ಹಿಜಾಬ್ ಹಲಾಲ್ ಬಳಿಕ ಇದೀಗ ಮದರಸಾಗಳಲ್ಲಿ ಪಠ್ಯ ಬದಲಾವಣೆಯ ಫೈಟ್: ಶಿಕ್ಷಣ ಇಲಾಖೆಗೆ ಬೇಡಿಕೆಯಿಟ್ಟ ಮುಸ್ಲಿಂ ಪೋಷಕರು
Hijab Row - ಶಾಲಾ- ಕಾಲೇಜುಗಳಿಗೆ ಹಿಜಾಬ್ ಧರಿಸುವಂತಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದ್ದರೂ, ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ತೀರ್ಪನ್ನ ಸ್ವೀಕರಿಸುತ್ತಿಲ್ಲ.
ಬೆಂಗಳೂರು: ಹಿಜಾಬ್ ಹಲಾಲ್ ಬಳಿಕ ಇದೀಗ ಮತ್ತೊಂದು ವಿವಾದ ಹುಟ್ಟಿಕೊಂಡಿದ್ದು, ಮದರಸಾಗಳಲ್ಲಿನ ಪಠ್ಯ ಬದಲಾವಣೆಯ ಫೈಟ್ ಶುರುವಾದಂತ್ತಿದೆ. ಮದರಸಾಗಳ ಪಠ್ಯಪರಿಷ್ಕರಣೆಗೆ ಮುಸ್ಲಿಂ ಪೋಷಕರಿಂದ ಶಿಕ್ಷಣ ಇಲಾಖೆಗೆ ಬೇಡಿಕೆ ಇಡಲಾಗಿದೆ. ಮದರಸಾಗಳಲ್ಲಿ ಮಕ್ಕಳಿಗೆ ಇತಿಹಾಸ, ಹಾಗೂ ರಾಷ್ಟ್ರೀಯತೆಯ ಬಗ್ಗೆ ಯಾವುದೇ ಪಾಠ ಬೋಧನೆ ಇಲ್ಲ ಅನ್ನೋ ಆರೋಪ ಮಾಡಲಾಗಿದೆ. ಹೆಚ್ಚಿನ ಮಕ್ಕಳು ಭಾರತೀಯ ಇತಿಹಾಸ, ಸಂಸ್ಕೃತಿ ಹಾಗೂ ರಾಷ್ಟ್ರೀಯತೆ ಬಗ್ಗೆ ಕಲಿಯೋದಿಲ್ಲ. ಹೀಗಾಗಿ ಹೆಚ್ಚಿನ ಮಕ್ಕಳು ಮದರಸಾಗಳಿಗೆ ಬರ್ತಿಲ್ಲ. ಮದರಸಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ ಅಲ್ಲಿಯು ಪಠ್ಯ ಬದಲಾವಣೆಯ ಅವಶ್ಯಕತೆ ಇದೆ. ಸದ್ಯ ನಮ್ಗೂ ಈ ಬಗ್ಗೆ ಸಾಕಷ್ಟು ದೂರಗಳು ಬಂದಿವೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿದ್ದಾರೆ. ಮದರಸದಲ್ಲಿ ಶಿಕ್ಷಣ ಮಕ್ಕಳಿಗೆ ಬೆಳವಣಿಗೆ ಪೂರಕವಾಗಿಲ್ಲ ಎಂದು ಕೆಲ ಪೋಷಕರು ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದಾರೆ.
ಕೆಲವು ರಾಜ್ಯಗಳ ಮದರಸಾಗಳಲ್ಲಿ ಶಿಕ್ಷಣ ವ್ಯವಸ್ಥೆ ಬದಲಾವಣೆ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿದರು. ಎಲ್ಲ ಮಕ್ಕಳನ್ನು ಶಿಕ್ಷಣ ಇಲಾಖೆಯ ಎನ್ರೂಲ್ ಮೆಂಟ್ ವ್ಯಾಪ್ತಿಗೆ ತರಬೇಕು. ಎಲ್ಲ ಮಕ್ಕಳು ಸಮಾಜ, ವಿಜ್ಞಾನ, ಗಣಿತ, ಇತಿಹಾಸ ಕಲಿಯಬೇಕು ಇದು ಕಡ್ಡಾಯ. ಇತ್ತಿಚ್ಚೀಗೆ ನಮ್ಮ ಗಮನಕ್ಕೂ ಕೆಲವು ಅಂಶ ಬಂದಿದೆ. ಉರ್ದು ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ತುಂಬಾ ಕಡಿಮೆಯಾಗುತ್ತಿದೆ. ಈ ಹಿನ್ನಲೆ ಎಲ್ಲಾ ಡಿಡಿಪಿಐಗಳಿಗೂ ಸೂಚನೆ ನೀಡಲಾಗಿದ್ದು, ಶಾಲೆ ಹಾಜರಾತಿ ಕಡಿಮೆಯಾಗಿರುವುದರಿಂದ ವಿಶೇಷ ಗಮನಕ್ಕೆ ಸೂಚನೆ ನೀಡಲಾಗಿದೆ. ಮದರಸಗಳಿಗೆ ಹೋಗುವ ಎಲ್ಲ ವಿದ್ಯಾರ್ಥಿಗಳು ಕಡ್ಡಯವಾಗಿ ಶಾಲೆಗೆ ಬರ್ತಿಲ್ಲ.
