ನೂತನ 24 ಸಚಿವರ ಪಟ್ಟಾಭೀಷೇಕಕ್ಕೆ ರಾಜಭವನ ಹೇಗೆ ಸಿದ್ಧವಾಗಿದೆ ನೋಡಿ

ನೂತನ 24 ಸಚಿವರ ಪಟ್ಟಾಭೀಷೇಕಕ್ಕೆ ರಾಜಭವನ ಹೇಗೆ ಸಿದ್ಧವಾಗಿದೆ ನೋಡಿ

ರಮೇಶ್ ಬಿ. ಜವಳಗೇರಾ
|

Updated on: May 27, 2023 | 9:55 AM

ದೆಹಲಿಯಲ್ಲಿ ಹೈಕಮಾಂಡ್​ ನಾಯಕರ ಜೊತೆ ನಡೆದ ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಭೆ ಯಶಸ್ವಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ಸೇರಲಿರುವ 24 ಮಂದಿ ಸಚಿವರ ಪಟ್ಟಿ ಅಂತಿಮಗೊಂಡಿದೆ. ಇಂದು (ಮೇ.27) ಬೆಳಗ್ಗೆ 11.45ಕ್ಕೆ ರಾಜಭವನದ ಮನೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜಭವನದಲ್ಲಿ ಹೇಗೆಲ್ಲ ಸಿದ್ಧತೆಗಳು ನಡೆದಿವೆ ಎನ್ನುವುದನ್ನು ನೋಡಿ.

ಬೆಂಗಳೂರು: ದೆಹಲಿಯಲ್ಲಿ ಹೈಕಮಾಂಡ್​ ನಾಯಕರ ಜೊತೆ ನಡೆದ ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಭೆ ಯಶಸ್ವಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ಸೇರಲಿರುವ 24 ಮಂದಿ ಸಚಿವರ ಪಟ್ಟಿ ಅಂತಿಮಗೊಂಡಿದೆ. ಇಂದು (ಮೇ.27) ಬೆಳಗ್ಗೆ 11.45ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ನಡೆಯಲಿರುವ ಪದಗ್ರಹಣ ಸಮಾರಂಭದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.  ಇದಕ್ಕಾಗಿ ರಾಜಭವನದಲ್ಲಿ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ. ಗಣ್ಯರಿಗೆ, ಶಾಸಕರಿಗೆ, ಕುಟುಂಬಸ್ಥರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ. ಹಾಗಾದ್ರೆ, ರಾಜಭವನದಲ್ಲಿ ಹೇಗೆಲ್ಲ ಸಿದ್ಧತೆಗಳು ನಡೆದಿವೆ ಎನ್ನುವುದನ್ನು ನೋಡಿ.