AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Siddhanth Kapoor: ಬೆಂಗಳೂರಿನಲ್ಲಿ ಡ್ರಗ್ಸ್​ ಪಾರ್ಟಿ ಪ್ರಕರಣ; ನಟಿ ಶ್ರದ್ಧಾ ಕಪೂರ್​ ಸೋದರ ಸಿದ್ಧಾಂತ್​ಗೆ ನೋಟಿಸ್ ಸಾಧ್ಯತೆ

Siddhanth Kapoor Drugs Case: ಖಾಸಗಿ ಹೋಟೆಲ್​ನಲ್ಲಿ ಜೂನ್​ 12ರಂದು ನಡೆದ ಪಾರ್ಟಿಯಲ್ಲಿ ಸಿದ್ಧಾಂತ್​ ಕಪೂರ್​ ಡ್ರಗ್ಸ್​ ಸೇವಿಸಿದ್ದರು ಎಂಬ ಆರೋಪ ಇದೆ. ಈ ಸಂಬಂಧ ತನಿಖೆ ಚುರುಕಾಗಿದೆ.

Siddhanth Kapoor: ಬೆಂಗಳೂರಿನಲ್ಲಿ ಡ್ರಗ್ಸ್​ ಪಾರ್ಟಿ ಪ್ರಕರಣ; ನಟಿ ಶ್ರದ್ಧಾ ಕಪೂರ್​ ಸೋದರ ಸಿದ್ಧಾಂತ್​ಗೆ ನೋಟಿಸ್ ಸಾಧ್ಯತೆ
ಸಿದ್ಧಾಂತ್ ಕಪೂರ್
TV9 Web
| Edited By: |

Updated on:Jul 20, 2022 | 9:01 AM

Share

ಚಿತ್ರರಂಗಕ್ಕೂ ಡ್ರಗ್ಸ್​ ಜಾಲಕ್ಕೂ ಎಲ್ಲಿಲ್ಲದ ನಂಟು. ಮಾದಕ ವಸ್ತು ಸೇವನೆ ಮಾಡಿ ಅನೇಕ ಸೆಲೆಬ್ರಿಟಿಗಳು ಸಂಕಷ್ಟಕ್ಕೆ ಸಿಲುಕಿದ ಉದಾಹರಣೆ ಇದೆ. ಬಾಲಿವುಡ್​ ನಟಿ ಶ್ರದ್ಧಾ ಕಪೂರ್​ (Shraddha Kapoor) ಅವರ ಸಹೋದರ ಸಿದ್ಧಾಂತ್ ಕಪೂರ್​ ಅವರ ಕೊರಳಿಗೂ ಈ ಕಳಂಕ ಸುತ್ತಿಕೊಂಡಿದೆ. ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಡ್ರಗ್ಸ್​ ಪಾರ್ಟಿ (Drugs Party) ಮಾಡಿದ ಆರೋಪ ಅವರ ಮೇಲಿದೆ. ಈ ಪ್ರಕರಣದಲ್ಲಿ ಅವರಿಗೆ ಇನ್ನಷ್ಟು ಸಂಕಷ್ಟ ಹೆಚ್ಚಬಹುದು. ಇಂದು (ಜುಲೈ 20) ಸಿದ್ಧಾಂತ್​ ಕಪೂರ್​​ಗೆ ಪೊಲೀಸರು ನೋಟಿಸ್​ ನೀಡುವ ಸಾಧ್ಯತೆ ಇದೆ. ಒಂದು ವಾರದಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಬಹುದು ಎನ್ನಲಾಗುತ್ತಿದೆ. ಮೆಡಿಕಲ್ ಟೆಸ್ಟ್​ನಲ್ಲಿ ಸಿದ್ಧಾಂತ್ ಕಪೂರ್ (Siddhanth Kapoor)​ ಡ್ರಗ್ಸ್ ಸೇವಿಸಿದ್ದು ಸಾಬೀತಾಗಿತ್ತು. ‘ಯಾರೋ ನೀರಿನಲ್ಲಿ ಬೆರೆಸಿ ಕೊಟ್ಟಿರಬಹುದು’ ಎಂದು ಅವರು ಜಾರಿಕೊಂಡಿದ್ದರು. ಈ ಕುರಿತು ಹಲಸೂರು ಪೊಲೀಸರು ವಿಚಾರಣೆ ನಡೆಸಲಿದ್ದಾರೆ.

