Chamarajanagara News: ಹುಟ್ಟುಹಬ್ಬದ ಪ್ರಯುಕ್ತ ಬಿರಿಯಾನಿ ಊಟ: ತಂಗಳು ಬಿರಿಯಾನಿ ಸೇವಿಸಿ 25 ಕೂಲಿ ಕಾರ್ಮಿಕರು ಅಸ್ವಸ್ಥ
ಜಮೀನಿಗೆ ಕಬ್ಬು ಕಟಾವಿಗೆ ಬಂದಿದ್ದ ಕಾರ್ಮಿಕರಿಗೆ ಸಂತೋಷ್ ತಂಗಳು ಬಿರಿಯಾನಿ ನೀಡಿದ್ದರು. ತಂಗಳು ಬಿರಿಯಾನಿ ತಿಂದು ಕಾರ್ಮಿಕರಿಗೆ ವಾಂತಿ-ಭೇದಿ ಉಂಟಾಗಿತ್ತು.
ಚಾಮರಾಜನಗರ: ತಂಗಳು ಬಿರಿಯಾನಿ (biryani) ಸೇವಿಸಿ 25 ಕೂಲಿ ಕಾರ್ಮಿಕರು ಅಸ್ವಸ್ಥರಾದಂತಹ ಘಟನೆ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿಯಲ್ಲಿ ನಡೆದಿದೆ. ಜುಲೈ 18ರಂದು ಅರೇಪಾಳ್ಯದಲ್ಲಿ ಮಗನ ಹುಟ್ಟುಹಬ್ಬದ ಪ್ರಯುಕ್ತ ಸಂತೋಷ್ ಎಂಬುವರು ಚಿಕನ್ ಬಿರಿಯಾನಿ ಮಾಡಿಸಿದ್ದರು. ಬಿರಿಯಾನಿ ಮಾಡಿಸಿ ಸ್ನೇಹಿತರು, ಹಿತೈಷಿಗಳಿಗೆ ಆತಿಥ್ಯ ನೀಡಿದ್ರು. ಮರುದಿನ ಜಮೀನಿಗೆ ಕಬ್ಬು ಕಟಾವಿಗೆ ಬಂದಿದ್ದ ಕಾರ್ಮಿಕರಿಗೆ ಸಂತೋಷ್ ತಂಗಳು ಬಿರಿಯಾನಿ ನೀಡಿದ್ದರು. ತಂಗಳು ಬಿರಿಯಾನಿ ತಿಂದು ಕಾರ್ಮಿಕರಿಗೆ ವಾಂತಿ-ಭೇದಿ ಉಂಟಾಗಿತ್ತು. ಅಸ್ವಸ್ಥಗೊಂಡ 25 ಕೂಲಿ ಕಾರ್ಮಿಕರನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಕೊಳ್ಳೇಗಾಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ವಿಚಾರ ತಿಳಿದು ಆಸ್ಪತ್ರೆಗೆ ಶಾಸಕ ಎನ್.ಮಹೇಶ್ ಧಾವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 25 ಜನರ ಆರೋಗ್ಯ ವಿಚಾರಿಸಿದರು.
ಇದನ್ನೂ ಓದಿ: ‘ಒಳ್ಳೆಯ ಅವಕಾಶ ಸಿಕ್ಕರೆ ಬಾಲಿವುಡ್ಗೆ ಹೋಗ್ತೀನಿ’; ‘ಮಿಸ್ ಇಂಡಿಯಾ’ ಸಿನಿ ಶೆಟ್ಟಿ