‘ಕಾಂತಾರ: ಚಾಪ್ಟರ್ 1 ಚಿತ್ರಕ್ಕಾಗಿ 20-25 ವಿಎಫ್​ಎಕ್ಸ್ ಕಂಪನಿಗಳು ಕೆಲಸ ಮಾಡಿವೆ’; ರಿಷಬ್ ಶೆಟ್ಟಿ

Edited By:

Updated on: Sep 27, 2025 | 8:09 PM

ರಿಷಬ್ ಶೆಟ್ಟಿ ಅವರು ‘ಕಾಂತಾರ ಚಾಪ್ಟರ್ 1’ ಚಿತ್ರ ರಿಲೀಸ್​ಗೆ ರೆಡಿ ಇದೆ. ಈ ಸಿನಿಮಾದಲ್ಲಿ ಸಾಕಷ್ಟು ಅದ್ಭುತವಾಗಿ ವಿಎಫ್​ಎಕ್ಸ್ ಬಳಕೆ ಮಾಡಲಾಗಿದೆ. ಈ ಬಗ್ಗೆ ರಿಷಬ್ ಶೆಟ್ಟಿ ಅವರು ಮಾತನಾಡಿದರು. ಟಿವಿ9 ಕನ್ನಡದ ಜೊತೆಗೆ ಅವರು ಮಾತನಾಡಿ ಈ ವಿಚಾರ ರಿವೀಲ್ ಮಾಡಿದರು.

‘ಕಾಂತಾರ: ಚಾಪ್ಟರ್ 1’ ಸಿನಿಮಾದ ಟ್ರೇಲರ್​ನಲ್ಲಿ ಬರುವ ಒಂದು ಹುಲಿಯು ಅದ್ಭುತವಾಗಿ ಕಾಣಿಸಿತ್ತು. ನಿಜವಾದ ಹುಲಿ ರೀತಿಯೇ ಅದು ಕಾಣಿಸಿತ್ತು. ಇದನ್ನು ವಿಎಫ್​ಎಕ್ಸ್ ಮೂಲಕ ಮಾಡಲಾಗಿದೆ. ಈ ಚಿತ್ರದ ವಿಎಫ್​ಎಕ್ಸ್ ಬಗ್ಗೆ ರಿಷಬ್ ಶೆಟ್ಟಿ ಅವರು ಮಾತನಾಡಿದರು. ‘ಸಿನಿಮಾದಲ್ಲಿ ಬರುವ ಹುಲಿ ಒಂದು ಪಾತ್ರವಾಗಿಯೇ ಬರುತ್ತದೆ. ವಿಎಫ್​ ಎಕ್ಸ್​ನ ಚೆನ್ನಾಗಿ ಮಾಡಿದ್ದಾರೆ. ಚಿತ್ರಕ್ಕಾಗಿ 20-25 ವಿಎಫ್​ಎಕ್ಸ್ ಕಂಪನಿಗಳು ಕೆಲಸ ಮಾಡಿವೆ. ವಿಎಫ್​ಎಕ್ಸ್ ಎನಿಸಬಾರದು. ಕಥೆ ಜೊತೆ ಬೆರೆಯಬೇಕು’ ಎಂದಿದ್ದಾರೆ ರಿಷಬ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More