ಸಿದ್ಧಾಂತ್​ ಕಪೂರ್​ ಅವರು ಬೆಂಗಳೂರಿನಲ್ಲಿ ಹಲವು ಸ್ನೇಹಿತರನ್ನು ಹೊಂದಿ​ದ್ದಾರೆ. ಇಲ್ಲಿ ನಡೆಯುವ ಐಷಾರಾಮಿ ಪಾರ್ಟಿಗಳಲ್ಲಿ ಅವರು ಅನೇಕ ಬಾರಿ ಡಿಜೆ ಆಗಿ ಕೆಲಸ ಮಾಡಿದ್ದರು. ಹಾಗಾಗಿ ಹಲವು ಸಲ ಅವರು ಬೆಂಗಳೂರಿಗೆ ಬಂದಿದ್ದರು. ಜೂನ್​ 12ರಂದು ಕೂಡ ಇದೇ ರೀತಿ ಖಾಸಗಿ ಹೋಟೆಲ್​ನಲ್ಲಿ ಪಾರ್ಟಿ ನಡೆಯುತ್ತಿತ್ತು. ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದ ಪೊಲೀಸರು ಅನೇಕರನ್ನು ಬಂಧಿಸಿದ್ದರು.

ಸಿದ್ಧಾಂತ್​ ಕಪೂರ್ ಅವರ ತಂಗಿ ಶ್ರದ್ಧಾ ಕಪೂರ್ ಅವರು ಬಾಲಿವುಡ್​ನಲ್ಲಿ ಸ್ಟಾರ್​ ನಟಿಯಾಗಿ ಮಿಂಚುತ್ತಿದ್ದಾರೆ. ಈ ಹಿಂದೆ ಅವರು ಕೂಡ ಎನ್​ಸಿಬಿ ಕಚೇರಿಯ ಮೆಟ್ಟಿಲು ಹತ್ತಿದ್ದರು. ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ತನಿಖೆಯ ವೇಳೆ ಬಾಲಿವುಡ್​ ಡ್ರಗ್ಸ್​ ಕೇಸ್​ ಪುರಾಣ ಬಯಲಾಗಿತ್ತು. ಆ ಸಂಬಂಧ ಶ್ರದ್ಧಾ ಕಪೂರ್​ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ತಮ್ಮ ಮೇಲಿನ ಆರೋಪಗಳೆಲ್ಲವೂ ಸುಳ್ಳು ಎಂದು ಅವರು ಹೇಳಿದ್ದರು. ಈಗ ಅವರ ಸಹೋದರ ಸಿದ್ಧಾಂತ್​ ಕಪೂರ್​ ಡ್ರಗ್ಸ್​ ಕೇಸ್​ನಲ್ಲಿ ಸಿಲುಕಿದ್ದಾರೆ.

