ಸರ್ಕಾರಿ ಕ್ವಾಟ್ರಸ್​ನ ಸಂಪ್​​ಗೆ ಬಿದ್ದು ಮಗು ಸಾವು

ಬೆಂಗಳೂರಿನ ಎಲ್.ಆರ್‌. ನಗರ ಸಮೀಪ ಸರ್ಕಾರಿ ಕ್ವಾಟ್ರಸ್​​ನ ಸಂಪ್​​ಗೆ ಬಿದ್ದು ಮಗು ಸಾವನ್ನಪ್ಪಿದೆ.

ಸರ್ಕಾರಿ ಕ್ವಾಟ್ರಸ್​ನ ಸಂಪ್​​ಗೆ ಬಿದ್ದು ಮಗು ಸಾವು
ಮೃತ ಮಗು ಗುಣ
Follow us
TV9 Web
| Updated By: ವಿವೇಕ ಬಿರಾದಾರ

Updated on:Jul 20, 2022 | 4:51 PM

ಯಾಕೋ ಇವತ್ತು ದಿನ ಸರಿಯಿಲ್ಲ ಅನ್ನಿಸುತ್ತೆ. ಹಾಲುಗಲ್ಲದ ಮಕ್ಕಳ ಸಾವು ಸಂಭವಿಸಿ, ಮನಸು ಮಗುಚಿಬಿದ್ದಂತಾಗಿದೆ. ಇಂದು ಬೆಳಗಿನ ಜಾವವೇ ಬೆಳಗಾವಿಯ ಆಸ್ಪತ್ರೆಯಲ್ಲಿ ಹೆರಿಗೆ ವೇಳೆ ಮಗು ಮೃತಪಟ್ಟಿದೆ. ಇನ್ನು ಉಡುಪಿಯಲ್ಲಿ ಚಾಕೊಲೇಟ್ ತಿಂದ ಮಗು ಸಾವಿಗೀಡಾಗಿದೆ. ಈ ಮಧ್ಯೆ ಇಲ್ಲೇ ರಾಜಧಾನಿಯಲ್ಲಿ ಸಂಪ್​ಗೆ ಬಿದ್ದು ಮಗು ಸಾವನ್ನಪ್ಪಿದೆ.  ಬೆಂಗಳೂರಿನ ಎಲ್.ಆರ್‌. ನಗರ ಸಮೀಪ ಸರ್ಕಾರಿ ಕ್ವಾಟ್ರಸ್​​ನ (Government Quarters) ಸಂಪ್​​ಗೆ (Sump) ಬಿದ್ದು ಮಗು ಸಾವನ್ನಪ್ಪಿದೆ. ಗುಣ ಎಂಬ 4 ವರ್ಷದ ಮಗು ಸಾವನ್ನಪ್ಪಿದೆ.

ಎಲ್.ಆರ್‌. ನಗರ ಸಮೀಪದ ಸ್ಲಂ ಬೋರ್ಡ್ ಕ್ವಾಟ್ರಸ್​ನ C4 ಬ್ಲಾಕ್​​ನಲ್ಲಿ ತಮಿಳುನಾಡು ಮೂಲದ ಕುಟುಂಬ ವಾಸವಿತ್ತು.  ಮೃತ ಮಗುವಿನ ತಂದೆ ವಿನೋದ್, ತಾಯಿ ನಿರ್ಮಲಾ ಮತ್ತು ಇಬ್ಬರು ಮಕ್ಕಳು ಸೇರಿ ನಾಲ್ಕು ಜನ ವಾಸವಿದ್ದರು. ಮೊದಲ ಮಗು ಗುಣ, ಎರಡನೇ ಮಗು ಓವಿಯಾಗೆ ಒಂದೂವರೆ ವರ್ಷವಾಗಿದೆ.

