ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ಮಗನನ್ನ ಕಳೆದುಕೊಂಡ ತಾಯಿಯ ಆಕ್ರಂದನ
ಉಡುಪಿಯ ಯೋಧ ಅನೂಪ್ ಪೂಜಾರಿ ಪೂಂಚ್ನಲ್ಲಿ ಸೇನಾ ವಾಹನ ದುರಂತದಲ್ಲಿ ಹುತಾತ್ಮರಾಗಿದ್ದಾರೆ. ಅವರ ತಾಯಿ ಆಘಾತಕ್ಕೀಡಾಗಿದ್ದಾರೆ. ತಮ್ಮ ಏಕೈಕ ಗಂಡು ಮಗನನ್ನು ಕಳೆದುಕೊಂಡಿರುವ ಅವರ ದುಃಖ ಅಪಾರ. ಅನೂಪ್ ದೇಶ ಸೇವೆ ಮಾಡುತ್ತಿದ್ದ ಒಳ್ಳೆಯ ಮಗನಾಗಿದ್ದ ಎಂದು ತಾಯಿ ಹೇಳಿದ್ದಾರೆ. ಈ ದುರಂತದಿಂದಾಗಿ ಕುಟುಂಬ ದುಃಖದಲ್ಲಿ ಮುಳುಗಿದೆ.
ಉಡುಪಿ, ಡಿಸೆಂಬರ್ 25: ಜಮ್ಮು ಮತ್ತು ಕಾಶ್ಮೀರದ ಪೂಂಚ್ನಲ್ಲಿ ಸೇನಾ ವಾಹನವು ಆಳವಾದ ಕಂದಕಕ್ಕೆ ಉರುಳಿದ್ದ ಹಿನ್ನಲೆ ಕನ್ನಡಿಗ ಯೋಧ (soldier) ಅನೂಪ್ ಪೂಜಾರಿ ಹುತಾತ್ಮರಾಗಿದ್ದಾರೆ. ಇತ್ತ ಅನೂಪ್ ತಾಯಿ ಚಂದು ಪೂಜಾರಿ ಕಣ್ಣೀರು ಹಾಕಿದ್ದಾರೆ. ದೇವರು ನನಗೆ ಮೋಸ ಮಾಡಿದ. ಇದ್ದ ಒಬ್ಬ ಗಂಡು ಮಗನನ್ನು ನಾನು ಕಳೆದುಕೊಂಡೆ. ಡಿಸೆಂಬರ್ 20ಕ್ಕೆ ನನ್ನ ಮಗ ಮನೆಯಿಂದ ಹೊರಟಿದ್ದ. ದೇವರು ನನ್ನ ಹೊಟ್ಟೆಗೆ ಕಲ್ಲು, ಮಣ್ಣು ತುಂಬಿಸಿ ಬಿಟ್ಟ. ನನ್ನ ಮೊಮ್ಮಗಳು ನನ್ನ ಮಗನ ಹಾಗೆ ಇದ್ದಾಳೆ. ಇಬ್ಬರು ಅಕ್ಕಂದಿರಿಗೆ ಮದುವೆ ಮಾಡಿಸಿದ. ಜಾಗ ಖರೀದಿ ಮಾಡಿದ, ಮದುವೆಯಾದ ಮಗುವಾಯಿತು. ನನ್ನ ಮಗುವನ್ನು ದೇವರು ಕಸಿದುಕೊಂಡ ನನಗೆ ಮಗುವನ್ನು ಯಾರು ತಂದುಕೊಡುತ್ತಾರೆ ಎಂದು ತಾಯಿ ಕಣ್ಣೀರು ಹಾಕಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos

ನೇಪಾಳಕ್ಕೆ ವಾಪಸ್ ಹೊರಟ ವಿದ್ಯಾರ್ಥಿಗಳಿಗೆ ಆಹಾರ ಕೊಟ್ಟು ನೆರವಾದ ಎಬಿವಿಪಿ

ಕಲಬುರಗಿ: ಕಾರ್ಮಿಕನ ಮೃತದೇಹವನ್ನು ಪ್ರಾಣಿ ತರಹ ಎಳೆದೊಯ್ದ ಸಿಮೆಂಟ್ ಕಂಪನಿ

Daily Devotional: ಸ್ವಾತಿ ನಕ್ಷತ್ರ ಮಹತ್ವ ಹಾಗೂ ಫಲ ತಿಳಿಯಿರಿ

Daily horoscope: ಬುಧವಾರ ಯಾವ ರಾಶಿಯವರಿಗೆ ಶುಭ, ಅಶುಭ ತಿಳಿಯಿರಿ