ಇವತ್ತಿನ ಸಮಾಜದ ಸ್ಥಿತಿಗೆ ಮದರಸ ಶಿಕ್ಷಣ ಉಪಯೋಗವಿಲ್ಲ. ಮದರಸ ಮಕ್ಕಳ ಕಲಿಕೆ ಪ್ರಚಲಿತವಾಗಿಲ್ಲ ಅನ್ನೋದು ಹಲವರ ಡಿಮ್ಯಾಂಡ್ ಆಗಿದ್ದು, ಪೋಷಕರಿಂದಲೂ ಈ ಬಗ್ಗೆ ದೂರು ಬಂದಿವೆ. ಮದರಸಗಳಿಗೆ ಹೋಗುವ ಮಕ್ಕಳು ನಮ್ಮ ಶಾಲೆಯಲ್ಲಿ ಕಡ್ಡಾಯ ಶಿಕ್ಷಣ ಪಡೆಯಬೇಕು ಎಂದು ಪೋಷಕರು ಹೇಳುತ್ತಿದ್ದಾರೆ.
ಪಿಯು ಕಾಲೇಜು ಸ್ಥಾಪನೆಗೆ ಮುಂದಾದ ಮುಸ್ಲಿಂ ಶಿಕ್ಷಣ ಸಂಸ್ಥೆಗಳು:
ಶಾಲಾ- ಕಾಲೇಜುಗಳಿಗೆ ಹಿಜಾಬ್ (Hijab) ಧರಿಸುವಂತಿಲ್ಲ ಎಂದು ಹೈಕೋರ್ಟ್ (High Court) ತೀರ್ಪು ನೀಡಿದ್ದರೂ, ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ತೀರ್ಪನ್ನ ಸ್ವೀಕರಿಸುತ್ತಿಲ್ಲ. ಹೈಕೋರ್ಟ್ ತೀರ್ಪಿನ ಬಳಿಕವೂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜುಗಳಿಗೆ ಆಗಮಿಸುತ್ತಿದ್ದರು. ಆದರೆ ಕಾಲೇಜು ಆಡಳಿತ ಮಂಡಳಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ತರಗತಿಗೆ ಹಾಜರಾಗಲು ಅವಕಾಶ ನೀಡುತ್ತಿರಲಿಲ್ಲ. ಹಿಜಾಬ್ ವಿವಾದದ ಬೆನ್ನಲ್ಲೇ ಜಿಲ್ಲೆಯಲ್ಲಿ ಮುಸ್ಲಿಮರು ಪಿಯು ಕಾಲೇಜು ಸ್ಥಾಪನೆಗೆ ಆಸಕ್ತಿ ತೋರಿದ್ದಾರೆ. ದಕ್ಷಿಣ ಕನ್ನಡದಲ್ಲಿ 13 ಮುಸ್ಲಿಂ ಆಡಳಿತಗಳಿಂದ ಪಿಯು ಕಾಲೇಜು ಅನುಮತಿ ಕೋರಿ ಅರ್ಜಿ ಸಲ್ಲಿಸಿವೆ.
ಈ ಬಾರಿ ಜಿಲ್ಲೆಯಲ್ಲಿ ಕಾಲೇಜು ಸ್ಥಾಪಿಸಲು ಅನುಮತಿ ಕೋರಿ ಪಿಯು ಬೋರ್ಡ್ಗೆ ಸುಮಾರು 14 ಅರ್ಜಿಗಳು ಸಲ್ಲಿಕೆಯಾಗಿವೆ. 14 ಅರ್ಜಿಗಳ ಪೈಕಿ 13 ಅರ್ಜಿಗಳು ಮುಸ್ಲಿಂ ಶಿಕ್ಷಣ ಸಂಸ್ಥೆಗಳದ್ದು. 14 ಅರ್ಜಿಗಳಲ್ಲಿ ಎರಡು ಅರ್ಜಿಗಳಿಗೆ ಅನುಮತಿ ನೀಡಲಾಗಿದೆ. ಇದರಲ್ಲಿ ಒಂದು ಗುರುಪುರದ ಮುಸ್ಲಿಂ ಶಿಕ್ಷಣ ಸಂಸ್ಥೆಗೆ ಮತ್ತು ಇನ್ನೊಂದು ಸುಬ್ರಹ್ಮಣ್ಯದ ಮುಸ್ಲಿಮೇತರ ಶಿಕ್ಷಣ ಸಂಸ್ಥೆಗೆ ಅನುಮತಿ ದೊರಕಿದೆ. ಉಳಿದ 12 ಮುಸ್ಲಿಂ ಆಡಳಿತದ ಕಾಲೇಜು ಸ್ಥಾಪನೆ ಅನುಮತಿ ಅರ್ಜಿಗಳು ಬಾಕಿ ಉಳಿದಿವೆ.
Published On - 11:06 am, Wed, 20 July 22