ಮಫ್ತಿ (Mufti) ಸಿನಿಮಾದ ಸೂಪರ್ ಹಿಟ್ ಪಾತ್ರ ಭೈರತಿ ರಣಗಲ್ (Bhairathi Ranagal). ಆ ಪಾತ್ರ ಶಿವಣ್ಣನಿಗೆ (Shiva Rajkumar) ಅದೆಷ್ಟು ಸೂಟ್ ಆಗಿತ್ತೆಂದರೆ ಸ್ಕ್ರೀನ್ ಟೈಮ್ ಬಹಳ ಕಡಿಮೆ ಇದ್ದರೂ ಸಹ ಮಿಕ್ಕೆಲ್ಲ ಪಾತ್ರಗಳಿಗಿಂತಲೂ ಆ ಪಾತ್ರ ಅತಿ ಹೆಚ್ಚು ಸದ್ದಾಗಿತ್ತು. ಇದೀಗ ಅದೇ ಪಾತ್ರವನ್ನು ಆಧರಿಸಿ ಸಿನಿಮಾ ಮೂಡಿಬರುತ್ತಿದೆ. ಭೈರತಿ ರಣಗಲ್ ಸಿನಿಮಾಕ್ಕೆ ಮೇ 26ಕ್ಕೆ ಮುಹೂರ್ತ ನೆರವೇರಿದೆ. ಆದರೆ ಮೊದಲ ಬಾರಿಗೆ ಮಫ್ತಿ ಸಿನಿಮಾದಲ್ಲಿ ಭೈರತಿ ರಣಗಲ್ ಪಾತ್ರದಲ್ಲಿ ನಟಿಸುವುದೋ ಬೇಡವೊ ಎಂಬ ಅನುಮಾನ ಶಿವಣ್ಣನಿಗೆ ಕಾಡಿತ್ತಂತೆ ಆ ಬಗ್ಗೆ ಸ್ವತಃ ಶಿವಣ್ಣ ಮಾತನಾಡಿದ್ದಾರೆ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