ಬೈಕ್ ಮೇಲೆ ಬಿದ್ದ ಬೃಹತ್ ಮರ: ಯುವತಿ ಸ್ಥಳದಲ್ಲೇ ಸಾವು

Updated on: Oct 05, 2025 | 11:19 PM

ಬೃಹತ್ ಮರ ಬಿದ್ದು ಯುವತಿಯೊಬ್ಬಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಸೋಲದೇವನಹಳ್ಳಿ ಠಾಣೆ ಬಳಿ ನಡೆದಿದೆ. ಬೆಂಗಳೂರಿನ ಆರ್‌ಟಿ ನಗರದ ಕೀರ್ತನಾ (23) ಮೃತ ಯುವತಿ. ಆಚಾರ್ಯ ಕಾಲೇಜು ಮೈದಾನದಲ್ಲಿ ಸ್ಯಾಂಡಲ್ ವುಡ್ ಪ್ರೀಮಿಯರ್ ಲೀಗ್‌ ಕ್ರಿಕೆಟ್‌ ಪಂದ್ಯ ನೋಡಲು ಕೀರ್ತನಾ ತೆರಳಿದ್ದರು. ಸ್ನೇಹಿತೆ ಜತೆ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದಾಗ ಮರ ಉರುಳಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು, (ಅಕ್ಟೋಬರ್ 05) : ಬೃಹತ್ ಮರ ಬಿದ್ದು ಯುವತಿಯೊಬ್ಬಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಸೋಲದೇವನಹಳ್ಳಿ ಠಾಣೆ ಬಳಿ ನಡೆದಿದೆ. ಬೆಂಗಳೂರಿನ ಆರ್‌ಟಿ ನಗರದ ಕೀರ್ತನಾ (23) ಮೃತ ಯುವತಿ. ಆಚಾರ್ಯ ಕಾಲೇಜು ಮೈದಾನದಲ್ಲಿ ಸ್ಯಾಂಡಲ್ ವುಡ್ ಪ್ರೀಮಿಯರ್ ಲೀಗ್‌ ಕ್ರಿಕೆಟ್‌ ಪಂದ್ಯ ನೋಡಲು ಕೀರ್ತನಾ ತೆರಳಿದ್ದರು. ಸ್ನೇಹಿತೆ ಜತೆ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದಾಗ ಮರ ಉರುಳಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.