ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಈ ವೀಡಿಯೊದಲ್ಲಿ ಡಿಸೆಂಬರ್ 26, 2024 ರ ಗುರುವಾರದ ದಿನಭವಿಷ್ಯವನ್ನು ವಿವರಿಸಲಾಗಿದೆ. ಮಾರ್ಗಶಿರ ಮಾಸದ ಈ ಗುರುವಾರ ಮಹಾಲಕ್ಷ್ಮೀ ವ್ರತ ಮತ್ತು ಸಫಲ ಏಕಾದಶಿ ಆಚರಣೆಗೆ ವಿಶೇಷ ದಿನವಾಗಿದೆ. ದ್ವಾದಶ ರಾಶಿಗಳ ಫಲಗಳನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.
ಇಂದು 26-12-2024 ಗುರುವಾರ, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಮಾರ್ಗಶಿರ ಮಾಸ, ಹೇಮಂತ ಋತು, ಕೃಷ್ಣಪಕ್ಷ, ಏಕಾದಶಿ, ಸ್ವಾತಿ ನಕ್ಷತ್ರ, ಇರತಕ್ಕಂತಹ ಈ ದಿನದ ರಾಹುಕಾಲ 1.46 ನಿಮಿಷದಿಂದ 3.11 ನಿಮಿಷದ ತನಕ ರಾಹುಕಾಲ ಇರುತ್ತದೆ. ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ ಬೆಳಗಿನ ಜಾವ 12.20 ನಿಮಿಷದಿಂದ 1.45 ನಿಮಿಷದ ತನಕ ಇರಲಿದೆ. ಈ ಮಾರ್ಗಶಿರ ಮಾಸದ ಪ್ರತಿ ಗುರುವಾರವು ಅಮ್ಮನವರಿಗೆ ತುಂಬಾ ವಿಶೇಷವಾದ ದಿನವಾಗಿದೆ.
ಇಂದು ಮಹಾಲಕ್ಷ್ಮಿಯ ವ್ರತ ಆಚರಣೆ ಮಾಡಿಕೊಳ್ಳಲು ಪ್ರಶಸ್ತ ದಿನವಾಗಿದ್ದು, ಜೊತೆಗೆ ಏಕಾದಶಿ. ಈ ಏಕಾದಶಿಯನ್ನು ಸಫಲ ಏಕಾದಶಿ ಎಂದು ಕರೆಯುತ್ತೇವೆ. ಏಕಾದಶಿಯ ಉಪವಾಸ ಭಗವಂತನ ಹತ್ತಿರ ನಮ್ಮನ್ನ ಕೊಂಡೊಯ್ಯುತ್ತದೆ. ಸಿದ್ದಲಿಂಗಪುರದಲ್ಲಿ ರಥೋತ್ಸವ ನಡೆಯುವ ದಿನ ಕೂಡ ಇದಾಗಿದೆ. ಇಂದು ರವಿ ಧನುಸ್ಸು ರಾಶಿಯಲ್ಲಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ ಮಾಡ್ತಾ ಇದ್ದಾರೆ. ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ವಿವರಿಸಿದ್ದಾರೆ, ವಿಡಿಯೋ ನೋಡಿ.