ನಿನ್ನೆ (ಜುಲೈ 19) ರಾತ್ರಿ 8:30ರ ಸುಮಾರಿಗೆ ಮಗು ಆಟವಾಡುತ್ತಿದ್ದ ವೇಳೆ ಸಂಪ್​​ಗೆ ಬಿದ್ದು ಸಾವನ್ನಪ್ಪಿದೆ. ಘಟನೆ ಬೆಳಗ್ಗೆ ಸಂಪ್​​ನಿಂದ ನೀರು ಸೇದುವಾಗ ಬೆಳಕಿಗೆ ಬಂದಿದೆ. ಪೋಷಕರುಜುಲೈ 1 ರಂದು ಮಗುವನ್ನು ಅಂಗನವಾಡಿಗೆ ಸೇರಿಸಿದ್ದರು. ಸದ್ಯ ಸಂಪಿನೊಳಗಿದ್ದ ಮಗುವನ್ನ ಮಧ್ಯಾಹ್ನ ಹೊರತೆಗೆಯಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪೋಷಕರು ಮಗುವಿನ ಮೃತದೇಹವನ್ನ ಸ್ವಂತ ಊರಿಗೆ ಕೊಂಡೊಯ್ದಿದ್ದಾರೆ.

ಉಡುಪಿ: ಚಾಕೊಲೇಟ್‌ ತಿನ್ನುವಾಗ ಉಸಿರುಗಟ್ಟಿ 6 ವರ್ಷದ ಬಾಲಕಿ ಸಾವು

ಉಡುಪಿ: ಚಾಕೊಲೇಟ್‌ ತಿನ್ನುವಾಗ ಉಸಿರುಗಟ್ಟಿ 6 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಬವಳಾಡಿ ಗ್ರಾಮದಲ್ಲಿ ನಡೆದಿದೆ. ಸಮನ್ವಿ(6) ಮೃತ ಬಾಲಕಿ. ಸಮನ್ವಿ ಉಪ್ಪುಂದದ ಆಂಗ್ಲ ಮಾಧ್ಯಮ ಶಾಲೆಯೊಂದರ ವಿದ್ಯಾರ್ಥಿನಿಯಾಗಿದ್ದು, ಶಾಲಾ ಬಸ್‌ಗೆ ಕಾಯುತ್ತಿದ್ದಾಗ ಚಾಕೊಲೇಟ್‌ ತಿಂದಿದ್ದಾಳೆ. ಈ ವೇಳೆ ಬಾಲಕಿ ಚಾಕಲೇಟ್ ನುಂಗಿ ಉಸಿರುಗಟ್ಟಿ ಮೃತಪಟ್ಟಿದ್ದಾಳೆ. ಬೈಂದೂರು ಪೊಲೀಸ್‌ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಸಮನ್ವಿ  ಶಾಲೆಗೆ ಹೋಗಲ್ಲ ಎಂದು ಹಠ ಮಾಡುತ್ತಿದ್ದಳು. ಹೀಗಾಗಿ ಪೋಷಕರು ಚಾಕಲೇಟ್ ಕೊಟ್ಟು ಶಾಲೆಗೆ ಹೋಗಲು ಒಪ್ಪಿಸಿದ್ದಾರೆ. ಬಾಲಕಿ ಚಾಕಲೇಟ್ ಬಾಯಲಿಟ್ಟುಕೊಂಡು ತಾಯಿ ಕೈಹಿಡಿದು ಹೋಗಿ, ಶಾಲಾ ಬಸ್ ಹತ್ತಿಸುತ್ತಿದ್ದಂತೆ ಬಾಲಕಿ ಕುಸಿದು ಬಿದ್ದಿದ್ದಾಳೆ. ಬಾಲಕಿ ಬೀಳುತ್ತಿದ್ದಂತೆ ಬಾಯಿಂದ ಚಾಕಲೇಟ್ ಹೊರಗೆ ಬಿದ್ದಿದೆ. ನಂತರ ಆಸ್ಪತ್ರೆ ಸಾಗಿಸುವಷ್ಟರಲ್ಲಿ ಬಾಲಕಿ ಮೃತಪಟ್ಟಿದ್ದಾಳೆ. ಬಾಲಕಿ ಮೃತದೇಹ ಮಣಿಪಾಲ ಶವಾಗಾರಕ್ಕೆ ರವಾನೆಯಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕವೇ ಸಾವಿನ ನಿಖರತೆಯನ್ನು ವೈದ್ಯರು ಹೇಳಲಿದ್ದಾರೆ.

Published On - 4:43 pm, Wed, 20 July 22

‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