‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
Max movie: ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಬಿಡುಗಡೆ ಆಗಿದೆ. ‘ವಿಕ್ರಾಂತ್ ರೋಣ’ ಸಿನಿಮಾ ಬಿಡುಗಡೆ ಆಗಿ ಎರಡು ವರ್ಷಕ್ಕೂ ಹೆಚ್ಚು ಸಮಯದ ಬಳಿಕ ಇದೀಗ ‘ಮ್ಯಾಕ್ಸ್’ ತೆರೆಗೆ ಬಂದಿದ್ದು, ಸಿನಿಮಾವನ್ನು ಪ್ರೇಕ್ಷಕರು ಕೊಂಡಾಡುತ್ತಿದ್ದಾರೆ. ಇದೀಗ ಸುದೀಪ್ ಅಭಿಮಾನಿಯೊಬ್ಬ ತನ್ನದೇ ರೀತಿಯಲ್ಲಿ ಸಿನಿಮಾದ ವಿಮರ್ಶೆ ನೀಡಿದ್ದಾನೆ.
ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಇಂದು (ಡಿಸೆಂಬರ್ 25) ಬಿಡುಗಡೆ ಆಗಿದೆ. ಸಿನಿಮಾ ನೋಡಿದವರು ಬಹಳ ಒಳ್ಳೆಯ ವಿಮರ್ಶೆ ನೀಡುತ್ತಿದ್ದಾರೆ. ಮಾಮೂಲು ಹಾದಿ ಹಿಡಿಯದೆ ಭಿನ್ನ ರೀತಿಯ ಸಿನಿಮಾ ಇದಾಗಿದ್ದು, ಸುದೀಪ್ ಅಭಿಮಾನಿಗಳು ಮಾತ್ರವೇ ಅಲ್ಲದೆ ಎಲ್ಲ ನಟರ ಅಭಿಮಾನಿಗಳು, ಸಿನಿಮಾ ಪ್ರೇಮಿಗಳು ಇಷ್ಟಪಡುವ ಸಿನಿಮಾ ಇದಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಮೊದಲ ದಿನ ಸಿನಿಮಾ ನೋಡಿದ ಸುದೀಪ್ ಅಭಿಮಾನಿಯೊಬ್ಬ ಸಿನಿಮಾವನ್ನು ಬೊಂಬಾಟ್ ಎಂದಿದ್ದು, ‘ವಿಕ್ರಾಂತ್ ರೋಣ’ ಸಿನಿಮಾ ನೋಡಿ ಕುಡಿದ ನಶೆ ಇಳಿದು ಹೋಗಿದೆ ಎಂದು ಒಬ್ಬ ಹೇಳಿದ್ದ, ಈಗ ‘ಮ್ಯಾಕ್ಸ್’ ಸಿನಿಮಾ ನೋಡಿದರೆ ನಾಲ್ಕು ಕ್ವಾಟರ್ ಹೊಡೆದ ಕಿಕ್ ಬರುತ್ತದೆ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Dec 25, 2024 05:24 PM
Latest Videos