ಬೆಂಗಳೂರಿನಲ್ಲಿ ವೆಬ್ ಸೈಟ್ನ ದುರುಪಯೋಗಪಡಿಸಿಕೊಂಡು ಹಣ ಮಾಡುತ್ತಿದ್ದ ಆರೋಪಿಗಳು ಅರೆಸ್ಟ್!
ಮೊದಲೇ ಹಣ ಪಡೆಯುತ್ತಿದ್ದ ಆರೋಪಿಗಳು ತಿಂಗಳು ಕಳೆದರು ವಾಹನ ಡೆಲಿವರಿ ಮಾಡುತ್ತಿರಲಿಲ್ಲ. ಪ್ರಶ್ನೆ ಮಾಡಿದ್ದಕ್ಕೆ ಹೆಚ್ಚಿನ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದರು.
ಬೆಂಗಳೂರು: ವೆಬ್ ಸೈಟ್ (Google Website) ಅನ್ನೇ ಬಂಡವಾಳ ಮಾಡಿಕೊಂಡು ಹಣ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಈಶಾನ್ಯ ವಿಭಾಗ ಪೊಲೀಸರು ಬಂಧಿಸಿದ್ದಾರೆ. ಪರನ್ ಸಿಂಗ್ ಚೌಹಾಣ್ (25), ನರೇಂದ್ರ (32), ಧರ್ಮೇಂದರ್ (21), ಧರ್ಮವೀರ್ (24) ಬಂಧಿತ ಆರೋಪಿಗಳು. ಬಂಧಿತರು ವಾಹನ ಟ್ರಾನ್ಸ್ ಪೋರ್ಟ್ (Transport) ಮಾಡುವ ನೆಪದಲ್ಲಿ ವಂಚನೆ ಮಾಡುತ್ತಿದ್ದರು. ಪ್ರತಿಷ್ಠಿತ ಕೊರಿಯರ್ ಕಂಪನಿಗಳ ಹೆಸರಲ್ಲಿ ಜಾಹಿರಾತು ನೀಡುತ್ತಿದ್ದರು. ಜಾಹಿರಾತಿನಲ್ಲಿ ತಮ್ಮ ಫೋನ್ ನಂಬರ್ ಹಾಕಿಕೊಳ್ಳುತ್ತಿದ್ದರು. ಟ್ರಾನ್ಸ್ ಪೋರ್ಟ್ ಮಾಡುವ ಮೊದಲು ಹಣ ಪಡೆಯುತ್ತಿದ್ದರು.
ಮೊದಲೇ ಹಣ ಪಡೆಯುತ್ತಿದ್ದ ಆರೋಪಿಗಳು ತಿಂಗಳು ಕಳೆದರು ವಾಹನ ಡೆಲಿವರಿ ಮಾಡುತ್ತಿರಲಿಲ್ಲ. ಪ್ರಶ್ನೆ ಮಾಡಿದ್ದಕ್ಕೆ ಹೆಚ್ಚಿನ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದರು. ಇದೇ ರೀತಿ ವಂಚನೆಗೊಳಗಾಗಿದ್ದ ವ್ಯಕ್ತಿ ಈಶಾನ್ಯ ವಿಭಾಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದನ್ನೂ ಓದಿ: High BP: ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿ ಫೈಬರ್ ಭರಿತ ಆಹಾರಗಳು: ಇಲ್ಲಿದೆ ಆಹಾರಗಳ ಪಟ್ಟಿ
ದೂರುದಾರ ಬೆಂಗಳೂರಿನಿಂದ ಹುಬ್ಬಳ್ಳಿಗೆ ಬುಲೆಟ್ ಶಿಫ್ಟ್ ಮಾಡಲು ಮುಂದಾಗಿದ್ದರು. ಮೊದಲು 4 ಸಾವಿರ ರೂ. ಶಿಫ್ಟಿಂಗ್ ಚಾರ್ಜ್ ಪಡೆದಿದ್ದರು. 20 ದಿನಗಳವರೆಗೂ ವಾಹನ ಹುಬ್ಬಳ್ಳಿ ತಲುಪಿರಲಿಲ್ಲ. ಈ ವೇಳೆ ಸಂಪರ್ಕಿಸಿದ ವ್ಯಕ್ತಿಗೆ ಹೆಚ್ಚಿನ ಹಣ ನೀಡಬೇಕೆಂದು ಆರೋಪಿಗಳು ಡಿಮ್ಯಾಂಡ್ ಮಾಡಿದ್ದಾರೆ. ಹೆಚ್ಚಿನ ಹಣ ನೀಡಿದ್ದರೂ ಬೈಕ್ ತಲುಪಿರಲಿಲ್ಲ. ಬಂಧಿತರು ಪ್ರತಿಷ್ಠಿತ ಕಂಪನಿ ಜಾಗಕ್ಕೆ ಬೈಕ್ ಬಿಟ್ಟು ಬಂದಿದ್ದರು. ಬೈಕ್ ಮಾಲೀಕ ಹುಡುಕಿ ಬಂದಾಗ ಎಲ್ಲಾ ಕೃತ್ಯ ಬಯಲಿಗೆ ಬಂದಿದೆ.
ಪೊಲೀಸರೆಂದು ಹೇಳಿಕೊಂಡು ಚಿನ್ನಾಭರಣ ದೋಚಿದ ಖದೀಮರು: ಚಿತ್ರದುರ್ಗ: ಪೊಲೀಸರೆಂದು ಹೇಳಿಕೊಂಡು ಖದೀಮರು ಚಿನ್ನಾಭರಣ ದೋಚಿರುವ ಘಟನೆ ಹೊಳಲ್ಕೆರೆ ತಾಲೂಕಿನ ಟಿ.ನುಲೇನೂರು ಗ್ರಾಮದ ಬಳಿ ನಡೆದಿದೆ. ಕಳ್ಳರು ಬೈಕ್ ಸವಾರ ವಿಶ್ವನಾಥ್ ಬಳಿಯಿದ್ದ ಚಿನ್ನಾಭರಣವನ್ನು ದೋಚಿದ್ದಾರೆ. ಚಿನ್ನಾಭರಣ ರಿಪೇರಿಗೆಂದು ವಿಶ್ವನಾಥ್ ಬೈಕ್ನಲ್ಲಿ ಅನ್ನೇಹಾಳ್ನಿಂದ ಹೊಳಲ್ಕೆರೆಗೆ ತೆರಳುತ್ತಿದ್ದರು. ಟಿ.ನುಲೇನೂರು ಬಳಿ ಪೊಲೀಸರೆಂದು ಹೇಳಿಕೊಂಡು ಬೈಕ್ನ ತಡೆದಿದ್ದಾರೆ. ಖದೀಮರು ಗಾಂಜಾ ಸಾಗಣೆ ಮಾಡುತ್ತಿದ್ದೀರೆಂದು ಪರಿಶೀಲಿಸಿದರು. ಕಳ್ಳರಿದ್ದಾರೆಂದು ಎಚ್ಚರಿಸುವ ನೆಪದಲ್ಲಿ ಚಿನ್ನಾಭರಣ ತೆಗೆದುಕೊಂಡು ಪರಾರಿಯಾಗಿದ್ದಾರೆ. ಇಬ್ಬರು 2.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದು, ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Gold Price Today: ಬೆಂಗಳೂರು ಸೇರಿ ಹಲವೆಡೆ ಚಿನ್ನದ ಬೆಲೆ ಏರಿಕೆ; ಬೆಳ್ಳಿ ದರ 400 ರೂ. ಕುಸಿತ
Published On - 9:33 am, Wed, 20 July 22