Electricity free Guarantee: ಆರೂವರೆ ಕೋಟಿ ಜನಸಂಖ್ಯೆಯ ಕರ್ನಾಟಕದಲ್ಲಿ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವುದು ಸುಲಭವಲ್ಲ!

Electricity free Guarantee: ಆರೂವರೆ ಕೋಟಿ ಜನಸಂಖ್ಯೆಯ ಕರ್ನಾಟಕದಲ್ಲಿ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವುದು ಸುಲಭವಲ್ಲ!

ಅರುಣ್​ ಕುಮಾರ್​ ಬೆಳ್ಳಿ
|

Updated on: May 27, 2023 | 8:09 AM

ದೆಹಲಿಯಲ್ಲಿ 46 ಲಕ್ಷ ಮನೆಗಳಿದ್ದರೆ, ಕರ್ನಾಟಕದಲ್ಲಿ 2011 ರಲ್ಲೇ 1.34 ಕೋಟಿ ಮನೆಗಳಿದ್ದವು. ಈಗ ಈ ಸಂಖ್ಯೆ 1.75 ಕೋಟಿ ದಾಟಿರಬಹುದು.

ಬೆಂಗಳೂರು: ಕಾಂಗ್ರೆಸ್ ಪಕ್ಷ ಚುನಾವಣೆ ಸಮಯದಲ್ಲಿ ರಾಜ್ಯದ ಎಲ್ಲ ಮನೆಗಳಿಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ವಾಗ್ದಾನ ಮಾಡಿದೆ, ಆದರೆ ಈ ಗ್ಯಾರಂಟಿ ಅನುಷ್ಥಾನಕ್ಕೆ ತರೋದು ಅಷ್ಟು ಸುಲಭವಲ್ಲ ಅಂತ ಸರ್ಕಾರ ರಚಿಸಿದ ಬಳಿಕ ಅರಿವಾಗುತ್ತಿದೆ. ಈ ಯೋಜನೆಯನ್ನು ಆರಂಭಿಸಿದ್ದು ಅರವಿಂದ್ ಕೇಜ್ರಿವಾಲ್ (Arvind Kejriwal) ನೇತೃತ್ವದ ದೆಹಲಿ ಸರ್ಕಾರ (Delhi Government) ಮತ್ತು ಅದನ್ನು ಕಳೆದ 5 ವರ್ಷಗಳಿಂದ ಯಶಸ್ವೀಯಾಗಿ ಜಾರಿಯಲ್ಲಿಟ್ಟಿದೆ. ಮೊದಲಿಗೆ ದೆಹಲಿಯ ಎಲ್ಲ ಮನೆಗಳಿಗೆ 200 ಯೂನಿಟ್ ಪವರ್ ಉಚಿತವಾಗಿ ನೀಡಲಾಗುತ್ತಿತ್ತು, ಆದರೆ ಈಗ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಉಚಿತ ವಿದ್ಯುತ್ (free electricity) ನೀಡಲಾಗುತ್ತಿದೆ. ಕುಟುಂಬವೊಂದು ತಿಂಗಳಲ್ಲಿ 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಸಿದರೆ ಪೂರ್ತಿ ಬಿಲ್ ಕಟ್ಟಬೇಕು. ಅಲ್ಲಿ ಕೊಳಾಯಿ ನೀರಿಗೂ ಜನ ಹಣ ನೀಡಬೇಕಿಲ್ಲ ಮತ್ತು ಬಸ್ಸುಗಳಲ್ಲಿ ಮಹಿಳೆಯರು ದುಡ್ಡು ತೆರದೆ ಪ್ರಯಾಣಿಸಬಹುದು. ಆದರೆ ರಾಜ್ಯದ ಸಮಸ್ಯೆಯೆಂದರೆ, ಇದು ದೆಹಲಿಗಿಂತ ಮೂರು ಪಟ್ಟು ದೊಡ್ಡದು. ಅಲ್ಲಿನ ಜನಸಂಖ್ಯೆ 2 ಕೋಟಿಯಾದರೆ ರಾಜ್ಯದ್ದು 6.5 ಕೋಟಿ. ದೆಹಲಿಯಲ್ಲಿ 46 ಲಕ್ಷ ಮನೆಗಳಿದ್ದರೆ, ಕರ್ನಾಟಕದಲ್ಲಿ 2011 ರಲ್ಲೇ 1.34 ಕೋಟಿ ಮನೆಗಳಿದ್ದವು. ಈಗ ಈ ಸಂಖ್ಯೆ 1.75 ಕೋಟಿ ದಾಟಿರಬಹುದು. ರಾಜ್ಯ ಸರ್ಕಾರದ ಮುಂದಿರುವ ಸವಾಲು ದೊಡ್ಡದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