ಇದನ್ನೂ ಓದಿ
Image
ತೆಲುಗು ಚಿತ್ರರಂಗದ ಡ್ರಗ್ಸ್​ ಕೇಸ್​ಗೆ ಸಿಕ್ತು ಟ್ವಿಸ್ಟ್​; ಸ್ಟಾರ್ ನಟ-ನಟಿಯರಿಗೆ ಮತ್ತೆ ಸಂಕಷ್ಟ ಶುರು
Image
ಡ್ರಗ್ಸ್​ ಕೇಸ್​ನಲ್ಲಿ ಸಿಕ್ಕಿಬಿದ್ದ ಮಗನ ಜತೆ ಹೆಮ್ಮೆಯಿಂದ ಪೋಸ್​ ಕೊಟ್ಟ ತಂದೆ; ನಗೆಪಾಟಲಿನ ವಿಡಿಯೋ ವೈರಲ್​
Image
ವಿದೇಶಿ ಮಾಧ್ಯಮಗಳಿಂದ ಬಿಗ್​ ಪ್ಲ್ಯಾನ್​: ಮಗನ ಡ್ರಗ್ಸ್​ ಕೇಸ್​ ಹಿಂದಿನ ರಹಸ್ಯ ಬಿಚ್ಚಿಡ್ತಾರಾ ಶಾರುಖ್​?
Image
ಆರ್ಯನ್​ ಖಾನ್​ ಡ್ರಗ್ಸ್​ ಕೇಸ್​ನಲ್ಲಿ ಸಿಕ್ಕಿಬಿದ್ದಾಗ ಸೆಲ್ಫಿ ತೆಗೆದುಕೊಂಡು ಅಭಿಮಾನ ಮೆರೆದ ಈ ವ್ಯಕ್ತಿ ಯಾರು?

ಸಿದ್ಧಾಂತ್​ ಕಪೂರ್​ ಹಿನ್ನೆಲೆ:

2006ರಲ್ಲಿ ಬಂದ ‘ಭಾಗಂ ಭಾಗ್​’ ಚಿತ್ರಕ್ಕೆ ಸಿದ್ಧಾಂತ್​ ಕಪೂರ್ ಸಹಾಯಕ ನಿರ್ದೇಶಕನಾಗಿದ್ದರು. ‘ಚುಪ್​ ಚುಪ್​ಕೇ’, ‘ಭೂಲ್​ ಭುಲಯ್ಯ’, ‘ಡೋಲ್​’ ಮುಂತಾದ ಸಿನಿಮಾಗಳಿಗೂ ಅವರು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದರು. ನಟನಾಗಿಯೂ ಸಿದ್ಧಾಂತ್​ ಕಪೂರ್​ ಅವರು ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ದೊಡ್ಡ ಮಟ್ಟದಲ್ಲಿ ಅವರಿಗೆ ಜನಪ್ರಿಯತೆ ಸಿಕ್ಕಿಲ್ಲ. ‘ಹೆಲೋ ಚಾರ್ಲಿ’, ‘ಅಗ್ಲಿ’, ‘ಜಝ್ಬಾ’, ‘ಹಸೀನಾ ಪಾರ್ಕರ್​’ ಸೇರಿ ಹಲವು ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ವೆಬ್​ ಸಿರೀಸ್​ ಹಾಗೂ ಮ್ಯೂಸಿಕ್​ ವಿಡಿಯೋದಲ್ಲೂ ಅವರು ಕಾಣಿಸಿಕೊಂಡಿದ್ದಾರೆ.

Published On - 9:01 am, Wed, 20 July 22

ಮಾಜಿ ಸಚಿವ ಬಿ. ನಾಗೇಂದ್ರ ಆಪ್ತನ ಮನೆ ಮೇಲೆ ಸಿಬಿಐ ದಾಳಿ
ಮಾಜಿ ಸಚಿವ ಬಿ. ನಾಗೇಂದ್ರ ಆಪ್ತನ ಮನೆ ಮೇಲೆ ಸಿಬಿಐ ದಾಳಿ
ಹೊಸ ವರ್ಷಾಚರಣೆ ವೇಳೆ ಎಣ್ಣೆ ಮತ್ತಲ್ಲಿರೋರನ್ನು ಪೊಲೀಸರೇ ಮನೆಗೆ ಬಿಡ್ತಾರಾ?
ಹೊಸ ವರ್ಷಾಚರಣೆ ವೇಳೆ ಎಣ್ಣೆ ಮತ್ತಲ್ಲಿರೋರನ್ನು ಪೊಲೀಸರೇ ಮನೆಗೆ ಬಿಡ್ತಾರಾ?
ಮಹಿಳಾ ಸುರಕ್ಷತೆಗಾಗಿ ಬೆಂಗಳೂರು ಪೊಲೀಸರಿಂದ 50 ಕಡೆ ಮಹಿಳಾ ಸಹಾಯ ಕೇಂದ್ರ
ಮಹಿಳಾ ಸುರಕ್ಷತೆಗಾಗಿ ಬೆಂಗಳೂರು ಪೊಲೀಸರಿಂದ 50 ಕಡೆ ಮಹಿಳಾ ಸಹಾಯ ಕೇಂದ್ರ
ಸುದೀಪ್ ಬಳಿಕ ಪೈರಸಿ ವಿರುದ್ಧ ಧ್ವನಿ ಎತ್ತಿದ ಜಗ್ಗೇಶ್; ಕಾರಣ ಏನು?
ಸುದೀಪ್ ಬಳಿಕ ಪೈರಸಿ ವಿರುದ್ಧ ಧ್ವನಿ ಎತ್ತಿದ ಜಗ್ಗೇಶ್; ಕಾರಣ ಏನು?
ಇಂಟರ್​ನ್ಯಾಷನಲ್​ ಟಿ20 ಲೀಗ್​ನಲ್ಲಿ ಹೊಸ ಇತಿಹಾಸ ಬರೆದ ಆಂಡ್ರೀಸ್ ಗೌಸ್
ಇಂಟರ್​ನ್ಯಾಷನಲ್​ ಟಿ20 ಲೀಗ್​ನಲ್ಲಿ ಹೊಸ ಇತಿಹಾಸ ಬರೆದ ಆಂಡ್ರೀಸ್ ಗೌಸ್
ಆನೇಕಲ್: ಸ್ಲೀಪರ್ ಕೋಚ್ ಬಸ್​ಗಳ ನಡುವೆ ಭೀಕರ ಅಪಘಾತ
ಆನೇಕಲ್: ಸ್ಲೀಪರ್ ಕೋಚ್ ಬಸ್​ಗಳ ನಡುವೆ ಭೀಕರ ಅಪಘಾತ
‘ಕ್ಷಣ ಕ್ಷಣಕ್ಕೂ ಕೊಡ್ತೀವಿ, ತಗೋತಾ ಇರ್ಬೇಕು’; ಗಿಲ್ಲಿಗೆ ಅಶ್ವಿನಿ ಚಾಲೆಂಜ್
‘ಕ್ಷಣ ಕ್ಷಣಕ್ಕೂ ಕೊಡ್ತೀವಿ, ತಗೋತಾ ಇರ್ಬೇಕು’; ಗಿಲ್ಲಿಗೆ ಅಶ್ವಿನಿ ಚಾಲೆಂಜ್
ಕಾರ್ಮಿಕರ ಹೊತ್ತೊಯ್ಯುತ್ತಿದ್ದ 2 ಲೋಕೊ ರೈಲುಗಳು ಡಿಕ್ಕಿ, 60 ಜನರಿಗೆ ಗಾಯ
ಕಾರ್ಮಿಕರ ಹೊತ್ತೊಯ್ಯುತ್ತಿದ್ದ 2 ಲೋಕೊ ರೈಲುಗಳು ಡಿಕ್ಕಿ, 60 ಜನರಿಗೆ ಗಾಯ
ಮೊಬೈಲ್ ಅಂಗಡಿ ಮಾಲೀಕನ ಗಮನ ಬೇರೆಡೆ ಸೆಳೆದು ಹಣ ಕದ್ದ ಮಹಿಳೆ
ಮೊಬೈಲ್ ಅಂಗಡಿ ಮಾಲೀಕನ ಗಮನ ಬೇರೆಡೆ ಸೆಳೆದು ಹಣ ಕದ್ದ ಮಹಿಳೆ
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಭಾರಿ ಬಂದೋಬಸ್ತ್, ಎಲ್ಲೆಡೆ ಖಾಕಿ ಕಣ್ಣು
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಭಾರಿ ಬಂದೋಬಸ್ತ್, ಎಲ್ಲೆಡೆ ಖಾಕಿ ಕಣ್ಣು