುವತಿ ಮರುದಿನ ಶವವಾಗಿ ಪತ್ತೆಯಾಗಿದ್ದು, ಕೊಲೆ ಮಾಡಿ ಮರತದೇಹ ಬಿಸಾಕಿರುವ ಶಂಕೆ ವ್ಯಕ್ತವಾಗಿದೆ. ಎರಡು ಠಾಣೆಗಳ ವ್ಯಾಪ್ತಿಯ ಬಗ್ಗೆ ಗೊಂದಲ ಹಿನ್ನೆಲೆ ಧಾರವಾಡ ಗ್ರಾಮೀಣ ಮತ್ತು ವಿದ್ಯಾಗಿರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಧಾರವಾಡ, ಜನವರಿ 21: ನಗರದ ಹೊರವಲಯದಲ್ಲಿ ಯುವತಿಯೋರ್ವಳ ಶವ (Dead Body)  ಪತ್ತೆಯಾಗಿದ್ದು, ಮೃತಳನ್ನು ಗಾಂಧಿ ಚೌಕ್ ಬಡಾವಣೆ ನಿವಾಸಿ ಝಕಿಯಾ ಮುಲ್ಲಾ(19) ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆ ಮನೆಯಿಂದ ಹೊರಹೋಗಿದ್ದ ಝಕಿಯಾ ಮುಲ್ಲಾ ಇಂದು ಮನಸೂರು ರಸ್ತೆಯ ವಿನಯ್ ಡೈರಿ ಬಳಿ ಶವವಾಗಿ ಪತ್ತೆಯಾಗಿದ್ದಾಳೆ. ಹತ್ಯೆ ಮಾಡಿ ಯುವತಿ ಶವ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಧಾರವಾಡ ಗ್ರಾಮೀಣ ಹಾಗೂ ವಿದ್ಯಾಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿವಿಲ್ ಆಸ್ಪತ್ರೆ ಮುಂದೆ ಕುಟುಂಬ ಮತ್ತು ಸಂಬಂಧಿಕರ ಆಕ್ರೋಶ ಮುಗಿಲು ಮುಟ್ಟಿದ್ದು, ಯಾರೋ ಕರೆದುಕೊಂಡು ಹೋಗಿಯೇ ಕೊಲೆ ಮಾಡಿದ್ದಾರೆ. ಆರೋಪಿಯನ್ನು ಪತ್ತೆ ಮಾಡಿ ಶೂಟೌಟ್ ಮಾಡಬೇಕು ಎಂದು ಆಗ್ರಹಿಸಲಾಗಿದೆ. ಝಕಿಯಾ ತಂದೆ ಯೂನುಸ್ ರಿಯಲ್ ಎಸ್ಟೇಟ್ ಬ್ರೋಕರ್ ಆಗಿದ್ದು, ನಿನ್ನೆ ಸಂಜೆ ಮನೆಯಿಂದ ಹೊರ ಹೋಗಿದ್ದ ಝಕಿಯಾ ಮುಲ್ಲಾ ಮರಳಿ ಬಾರದ ಹಿನ್ನೆಲೆ ಕುಟುಂಬಸ್ಥರು ದೂರು ನೀಡಿದ್ದರು. ಧಾರವಾಡ ಸಾಧನಕೇರಿ ನಿವಾಸಿಯಾಗಿರೋ ಯುವಕನ ಜೊತೆ ಮುಂದಿನ ತಿಂಗಳು ಝಕಿಯಾ ನಿಶ್ಚಿತಾರ್ಥಕ್ಕೂ ಕುಟುಂಬ ತಯಾರಿ ನಡೆಸಿತ್ತು ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.