ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ

ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ

Vinayak Hanamant Gurav
| Updated By: ಗಂಗಾಧರ​ ಬ. ಸಾಬೋಜಿ

Updated on: Dec 25, 2024 | 10:53 PM

ಕ್ರಿಸ್​ಮಸ್ ಹಬ್ಬ ಹಿನ್ನೆಲೆ ಬೆಂಗಳೂರಿನಲ್ಲಿ ಭಾರೀ ಟ್ರಾಫಿಕ್ ಜಾಮ್ ಆಗಿದೆ. ಮಹಾಲಕ್ಷ್ಮೀ ಲೇಔಟ್, ಸ್ಯಾಂಡಲ್ ಸೋಪ್ ಫ್ಯಾಕ್ಟರಿ, ರಾಜಕುಮಾರ್ ರಸ್ತೆ ಮತ್ತು ಓರಿಯನ್ ಮಾಲ್ ಬಳಿ ದಟ್ಟಣೆ ಹೆಚ್ಚಾಗಿದೆ. ವಾಹನ ಸವಾರರು ತೀವ್ರ ಪರದಾಟ ಎದುರಿಸಿದ್ದಾರೆ. ಮೆಜೆಸ್ಟಿಕ್, ಸಿಟಿ ಮಾರ್ಕೆಟ್, ಮಂತ್ರಿ ಮಾಲ್ ಜಂಕ್ಷನ್ ಮುಂತಾದ ಪ್ರದೇಶಗಳಲ್ಲಿ ವಾಹನ ಸಂಚಾರ ನಿಧಾನವಾಗಿದೆ.

ಬೆಂಗಳೂರು, ಡಿಸೆಂಬರ್​ 25: ಕ್ರಿಸ್​ಮಸ್ ಹಬ್ಬ ಹಿನ್ನೆಲೆ ಬೆಂಗಳೂರು ನಗರದಲ್ಲಿ ಟ್ರಾಫಿಕ್​​ಜಾಮ್ (Traffic Jam) ಉಂಟಾಗಿದೆ. ಮಹಾಲಕ್ಷ್ಮೀಲೇಔಟ್ ಕಡೆಯಿಂದ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಮತ್ತು ರಾಜ್​ಕುಮಾರ್ ರಸ್ತೆಯ ಓರಿಯನ್ ಮಾಲ್ ಬಳಿ ಟ್ರಾಫಿಕ್​ಜಾಮ್ ಉಂಟಾಗಿದ್ದು, ವಾಹನ ಸವಾರರು ತೀವ್ರ ಪರದಾಡಿದ್ದಾರೆ. ಇನ್ನು ಮೆಜೆಸ್ಟಿಕ್, ಸಿ.ಟಿ.ಮಾರ್ಕೆಟ್, ಮಂತ್ರಿ ಮಾಲ್ ಜಂಕ್ಷನ್, ಚಾಲುಕ್ಯ ಸರ್ಕಲ್​​ ಸೇರಿ ಹಲವೆಡೆ ನಿಧಾನಗತಿಯ ವಾಹನ ಸಂಚಾರವಿದೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.